ಆನಂದ್ ಆಡಿಯೋ ಕೈ ಸೇರಿದ ‘ಭೈರತಿ ರಣಗಲ್’ ಆಡಿಯೋ ಹಕ್ಕು; ಜುಲೈ 12ಕ್ಕೆ ವಿಶೇಷ ಗಿಫ್ಟ್

2017ರಲ್ಲಿ ಬಿಡುಗಡೆ ಆಗಿದ್ದ ‘ಮಫ್ತಿ’ ಸಿನಿಮಾ ಭಾರಿ ಹಿಟ್ ಆಗಿತ್ತು. ಸಿನಿಮಾದಲ್ಲಿ ‘ಭೈರತಿ ರಣಗಲ್’ ಪಾತ್ರದಲ್ಲಿ ಶಿವರಾಜ್ ಕುಮಾರ್ ಮಿಂಚಿದ್ದರು. ಇದೀಗ ಅದೇ ಪಾತ್ರವನ್ನು ಪ್ರಧಾನವಾಗಿ ಇರಿಸಿಕೊಂಡು ‘ಭೈರತಿ ರಣಗಲ್’ ಸಿನಿಮಾ ಮಾಡಲಾಗುತ್ತಿದೆ. ಈಗ ಸಿನಿಮಾದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. ಶಿವರಾಜ್​ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಆನಂದ್ ಆಡಿಯೋ ಕೈ ಸೇರಿದ ‘ಭೈರತಿ ರಣಗಲ್’ ಆಡಿಯೋ ಹಕ್ಕು; ಜುಲೈ 12ಕ್ಕೆ ವಿಶೇಷ ಗಿಫ್ಟ್
ಶಿವಣ್ಣ
Follow us
ರಾಜೇಶ್ ದುಗ್ಗುಮನೆ
|

Updated on: Jul 08, 2024 | 1:00 PM

ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಮೇಲೆ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿ ಮಾಡಿದೆ. ಈ ಚಿತ್ರ ‘ಮಫ್ತಿ’ಯ ಪ್ರೀಕ್ವೆಲ್. ಈ ಚಿತ್ರದ ಪೋಸ್ಟರ್​ಗಳು ಮಾತ್ರ ರಿಲೀಸ್ ಆಗಿವೆ. ಈಗ ಸಿನಿಮಾದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. ಶಿವರಾಜ್​ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಜುಲೈ 12ರಂದು ಮೊದಲ ಝಲಕ್ ನೀಡುವ ಭರವಸೆ ನೀಡಿದ್ದಾರೆ.

‘ಮಫ್ತಿ’ ಸಿನಿಮಾ 2017ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಶಿವಣ್ಣ ಹಾಗೂ ಶ್ರೀಮುರಳಿ ಅವರ ಕಾಂಬಿನೇಷನ್ ಗಮನ ಸೆಳೆಯಿತು. ನರ್ತನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್​ನಲ್ಲಿ ‘ಭೈರತಿ ರಣಗಲ್’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರವನ್ನು ಶಿವಣ್ಣ ಅವರ ಪತ್ನಿ ಗಿತಾ ಶಿವರಾಜ್​ಕುಮಾರ್ ಅವರು ‘ಗೀತಾ ಪಿಕ್ಚರ್ಸ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ಆನಂದ್ ಆಡಿಯೋ ಅವರು ‘ಭೈರತಿ ರಣಗಲ್’ ಹಕ್ಕನ್ನು ಪಡೆದ ಬಗ್ಗೆ ಶಿವಣ್ಣ ಟ್ವೀಟ್ ಮಾಡಿದ್ದಾರೆ. ‘ಆನಂದ್ ಆಡಿಯೋದವರು ಭೈರತಿ ರಣಗಲ್ ಆಡಿಯೋ ಹಕ್ಕನ್ನು ಪಡೆದಿದ್ದಾರೆ. ಜುಲೈ 12ರ ಬೆಳಿಗ್ಗೆ 10:10ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಮೊದಲ ಝಲಕ್ ನೀಡುತ್ತೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊನೆಗೂ ಮುಗಿಯಿತು ‘ಭೈರತಿ ರಣಗಲ್’ ಚಿತ್ರೀಕರಣ, ಬಿಡುಗಡೆ ದಿನಾಂಕ ಬದಲು?

ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪೂರ್ಣಗೊಂಡಿದೆ. ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಈ ಮೊದಲು ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿತ್ತು. ಆದರೆ, ಸಿನಿಮಾದ ಚಿತ್ರೀಕರಣಕ್ಕೆ ತುಸು ಹೆಚ್ಚೇ ಸಮಯವನ್ನು ನಿರ್ದೇಶಕ ನರ್ತನ್ ತೆಗೆದುಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಿಡುಗಡೆ ವಿಳಂಬ ಆಗಲಿದೆ ಎನ್ನಲಾಗುತ್ತಿದೆ. ಗುರುದೇಶಪಾಂಡೆ, ಬಾಬು ಹಿರಣ್ಣಯ್ಯ, ಛಾಯಾ ಸಿಂಗ್ ಇನ್ನೂ ಕೆಲವರು ಈ ಸಿನಿಮಾದಲ್ಲಿಯೂ ಇರಲಿದ್ದಾರೆ. ಇವರ ಜೊತೆಗೆ ರುಕ್ಮಿಣಿ ವಸಂತ್, ರಾಹುಲ್ ಬೋಸ್ ಇನ್ನಿತರ ಕೆಲವು ಪಾತ್ರಗಳು ಸೇರಿಕೊಂಡಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.