ರೇಣುಕಾ ಸ್ವಾಮಿ ಕೊಲೆಯಾದ ದಿನ ಅದೇ ಶೆಡ್ಗೆ ಬಂದಿದ್ದ ಎಂಎಲ್ಎ ಆಪ್ತ; ಯಾರವನು?
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿವೆ. ಹಲವು ದಿನಗಳಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದ ಒಂದು ವಿಚಾರಕ್ಕೆ ಉತ್ತರ ಕೂಡ ಸಿಕ್ಕಿದೆ. ರೇಣುಕಾ ಸ್ವಾಮಿಯ ಕೊಲೆ ನಡೆದ ದಿನವೇ ಶಾಸಕರೊಬ್ಬರಿಗೆ ಆಪ್ತನಾದ ವ್ಯಕ್ತಿ ಕೂಡ ಪಟ್ಟಣಗೆರೆ ಶೆಡ್ಗೆ ಬಂದಿದ್ದ ಎಂಬುದು ಖುಚಿತವಾಗಿದೆ. ಆತನ ಬಗ್ಗೆ ಇಲ್ಲಿದೆ ಮಾಹಿತಿ..
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿವರಗಳು ನಿಜಕ್ಕೂ ಶಾಕಿಂಗ್ ಆಗಿವೆ. ನಟ ದರ್ಶನ್ ಅವರು ಈ ಕೇಸ್ನಲ್ಲಿ ಎ2 ಆಗಿದ್ದಾರೆ. ಪವಿತ್ರಾ ಗೌಡ ಎ1 ಆಗಿದ್ದು, ಈಗಾಗಲೇ 19 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ಮುಂದುವರಿದಂತೆಲ್ಲ ಇನ್ನೂ ಅನೇಕರ ಹೆಸರುಗಳು ಹೊರಬರುತ್ತಿವೆ. ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿ ಹತ್ಯೆ ನಡೆದಿತ್ತು. ಆ ಘಟನೆ ನಡೆದ ಬಳಿಕ ಅಲ್ಲಿಗೆ ಹಲವರು ಭೇಟಿ ನೀಡಿದ್ದರು. ಅವರ ಪೈಕಿ ಕಾರ್ತಿಕ್ ಪುರೋಹಿತ್ ಕೂಡ ಇದ್ದಾನೆ. ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಕಚೇರಿಯಲ್ಲಿ ಕೆಲಸ ಮಾಡುವ ಈತ ಶೆಡ್ಗೆ ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈತನ ಕಾರಿನಲ್ಲೇ ಪ್ರದೋಶ್ ಎಂಬಾತ ಹಣ ತಂದು ಈ ಕೇಸ್ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದ ಎಂಬ ಮಾಹಿತಿ ಇದೆ. ಕಾರ್ತಿಕ್ ಪುರೋಹಿತ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಸಂಬಂಧಪಟ್ಟಂತೆ ಕಾರ್ತಿಕ್ ಪುರೋಹಿತ್ ನೀಡುವ ಹೇಳಿಕೆನಿಂದ ಇನ್ನಷ್ಟು ಸಾಕ್ಷಿಗಳು ಸಿಗಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.