ದರ್ಶನ್ ಬಳಸುವ ಮೊಬೈಲ್ ನಂಬರ್ ಬಗ್ಗೆ ಶಾಕಿಂಗ್ ವಿಚಾರ ಬಹಿರಂಗ; ವಿಡಿಯೋ ನೋಡಿ
ಪವಿತ್ರಾ ಗೌಡ, ದರ್ಶನ್ ಹಾಗೂ ಸಹಚರರು ಮಾಡಿದ ಕೃತ್ಯದ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇವರೆಲ್ಲ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತನಿಖೆ ಮುಂದುವರಿದಂತೆಲ್ಲ ಶಾಕಿಂಗ್ ವಿಚಾರಗಳು ಹೊರಬರುತ್ತಿವೆ. ದರ್ಶನ್ ಬಳಸುವ ಮೊಬೈಲ್ ನಂಬರ್ ಬಗ್ಗೆ ಅಚ್ಚರಿಯ ಮಾಹಿತಿ ಲಭ್ಯವಾಗಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ..
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಜೈಲು ವಾಸ ಅನುಭವಿಸುತ್ತಿದ್ದಾರೆ. ಅವರ ಜೊತೆ ಪವಿತ್ರಾ ಗೌಡ ಹಾಗೂ ಇನ್ನಿತರ ಆರೋಪಿಗಳನ್ನೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ರೇಣುಕಾ ಸ್ವಾಮಿ ಕೊಲೆ ಆರೋಪ ಹೊತ್ತಿರುವ ಎಲ್ಲ ವ್ಯಕ್ತಿಗಳ ಬಗ್ಗೆ ವಿಚಾರಣೆ ತೀವ್ರಗೊಂಡಿದೆ. ಆರೋಪಿಗಳ ಮೊಬೈಲ್ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಪ್ರಮುಖ 7 ಆರೋಪಿಗಳು ಬೇರೆ ವ್ಯಕ್ತಿಗಳ ಹಸರಿನಲ್ಲಿ ಮೊಬೈಲ್ ನಂಬರ್ ತೆಗೆದುಕೊಂಡಿದ್ದರು. ದರ್ಶನ್ ಬಳಸುವ 8050587999 ಸಂಖ್ಯೆಯು ಪ್ರಕಾಶ್ ನಗರದ ಸಿ.ಪಿ. ಹೇಮಂತ್ ಎಂಬುವವರ ಹೆಸರಿನಲ್ಲಿ ತೆಗೆದುಕೊಂಡಿರುವುದು. ಪವಿತ್ರಾ ಗೌಡ ಬಳಸುವ 6366697999 ಸಂಖ್ಯೆಯು ಬಸವೇಶ್ವರ ನಗರದ ಮನೋಜ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಪಡೆಯಲಾಗಿದೆ. ಈ ಮಾಹಿತಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ್ದಾರೆ. ತಾವು ಮಾಡುವ ಕೃತ್ಯ ಬೆಳಕಿಗೆ ಬರಬಾರದು ಎಂಬ ಕಾರಣಕ್ಕೆ ಈ ರೀತಿ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಇರುವ ಸಿಮ್ಗಳ ಬಳಕೆ ಮಾಡುತ್ತಿದ್ರಾ ಎಂಬ ಅನುಮಾನ ಮೂಡಿದೆ. ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.