ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪೈಕಿ ಶ್ರೀಮಂತರು ಯಾರು? ಇಲ್ಲಿದೆ ಅಚ್ಚರಿಯ ವಿಚಾರ

ರಣವೀರ್ ಸಿಂಗ್ ಅವರು 1985ರ ಜುಲೈ 6ರಂದು ಮುಂಬೈನಲ್ಲಿ ಜನಿಸಿದರು. ಅವರದ್ದು ಸಿಂಧಿ ಕುಟುಂಬ. ಅಂಜು ಹಾಗೂ ಜಗಿತ್ ಸಿಂಗ್ ಭವಾನಿ ದಂಪತಿಯ ಮಗನಾಗಿ ರಣವೀರ್ ಜನಿಸಿದರು. ರಣವೀರ್ ತಾತ ಕರಾಚಿ ಮೂಲದವರು. ಪಾಕಿಸ್ತಾನ ಹಾಗೂ ಭಾರತ ಬೇರೆ ಆಗುವಾಗ ಅವರು ಮುಂಬೈಗೆ ಶಿಫ್ಟ್ ಆದರು. ಕಪೂರ್ ಕುಟುಂಬಕ್ಕೂ ರಣವೀರ್ ಕುಟುಂಬಕ್ಕೂ ಸಂಬಂಧ ಇದೆ.

ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪೈಕಿ ಶ್ರೀಮಂತರು ಯಾರು? ಇಲ್ಲಿದೆ ಅಚ್ಚರಿಯ ವಿಚಾರ
ರಣವೀರ್-ದೀಪಿಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jul 06, 2024 | 8:47 AM

ರಣವೀರ್ ಸಿಂಗ್ ಅವರಿಗೆ ಇಂದು (ಜುಲೈ 6) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ದೀಪಿಕಾ ಪಡುಕೋಣೆ ಪ್ರೆಗ್ನೆಂಟ್. ಹೀಗಾಗಿ, ರಣವೀರ್-ದೀಪಿಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಮೋಸ್ಟ್ ಸ್ಟೈಲಿಶ್ ದಂಪತಿ ಎಂಬ ಖ್ಯಾತಿ ಕೂಡ ಈ ಜೋಡಿಗೆ ಇದೆ. ದೀಪಿಕಾ-ರಣವೀರ್ ಸಿಂಗ್ ದಂಪತಿಯಲ್ಲಿ ದೀಪಿಕಾ ಹೆಚ್ಚು ಶ್ರೀಮಂತ ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ. ಹೌದು, ರಣವೀರ್​ಗಿಂತ ದೀಪಿಕಾ ಹೆಚ್ಚು ಆಸ್ತಿ ಹೊಂದಿದ್ದಾರೆ. ರಣವೀರ್​ಗಿಂತ ಹೆಚ್ಚಿನ ಯಶಸ್ಸು ದೀಪಿಕಾಗೆ ಸಿಕ್ಕಿದೆ.

ರಣವೀರ್ ಸಿಂಗ್ ಅವರು 1985ರ ಜುಲೈ 6ರಂದು ಮುಂಬೈನಲ್ಲಿ ಜನಿಸಿದರು. ಅವರದ್ದು ಸಿಂಧಿ ಕುಟುಂಬ. ಅಂಜು ಹಾಗೂ ಜಗಿತ್ ಸಿಂಗ್ ಭವಾನಿ ದಂಪತಿಯ ಮಗನಾಗಿ ರಣವೀರ್ ಜನಿಸಿದರು. ರಣವೀರ್ ತಾತ ಕರಾಚಿ ಮೂಲದವರು. ಪಾಕಿಸ್ತಾನ ಹಾಗೂ ಭಾರತ ಬೇರೆ ಆಗುವಾಗ ಅವರು ಮುಂಬೈಗೆ ಶಿಫ್ಟ್ ಆದರು. ರಿತಿಕಾ ಭಾವನಾ ಅವರು ರಣವೀರ್ ಸಹೋದರಿ. ಕಪೂರ್ ಕುಟುಂಬಕ್ಕೂ ರಣವೀರ್ ಕುಟುಂಬಕ್ಕೂ ಸಂಬಂಧ ಇದೆ.

ರಣವೀರ್ ಅವರು ಮುಂಬೈನಲ್ಲಿ ಶಿಕ್ಷಣ ಪಡೆದರು. ಆ ಬಳಿಕ ಹೀರೋ ಆಗೋ ಆಸೆ ಬಂತು. ಅವರು ಹಲವು ಜಾಹೀರಾತು ಕಂಪನಿಗಳಲ್ಲಿ ಬರಹಗಾರನಾಗಿ ಕೆಲಸ ಮಾಡಿದರು. 2010ರಲ್ಲಿ ಅವರು ‘ಬ್ಯಾಂಡ್ ಬಜಾ ಬಾರಾತ್’ ಚಿತ್ರಕ್ಕೆ ಆಡಿಷನ್ ನೀಡಿ ಆಯ್ಕೆ ಆದರು. ನಿರ್ಮಾಪಕ ಆದಿತ್ಯ ಚೋಪ್ರಾ ಅವರು ರಣವೀರ್​ನ ಆಯ್ಕೆ ಮಾಡಿದರು. ಬಿಟ್ಟೂ ಶರ್ಮಾ ಹೆಸರಿನ ಪಾತ್ರವನ್ನು ರಣವೀರ್ ಮಾಡಿದರು. ಆ ಬಳಿಕ ಅವರು ಚಿತ್ರರಂಗದಲ್ಲಿ ಗೆಲುವು ಕಂಡರು. ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಮಾಡಿದರು. ಸೆಟ್​ನಲ್ಲೇ ಪ್ರೀತಿ ಆಯಿತು. ದೀಪಿಕಾಗಿಂತ ರಣವೀರ್​ ಒಂದು ವರ್ಷ ಹಿರಿಯವರು.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ‘ಆಲ್​ ಅಬೌಟ್ ಯು’ ಹೆಸರಿನ ಮ್ಯೂಸಿಕ್ ಲೇಬಲ್ ಹೊಂದಿದ್ದಾರೆ. ‘ಕೆಎ ಎಂಟರ್​ಟೇನ್​ಮೆಂಟ್’ ಹೆಸರಿನ ನಿರ್ಮಾಣ ಸಂಸ್ಥೆ ಇದೆ. ಹಲವು ಕಡೆ ದಂಪತಿ ಆಸ್ತಿ ಹೊಂದಿದ್ದಾರೆ. ರಣವೀರ್ ಸಿಂಗ್ ಕಾರಿನ ಬಗ್ಗೆ ಕ್ರೇಜ್ ಹೊಂದಿದ್ದಾರೆ. ರೇಂಜ್ ರೋವರ್, ಆಸ್ಟನ್ ಮಾರ್ಟಿನ್, ಮರ್ಸಿಡೀಸ್ ಜಿಎಲ್​ಎಸ್, ಲ್ಯಾಂಬೋರ್ಗಿನಿ ಉರುಸ್ ಸೇರಿ ಅನೇಕ ಕಾರುಗಳು ಅವರ ಬಳಿ ಇವೆ. ರಣವೀರ್ ಸಿಂಗ್ ಬಳಿಕ ಕೋಟ್ಯಂತರ ರೂಪಾಯಿ ಬೆಲೆ ಬಾಳೋ ವಾಚ್ ಕಲೆಕ್ಷನ್ ಇದೆ.

ರಣವೀರ್ ಸಿಂಗ್ ಹಾಗೂ ದೀಪಿಕಾ ಮುಂಬೈನ ವೋರ್ಲಿಯಲ್ಲಿ 4 ಬಿಎಚ್​ಕೆ ಫ್ಲ್ಯಾಟ್ ಹೊಂದಿದ್ದಾರೆ. ದೀಪಿಕಾ ಅವರು ಇದನ್ನು ಖರೀದಿ ಮಾಡಿದ್ದು, ಅವರ ತಂದೆ ಪಾರ್ಟ್ನರ್​ಶಿಪ್ ಇದಕ್ಕಿದೆ. ಇದರ ಬೆಲೆ 42 ಕೋಟಿ ರೂಪಾಯಿ. ರಣವೀರ್​-ದೀಪಿಕಾ ಬಾಂದ್ರಾದಲ್ಲಿ ಅಪಾರ್ಟ್​ಮೆಂಟ್ ಹೊಂದಿದ್ದು ಅದರ ಬೆಲೆ 119 ಕೋಟಿ ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ: ಮಗು ಜನಿಸಿದ ಬಳಿಕ ಚಿತ್ರರಂಗ ತೊರೆಯಲಿದ್ದಾರೆ ದೀಪಿಕಾ ಪಡುಕೋಣೆ?

ದೀಪಿಕಾ ಪಡುಕೋಣೆ ಒಟ್ಟೂ ಆಸ್ತಿ 500 ಕೋಟಿ ರೂಪಾಯಿ. ಅದೇ ರಣವೀರ್ ಸಿಂಗ್ ಆಸ್ತಿ 300 ಕೋಟಿ ರೂಪಾಯಿ. ಇಬ್ಬರ ಆಸ್ತಿ ಸೇರಿದರೆ 800 ಕೋಟಿ ರೂಪಾಯಿ ಆಗಲಿದೆ. ರಣವೀರ್ ಸಿಂಗ್ ಬಳಿ ‘ಡಾನ್ 3’ ಹಾಗೂ ‘ಸಿಂಗಂ ಅಗೇನ್’ ಚಿತ್ರಗಳು ಇವೆ. ಅವರು ಕೆಲವು ಸಿನಿಮಾಗಳಿಂದ ಹೊರ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:30 am, Sat, 6 July 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ