ವಿವಾದಗಳ ಕಿಂಗ್ ರಣವೀರ್ ಸಿಂಗ್; ಮಾಡಿಕೊಂಡ ಎಡವಟ್ಟುಗಳು ಒಂದೆರಡಲ್ಲ
ರಣವೀರ್ ಸಿಂಗ್ ಅವರಿಗೆ ಇಂದು (ಜುಲೈ 6) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಅವರು ಹಲವು ವಿವಾದ ಮಾಡಿಕೊಳ್ಳುತ್ತಾರೆ. ಅವರು ಮಾಡಿಕೊಂಡ ಕೆಲವು ವಿವಾದಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಣವೀರ್ ಸಿಂಗ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಇದರ ಜೊತೆಗೆ ಅವರು ವಿವಾದಗಳ ಮೂಲಕವೂ ಆಗಾಗ ಸುದ್ದಿ ಆಗುತ್ತಾರೆ. ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಅವರಿಗೆ ಇಂದು (ಜುಲೈ 6) ಜನ್ಮದಿನ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯ ಬರುತ್ತಿವೆ. ಈ ಮಧ್ಯೆ ಕೆಲವರು ಅವರು ಮಾಡಿಕೊಂಡ ವಿವಾದಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರು ಮಾಡಿಕೊಂಡ ಕೆಲವು ವಿವಾದಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಣವೀರ್-ಅನುಷ್ಕಾ ವಿವಾದ
ರಣವೀರ್ ಸಿಂಗ್ ಅವರು 2010ರಲ್ಲಿ ರಿಲೀಸ್ ಆದ ‘ಬ್ಯಾಂಡ್ ಬಾಜಾ ಬಾರಾತ್’ ಸಿನಿಮಾದಲ್ಲಿ ಅನುಷ್ಕಾ ಜೊತೆ ನಟಿಸಿದರು. ಅನುಷ್ಕಾ ಬಗ್ಗೆ ಅವರು ಅಶ್ಲೀಲ ಕಮೆಂಟ್ ಮಾಡಿದ್ದರು. ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗಿ ಆಗಿದ್ದರು. ಈ ವೇಳೆ ‘ನಾನು ನಿಮ್ಮ ಬ್ಯಾಕ್ನ ಪಿಂಚ್ ಮಾಡಬಹುದೇ’ ಎಂದಿದ್ದರು. ಇದನ್ನು ಅನೇಕರು ಟೀಕಿಸಿದ್ದರು. ಸ್ವತಃ ಅನುಷ್ಕಾಗೂ ಇದು ಮುಜುಗರ ತಂದಿತ್ತು.
ರಣವೀರ್-ಪ್ರಿಯಾಂಕಾ
ರಣವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ ‘ಗುಂಡೇ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದ ಪ್ರಮೋಷನ್ ವೇಳೆ ಪ್ರಿಯಾಂಕಾಗೆ ಕಿಸ್ ಮಾಡಲು ರಣವೀರ್ ಪ್ರಯತ್ನಿಸಿದ್ದರು. ಇದರಿಂದ ಪ್ರಿಯಾಂಕಾ ಸಿಟ್ಟಾದರು. ಆ ಬಳಿಕ ಪ್ರಿಯಾಂಕಾ ಜೊತೆ ಕೆಲಸ ಮಾಡಲ್ಲ ಎಂದು ಶಪತ ಮಾಡಿದರು.
ಎಕ್ ಥಾ ಟೈಗರ್ ವಿವಾದ
2012ರಲ್ಲಿ ಸಲ್ಮಾನ್ ಖಾನ್ ನಟನೆಯ ‘ಏಕ್ ಥಾ ಟೈಗರ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ರಣವೀರ್ ಅವರು ಬೋರಿಂಗ್ ಎಂದು ಕರೆದಿದ್ದರು. ಇದರಿಂದ ಸಲ್ಲು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು.
ಎಐಬಿ ವಿವಾದ
2014ರಲ್ಲಿ ರಣವೀರ್ ಸಿಂಗ್, ಅರ್ಜುನ್ ಕಪೂರ್, ಕರಣ್ ಜೋಹರ್ ಅವರು ಕಾಮಿಡಿ ಗ್ರೂಪ್ ಎಐಬಿ ಈವೆಂಟ್ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅಶ್ಲೀಲ ಪದಗಳ ಬಳಕೆ ಹಾಗೂ ಸನ್ನೆ ಮಾಡಲಾಗಿತ್ತು. ಇದರಿಂದ ರಣವೀರ್ ವಿವಾದ ಮಾಡಿಕೊಂಡರು. ಕರಣ್ ಗೇ ಎಂಬರ್ಥದಲ್ಲಿ ರಣವೀರ್ ಮಾತನಾಡಿದ್ದರು. ಇದನ್ನು ಕೇಳಿ ಕರಣ್ ಕೂಡ ಖುಷಿಯಿಂದ ನಕ್ಕಿದ್ದರು.
ಇದನ್ನೂ ಓದಿ: ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪೈಕಿ ಶ್ರೀಮಂತರು ಯಾರು? ಇಲ್ಲಿದೆ ಅಚ್ಚರಿಯ ವಿಚಾರ
ಪದ್ಮಾವತ್ ವಿವಾದ
‘ಪದ್ಮಾವತ್’ ಚಿತ್ರಕ್ಕೆ ಮೊದಲು ‘ಪದ್ಮಾವತಿ’ ಎನ್ನುವ ಶೀರ್ಷಿಕೆ ಇಡಲಾಗಿತ್ತು. ಈ ಸಿನಿಮಾ ಬಗ್ಗೆ ಕರಣಿ ಸೇನಾದವರು ಅಪಸ್ವರ ತೆಗೆದಿದ್ದರು. ಆ ಬಳಿಕ ಚಿತ್ರದ ಶೀರ್ಷಿಕೆ ಬದಲಾಯಿಸಲಾಯಿತು.
ಜಾಹೀರಾತು
ಇತ್ತೀಚೆಗೆ ರಣವೀರ್ ಸಿಂಗ್ ಅವರು ಪೋರ್ನ್ ಸ್ಟಾರ್ ಜಾನಿ ಸಿನ್ಸ್ ಜೊತೆ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಅನೇಕರು ಟೀಕೆ ಮಾಡಿದ್ದರು.
ಬೆತ್ತಲೆ ಶೂಟ್
2022ರಲ್ಲಿ ರಣವೀರ್ ಸಿಂಗ್ ಮ್ಯಾಗಜಿನ್ ಒಂದರ ಶೂಟ್ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಬೆತ್ತಲಾಗಿ ಪೋಸ್ ಕೊಟ್ಟಿದ್ದರು. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.