AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್​ಗೆ ಇಲ್ಲ ಹೆಚ್ಚು ಸ್ಕ್ರೀನ್​ಸ್ಪೇಸ್​; ನಟನಿಗೆ ಬೇಸರ?

‘ನಾವು ಆ ರೀತಿಯ ವಿಚಾರಗಳನ್ನು ಚರ್ಚೆ ಮಾಡಿಯೇ ಇಲ್ಲ. ಈ ರೀತಿಯ ವಿಚಾರಗಳ ಬಗ್ಗೆ ಪ್ರಭಾಸ್ ಗಮನ ಹರಿಸುವುದಿಲ್ಲ. ಅವರು ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಒಮ್ಮೆ ಕಥೆ ಓಕೆ ಆದರೆ ಅವರು ಸಂಪೂರ್ಣವಾಗಿ ಬೆಂಬಲ ನೀಡುತ್ತಾರೆ’ ಎಂದಿದ್ದಾರೆ ನಿರ್ದೇಶಕ ನಾಗ್ ಅಶ್ವಿನ್.

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್​ಗೆ ಇಲ್ಲ ಹೆಚ್ಚು ಸ್ಕ್ರೀನ್​ಸ್ಪೇಸ್​; ನಟನಿಗೆ ಬೇಸರ?
ಪ್ರಭಾಸ್​
ರಾಜೇಶ್ ದುಗ್ಗುಮನೆ
|

Updated on: Jul 06, 2024 | 7:00 AM

Share

‘ಕಲ್ಕಿ 2898 ಎಡಿ’ ಸಿನಿಮಾ ಯಶಸ್ಸು ಕಂಡಿದೆ. ರಿಲೀಸ್ ಆದ 8 ದಿನಗಳಲ್ಲಿ ಸಿನಿಮಾದ ಗಳಿಕೆ 700 ಕೋಟಿ ರೂಪಾಯಿ ಆಗಿದೆ. ಇದು ಪ್ರಭಾಸ್ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಆದರೆ, ಈ ಮಧ್ಯೆ ಕೆಲವರು ಪ್ರಭಾಸ್ ಸ್ಕ್ರೀನ್​ಸ್ಪೇಸ್ ಬಗ್ಗೆ ತಕರಾರು ತೆಗೆದಿದ್ದಾರೆ. ಅವರು ತೆರೆಮೇಲೆ ಕಾಣೋದು 30 ನಿಮಿಷ ಮಾತ್ರ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ಪ್ರಭಾಸ್​ಗೆ ಅಸಮಾಧಾನ ಇದೆಯಾ? ಈ ಬಗ್ಗೆ ನಾಗ್ ಅಶ್ವಿನ್ ಮಾತನಾಡಿದ್ದಾರೆ. ಪ್ರಭಾಸ್ ಅವರು ಈ ರೀತಿಯ ವಿಚಾರಗಳ ಬಗ್ಗೆ ಗಮನ ನೀಡಲ್ಲ ಎಂದಿದ್ದಾರೆ.

‘ನಾವು ಆ ರೀತಿಯ ವಿಚಾರಗಳನ್ನು ಚರ್ಚೆ ಮಾಡಿಯೇ ಇಲ್ಲ. ಈ ರೀತಿಯ ವಿಚಾರಗಳ ಬಗ್ಗೆ ಪ್ರಭಾಸ್ ಗಮನ ಹರಿಸುವುದಿಲ್ಲ. ಅವರು ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಒಮ್ಮೆ ಕಥೆ ಓಕೆ ಆದರೆ ಅವರು ಸಂಪೂರ್ಣವಾಗಿ ಬೆಂಬಲ ನೀಡುತ್ತಾರೆ’ ಎಂದಿದ್ದಾರೆ ನಾಗ್ ಅಶ್ವಿನ್. ಈ ಮೂಲಕ ಸಿನಿಮಾ ಬಗ್ಗೆ ಅವರಿಗೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ.

‘ಒಂದು ಹೀರೋ ಮತ್ತೊಂದು ಹೀರೋಗೆ ಹೊಡೆಯೋದು ನಿಜಕ್ಕೂ ದೊಡ್ಡ ವಿಷಯ. ಈ ನಟರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಆದಾಗ್ಯೂ ಪ್ರಭಾಸ್​ಗೆ ಇದೆಲ್ಲ ಸಮಸ್ಯೆ ಅನಿಸಲಿಲ್ಲ. ಅಮಿತಾಭ್ ಬಚ್ಚನ್ ಹೊಡೆಯಲಿ ಎಂದು ಪ್ರಭಾಸ್ ಬಯಸುತ್ತಿದ್ದರು’ ಎಂಬುದು ನಾಗ್ ಅಶ್ವಿನ್ ಮಾತು. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಹಾಗೂ ಅಮಿತಾಭ್ ಬಚ್ಚನ್ ಮಧ್ಯೆ ಹೊಡೆದಾಟದ ದೃಶ್ಯಗಳು ಬರುತ್ತವೆ. ಇದರಲ್ಲಿ ಪ್ರಭಾಸ್ ಸರಿಯಾಗಿ ಹೊಡೆತ ತಿನ್ನುತ್ತಾರೆ.

ಇದನ್ನೂ ಓದಿ: 8 ದಿನಕ್ಕೆ 774 ಕೋಟಿ ರೂಪಾಯಿ ಗಳಿಸಿದ ‘ಕಲ್ಕಿ 2898 ಎಡಿ’; 2ನೇ ವಾರವೂ ಅಬ್ಬರ

‘ಕಲ್ಕಿ 2898 ಎಡಿ’ ಚಿತ್ರದ ಎರಡನೇ ಭಾಗಕ್ಕೆ ಈಗಾಗಲೇ 20-30 ದಿನಗಳ ಶೂಟಿಂಗ್ ಪೂರ್ಣಗೊಂಡಿದೆ. ಇನ್ನೂ ಹಲವು ದಿನಗಳ ಶೂಟಿಂಗ್ ಬಾಕಿ ಇದೆ. ಕಮಲ್ ಹಾಸನ್ ಅವರು ಕೆಲವೇ ನಿಮಿಷ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಬರುತ್ತಾರೆ. ಸುಪ್ರೀಮ್ ಯಾಸ್ಕಿನ್ ಹೆಸರಿನ ಪಾತ್ರ ಮಾಡಿದ್ದಾರೆ. ಸೀಕ್ವೆಲ್​ನಲ್ಲಿ ಅವರ ಪಾತ್ರವೇ ಹೆಚ್ಚು ಹೈಲೈಟ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ