DPL 2025: ಪಂದ್ಯದ ವೇಳೆ ಹೊಡೆದಾಡಿಕೊಳ್ಳುವ ಮಟ್ಟಿಗೆ ಜಗಳ; ಐವರು ಆಟಗಾರರಿಗೆ ದಂಡದ ಬರೆ
Delhi Premier League 2025: 2025ರ ದೆಹಲಿ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯದಲ್ಲಿ ಸೌತ್ ಡೆಲ್ಲಿ ಮತ್ತು ವೆಸ್ಟ್ ಡೆಲ್ಲಿ ತಂಡಗಳ ನಡುವೆ ನಡೆದ ಜಗಳದಿಂದಾಗಿ ಐದು ಆಟಗಾರರಿಗೆ ದಂಡ ವಿಧಿಸಲಾಗಿದೆ. ವೆಸ್ಟ್ ಡೆಲ್ಲಿ ನಾಯಕ ನಿತೀಶ್ ರಾಣಾ ಮತ್ತು ಸೌತ್ ಡೆಲ್ಲಿ ಆಟಗಾರ ದಿಗ್ವೇಶ್ ರಾಠಿ ನಡುವೆ ಘರ್ಷಣೆ ಉಂಟಾಗಿತ್ತು. ನೀತಿ ಸಂಹಿತೆ ಉಲ್ಲಂಘನೆಗಾಗಿ ವಿವಿಧ ಮಟ್ಟದ ದಂಡವನ್ನು ವಿಧಿಸಲಾಗಿದೆ. ಆಟದ ನೈತಿಕತೆಯನ್ನು ಕಾಪಾಡಲು ಡಿಪಿಎಲ್ ಸಮಿತಿ ಎಚ್ಚರಿಕೆ ನೀಡಿದೆ.

2025 ರ ದೆಹಲಿ ಪ್ರೀಮಿಯರ್ ಲೀಗ್ (DPL) ಟಿ20ಯ ಎಲಿಮಿನೇಟರ್ ಪಂದ್ಯದಲ್ಲಿ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಮತ್ತು ವೆಸ್ಟ್ ಡೆಲ್ಲಿ ಲಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ಲಯನ್ಸ್ ತಂಡವು ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಆದಾಗ್ಯೂ, ಈ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಈ ಜಗಳ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಆದರೆ ಇತರ ಆಟಗಾರರು ಮತ್ತು ಅಂಪೈರ್ಗಳ ಉಪಸ್ಥಿತಿಯಿಂದಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ. ಆದಾಗ್ಯೂ ಆಟದ ನಿಯಮವನ್ನು ಉಲ್ಲಂಘಿಸಿದ ಉಭಯ ತಂಡಗಳ ಐವರು ಆಟಗಾರರ ವಿರುದ್ಧ ಇದೀಗ ಕ್ರಮ ಕೈಗೊಳ್ಳಲಾಗಿದ್ದು ದಂಡ ಕೂಡ ವಿಧಿಸಲಾಗಿದೆ.
5 ಆಟಗಾರರಿಗೆ ದಂಡದ ಬರೆ
ದೆಹಲಿ ಪ್ರೀಮಿಯರ್ ಲೀಗ್‌ನ ಈ ಎಲಿಮಿನೇಟರ್ ಪಂದ್ಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದ ಸಮಯದಲ್ಲಿ ವೆಸ್ಟ್ ಡೆಲ್ಲಿ ತಂಡದ ನಾಯಕ ನಿತೀಶ್ ರಾಣಾ ಮತ್ತು ಸೌತ್ ಡೆಲ್ಲಿ ತಂಡದ ಸ್ಪಿನ್ನರ್ ದಿಗ್ವೇಶ್ ರಾಠಿ ನಡುವೆ ಮಾತಿನ ಚಕಮಕಿ ನಡೆಯಿತು. ಈ ಜಗಳ ತಾರಕಕ್ಕೇರಿ ಉಭಯ ಆಟಗಾರರು ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು.
दिल्ली प्रीमियर लीग (DPL) 2025 में वेस्ट दिल्ली लायंस के कप्तान नीतीश राणा ने साउथ दिल्ली सुपरस्टार्ज के खिलाफ 42 गेंदों में शतक ठोक दिया. इस दौरान उन्होंने 15 छक्के लगाए. मैच के बीच में उनकी स्पिनर दिग्वेश राठी से लड़ाई भी हो गई. .#NitishRana #digveshrathi #cricket #DPL2025 pic.twitter.com/GTOdJv7XIW
— Sukhalesh Yadav (@SukhaleshYadav) August 30, 2025
ಈ ಕಾರಣದಿಂದಾಗಿ ದಿಗ್ವೇಶ್ ರಾಠಿ ವಿರುದ್ಧ ಅತ್ಯಂತ ಗಂಭೀರ ಆರೋಪದಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ನೀತಿ ಸಂಹಿತೆಯ ಆರ್ಟಿಕಲ್ 2.2 (ಹಂತ 2) ಅಡಿಯಲ್ಲಿ ಪಂದ್ಯ ಶುಲ್ಕದ 80% ದಂಡ ವಿಧಿಸಲಾಗಿದೆ. ಹಾಗೆಯೇ ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ನಾಯಕ ನಿತೀಶ್ ರಾಣಾಗೂ ಕೂಡ ಆರ್ಟಿಕಲ್ 2.6 (ಲೆವೆಲ್ 1) ಅಡಿಯಲ್ಲಿ ಅಸಭ್ಯ, ಆಕ್ರಮಣಕಾರಿ ಅಥವಾ ಅವಮಾನಕರ ಸನ್ನೆ ಮಾಡಿದ್ದಕ್ಕಾಗಿ ಅವರ ಪಂದ್ಯ ಶುಲ್ಕದ 50% ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
An intense moment in the middle! 🏏
Nitish Rana | Digvesh Singh Rathi | West Delhi Lions | South Delhi Superstarz | #DPL #DPL2025 #AdaniDPL2025 #Delhi pic.twitter.com/dX5E5wFDqd
— Delhi Premier League T20 (@DelhiPLT20) August 29, 2025
ಈ ಆಟಗಾರರಿಗೂ ಶಿಕ್ಷೆ
ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡದ ಮತ್ತೊಬ್ಬ ಆಟಗಾರ ಅಮನ್ ಭಾರ್ತಿ ಅವರಿಗೂ ಆರ್ಟಿಕಲ್ 2.3 (ಹಂತ 1) ಅಡಿಯಲ್ಲಿ ದಂಡ ವಿಧಿಸಲಾಗಿದೆ. ಅವರು ಪಂದ್ಯದ ಸಮಯದಲ್ಲಿ ಆಕ್ರಮಣಕಾರಿ ಭಾಷೆಯನ್ನು ಬಳಸಿದ್ದು, ಅವರ ಪಂದ್ಯ ಶುಲ್ಕದ 30% ಕಡಿತಗೊಳಿಸಲಾಗಿದೆ. ಅದೇ ರೀತಿ ತಂಡದ ಮತ್ತೊಬ್ಬ ಆಟಗಾರ ಸುಮಿತ್ ಮಾಥುರ್ ಅವರಿಗೆ ಆರ್ಟಿಕಲ್ 2.5 (ಹಂತ 1) ಅಡಿಯಲ್ಲಿ ಪಂದ್ಯ ಶುಲ್ಕದ 50% ದಂಡ ವಿಧಿಸಲಾಗಿದೆ.
ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಕ್ರಿಶ್ ಯಾದವ್ಗೆ ಅತಿ ಹೆಚ್ಚು ದಂಡ ವಿಧಿಸಲಾಗಿದ್ದು, ಆರ್ಟಿಕಲ್ 2.3 (ಲೆವೆಲ್ 2) ಅಡಿಯಲ್ಲಿ ಅವರ ಪಂದ್ಯ ಶುಲ್ಕದ 100% ದಂಡ ವಿಧಿಸಲಾಗಿದೆ. ಯಾದವ್ ಎದುರಾಳಿ ತಂಡದ ಆಟಗಾರನನ್ನು ನಿಂದಿಸುವ ಮೂಲಕ ಅನುಚಿತವಾಗಿ ವರ್ತಿಸಿದ್ದು ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಲಾಗಿದೆ. ಈ ಎಲ್ಲಾ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಡಿಪಿಎಲ್ ಸಂಘಟನಾ ಸಮಿತಿ ಕ್ರಮ ಕೈಗೊಂಡಿದ್ದು, ಆಟದ ಘನತೆಯನ್ನು ಕಾಪಾಡಿಕೊಳ್ಳಲು ಆಟಗಾರರಿಗೆ ಎಚ್ಚರಿಕೆ ನೀಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Sat, 30 August 25
