AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ 2898 ಎಡಿ’ ಚಿತ್ರಕ್ಕೆ ಬಂಗಾರದ ಬೆಳೆ; ಆದರೂ ನಿರ್ಮಾಪಕರಿಗಾಗಿಲ್ಲ ಲಾಭ?

‘ಕಲ್ಕಿ 2898 ಎಡಿ’ ಚಿತ್ರ ತೆಲುಗು ಜೊತೆಗೆ, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಎರಡನೇ ಭಾನುವಾರ ಈ ಸಿನಿಮಾ ಭಾರತದಲ್ಲಿ 41 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 506.87 ಕೋಟಿ ರೂಪಾಯಿ ಆಗಿದೆ.

‘ಕಲ್ಕಿ 2898 ಎಡಿ’ ಚಿತ್ರಕ್ಕೆ ಬಂಗಾರದ ಬೆಳೆ; ಆದರೂ ನಿರ್ಮಾಪಕರಿಗಾಗಿಲ್ಲ ಲಾಭ?
ಕಲ್ಕಿ 2898 ಎಡಿ ತಂಡ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 08, 2024 | 9:20 AM

Share

‘ಕಲ್ಕಿ 2898 ಎಡಿ’ ಸಿನಿಮಾ ಎರಡನೇ ವಾರವೂ ಒಳ್ಳೆಯ ಗಳಿಕೆ ಮಾಡಿದೆ. ಸೈಂಟಿಫಿಕ್ ಫಿಕ್ಷನ್ ಶೈಲಿಯಲ್ಲಿ ಮೂಡಿ ಬಂದಿರೋ ‘ಕಲ್ಕಿ 2898 ಎಡಿ’ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕೇವಲ 11 ದಿನಕ್ಕೆ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಎರಡನೇ ಭಾನುವಾರ (ಜುಲೈ 7) ಈ ಸಿನಿಮಾ ಭಾರತದಲ್ಲಿ 41 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 506.87 ಕೋಟಿ ರೂಪಾಯಿ ಆಗಿದೆ. ಶೀಘ್ರವೇ ಈ ಚಿತ್ರ ‘ಬಾಹುಬಲಿ 2’, ‘ಪಠಾಣ್’ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕುವ ಸಾಧ್ಯತೆ ಇದೆ.  ಎರಡನೇ ವೀಕೆಂಡ್​​ನಲ್ಲೂ ಸಿನಿಮಾ ಇಷ್ಟೊಂದು ಉತ್ತಮ ಗಳಿಕೆ ಮಾಡಿರೋದು ವಿಶೇಷ.

ಕಲ್ಕಿ ವಿಶ್ವ ಬಾಕ್ಸ್ ಆಫೀಸ್​ನಲ್ಲೂ ಮಿಂಚುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ಕಡೆಗಳಲ್ಲಿ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರ ವಿಶ್ವಾದ್ಯಂತ 800 ಕೋಟಿ ರೂಪಾಯಿ ಗಳಿಸಿದೆ. ಶೀಘ್ರವೇ ಚಿತ್ರ 1000 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಿನಿಮಾದ ಕಥೆ ಏನು?

ಮಹಾಭಾರತ ಯುದ್ಧ ಪೂರ್ಣಗೊಂಡ ಬಳಿಕದಿಂದ ‘ಕಲ್ಕಿ 2898 ಎಡಿ’ ಚಿತ್ರ ಪ್ರಾರಂಭ ಆಗುತ್ತದೆ. ಅಶ್ವತ್ಥಾಮನಿಗೆ ಕೃಷ್ಣ ಶಾಪ ನೀಡುತ್ತಾನೆ. ಜೊತೆಗೆ ವಿಷ್ಣುವಿನ ಕೊನೆಯ ಅವತಾರ ಕಲ್ಕಿಯು ಕಲಿಯುಗದ ಕೊನೆಯಲ್ಲಿ ಜನಿಸುತ್ತಾನೆ ಮತ್ತು ಆತನ ರಕ್ಷಣೆ ನಿನ್ನದು ಎಂದು ಆತನಿಗೆ ವಿಶೇಷ ಜವಾಬ್ದಾರಿಯನ್ನು ನೀಡುತ್ತಾನೆ ಕೃಷ್ಣ. ನಂತರ ಕಥೆ ತೆರೆದುಕೊಳ್ಳೋದು ಕ್ರಿಸ್ತಶಕ 2898 ಎಡಿಯಲ್ಲಿ. ಭೂಮಿ ಸಂಪೂರ್ಣವಾಗಿ ನಾಶವಾಗುವ ಹಂತಕ್ಕೆ ಬಂದಿರುತ್ತದೆ. ಈ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್​ಗೆ ಇಲ್ಲ ಹೆಚ್ಚು ಸ್ಕ್ರೀನ್​ಸ್ಪೇಸ್​; ನಟನಿಗೆ ಬೇಸರ?

ಸೀಕ್ವೆಲ್

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ಯ ಎರಡನೇ ಪಾರ್ಟ್​ನಲ್ಲಿ ಪ್ರಮುಖ ವಿಲನ್ ಎನಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾಗೆ ಶೇ. 20 ಶೂಟಿಂಗ್ ಪೂರ್ಣಗೊಂಡಿದೆ ಎಂದು ನಾಗ್ ಅಶ್ವಿನ್ ಅವರು ಈ ಮೊದಲು ಮಾಹಿತಿ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Mon, 8 July 24

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ