ರಣವೀರ್ ಸಿಂಗ್​ಗೆ ಗಂಡು ಮಗು ಬೇಕೋ ಅಥವಾ ಹೆಣ್ಣು ಮಗು? ನಟನ ಉತ್ತರ ಏನು?

ದೀಪಿಕಾ ಪಡುಕೋಣೆ ಅವರು 2024ರ ಸೆಪ್ಟೆಂಬರ್​ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಫೆಬ್ರವರಿಯಲ್ಲಿ ಅವರು ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ. ರಣವೀರ್ ಮಗುವಿನ ಬಗ್ಗೆ ಹೇಳಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರ ಗಂಡು ಮಗು ಬೇಕೆ ಅಥವಾ ಹೆಣ್ಣು ಮಗುವೇ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದರು.  

ರಣವೀರ್ ಸಿಂಗ್​ಗೆ ಗಂಡು ಮಗು ಬೇಕೋ ಅಥವಾ ಹೆಣ್ಣು ಮಗು? ನಟನ ಉತ್ತರ ಏನು?
ರಣವೀರ್​-ದೀಪಿಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 08, 2024 | 8:47 AM

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಪಾಲಕರಾಗುತ್ತಿರುವ ಖುಷಿಯಲ್ಲಿದ್ದಾರೆ. ದೀಪಿಕಾ ಪಡುಕೋಣೆ ಅವರು 2024ರ ಸೆಪ್ಟೆಂಬರ್​ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಫೆಬ್ರವರಿಯಲ್ಲಿ ಅವರು ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ. ಮದುವೆ ಆಗಿ ಹಲವು ವರ್ಷಗಳ ಬಳಿಕ ಅವರು ಫ್ಯಾನ್ಸ್​ಗೆ ಸಿಹಿಸುದ್ದಿ ನೋಡಿದ್ದಾರೆ. ಆಗಾಗ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಈಗ ರಣವೀರ್ ಮಗುವಿನ ಬಗ್ಗೆ ಹೇಳಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರ ಗಂಡು ಮಗು ಬೇಕೆ ಅಥವಾ ಹೆಣ್ಣು ಮಗುವೇ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದರು.

ರಣವೀರ್ ಸಿಂಗ್ ಅವರು ‘ಜಯೇಶ್​ಭಾಯ್ ಜೋರ್ದಾರ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಪ್ರಮೋಷನ್ ವೇಳೆ ಅವರಿಗೆ ಗಂಡು ಮಗು ಬೇಕೆ ಅಥವಾ ಹೆಣ್ಣು ಮಗುವೇ ಎಂದು ಕೇಳಲಾಯಿತು. ಆ ಬಗ್ಗೆ ರಣವೀರ್ ಸಿಂಗ್ ಮಾತನಾಡಿದ್ದರು. ‘ಅದು ನನ್ನ ಆಯ್ಕೆ ಅಲ್ಲ’ ಎಂದಿದ್ದಾರೆ. ಅಂದರೆ ಅದು ನನ್ನ ಕೈಯಲ್ಲಿ ಇಲ್ಲ ಎಂದಿದ್ದಾರೆ.

ಮತ್ತೊಂದು ಸಂದರ್ಶನದಲ್ಲಿ ಅವರು ಹೆಣ್ಣು ಮಗು ಬೇಕು ಎಂದಿದ್ದರು. ‘ದೀಪಿಕಾ ರೀತಿಯ ಹೆಣ್ಣು ಮಗಳು ನನಗೆ ಬೇಕು’ ಎಂದು ರಣವೀರ್ ಹೇಳಿದ್ದರು. ರಣವೀರ್ ಸಿಂಗ್ ಅವರು ದೀಪಿಕಾನ ಅತಿಯಾಗಿ ಪ್ರೀತಿಸುತ್ತಾರೆ. ಸಾರ್ವಜನಿಕವಾಗಿ ಇದನ್ನು ಅವರು ತೋರಿಸುತ್ತಾರೆ. ‘ಕಾಫಿ ವಿತ್ ಕರಣ್’ ಶೋನಲ್ಲಿ ರಣವೀರ್ ಹಾಗೂ ದೀಪಿಕಾ ಕಿತ್ತಾಡಿಕೊಂಡಿದ್ದರು. ಇದರಿಂದ ಅವರು ಬೇರೆ ಆಗುತ್ತಾರೆ ಎನ್ನಲಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪೈಕಿ ಶ್ರೀಮಂತರು ಯಾರು? ಇಲ್ಲಿದೆ ಅಚ್ಚರಿಯ ವಿಚಾರ

ದೀಪಿಕಾ ಪಡುಕೋಣೆ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ. ದೇವ ಕಲ್ಕಿಯನ್ನು ಗರ್ಭದಲ್ಲಿ ಇರಿಸಿಕೊಳ್ಳುವ ತಾಯಿ ಆಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಅವರು ರೋಹಿತ್ ಶೆಟ್ಟಿ ನಟನೆಯ ‘ಸಿಂಗಂ ಅಗೇನ್’ ಇನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಕೂಡ ನಟಿಸುತ್ತಿದ್ದರೆ ಅನ್ನೋದು ವಿಶೇಷ. ರಣವೀರ್ ಸಿಂಗ್ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘ಡಾನ್ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಡಾನ್’ ಸರಣಿಯಲ್ಲಿ ಇಷ್ಟು ವರ್ಷ ಶಾರುಖ್ ಖಾನ್ ನಟಿಸಿದ್ದರು. ಈಗ ಆ ಸ್ಥಾನವನ್ನು ರಣವೀರ್ ತುಂಬುತ್ತಿದ್ದಾರೆ. ಹೀಗಾಗಿ ಅವರಿಗೆ ಹೆಚ್ಚು ಚಾಲೆಂಜ್ ಇದೆ. ‘ಶಕ್ತಿಮಾನ್’ ಸಿನಿಮಾ ಕೂಡ ಅವರ ಕೈಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ