ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಇಲ್ಲಿ ನೀರಿನಂತೆ ಹಣಗಳನ್ನು ಸುರಿಯುತ್ತಾರೆ. ಆರಂಭದಿಂದಲೂ ಕಠಿಣ ನಿಯಮ, ಆಟಗಾರರ ಭದ್ರತೆ ಸೇರಿದಂತೆ ಬಹುತೇಕ ಎಲ್ಲ ವಿಚಾರಗಳಲ್ಲಿ ತನ್ನ ಘನತೆಯನ್ನು ಕಾಪಾಡಿಕೊಂಡು ಬರುತ್ತಿರುವ ಐಪಿಎಲ್ನಲ್ಲಿ ಇದೀಗ ನಾಚಿಕೆಗೇಡಿನ ಘಟನೆಯೊಂದು ಸಂಭವಿಸಿದೆ. ಐಪಿಎಲ್ 2022ರಲ್ಲಿ (IPL 2022) ಗುರುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (CSK vs MI) ನಡುವಣ ಪಂದ್ಯ ಇದಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಧೋನಿ ಪಡೆ ಗೆದ್ದರೆ ಪ್ಲೇ ಆಫ್ ಗೇರುವ ಕೊನೆಯ ಅವಕಾಶವಿತ್ತು. ಹೀಗಾಗಿ ಸಿಎಸ್‌ಕೆ-ಎಂಐ ನಡುವಣ ಕಾದಾಟ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ, ಸಿಎಸ್‌ಕೆ ಯೋಜನೆಯನ್ನೇ ಪವರ್ ಕಟ್ ತಲೆಕೆಳಗಾಗಿಸಿತು ಎಂದರೆ ತಪ್ಪಾಗಲಾರದು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ 10 ಎಸೆತಗಳಲ್ಲಿ ಡಿಆರ್‌ಎಸ್ ತಂತ್ರಜ್ಞಾನ ಬಳಕೆಗೆ ಲಭ್ಯವಾಗಿರಲಿಲ್ಲ. ಇದೇ ಸಂದರ್ಭ ಸಿಎಸ್‌ಕೆ ಆರಂಭಿಕ ಡೆವೊನ್ ಕಾನ್ವೆ (Devon Conway) ವಿವಾದಾತ್ಮಕ ತೀರ್ಪಿಗೆ ಔಟ್ ಆಗಿದ್ದು ಚೆನ್ನೈ ತಂಡದ ಹಿನ್ನಡೆಗೆ ಕಾರಣವಾಯಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸಿಎಸ್‌ಕೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು ಎನ್ನುವ ಬದಲು ವಿಕೆಟ್ ಕಳೆದುಕೊಳ್ಳ ಬೇಕಾಯಿತು ಎನ್ನಬಹುದು. ಡೆವೊನ್ ಕಾನ್ವೆ ಮೊದಲ ಓವರ್‌ನಲ್ಲೇ ಎಲ್‌ಬಿಡಬ್ಲ್ಯೂ ಆದರು. ಅಂಪೈರ್ ಔಟ್ ಕೊಟ್ಟರು, ಡಿಆರ್‌ಎಸ್ ತೆಗೆದುಕೊಳ್ಳಲು ಬಯಸಿದರೂ ಸ್ಟೇಡಿಯಂನಲ್ಲಿ ಕರೆಂಟ್ ಇರಲಿಲ್ಲ. ವಿದ್ಯುತ್ ಇಲ್ಲದಿರುವುದು ಡಿಆರ್‌ಎಸ್ ಪಡೆಯಲು ಕಾನ್ವೆ ಅವರಿಗೆ ಅವಕಾಶ ಸಿಗಲೇ ಇಲ್ಲ. ಇದರೊಂದಿಗೆ ಹತಾಶೆಯಿಂದ ಕಾನ್ವೆ ಪೆವಿಲಿಯನ್ನತ್ತ ಹೊರಡಬೇಕಾಯಿತು. ಆದರೆ ನಿಜಕ್ಕೂ ಇದು ಔಟ್ ಆಗಿತ್ತೆ ಎಂಬ ಅನುಮಾನ ಕಾಡಿದೆ. ಈ ಕುರಿತು ಅಭಿಮಾನಿಗಳು ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
Well Played #MumbaiIndians ??#CSKvsMI #MI #NoDRS #Conway #Umpire pic.twitter.com/sGV4Z3YbYx
— ??????? (@its_krishan_) May 12, 2022
ಇದಾದ ಬಳಿಕ ರಾಬಿನ್ ಉತ್ತಪ್ಪ ಅವರು ಜಸ್ಪ್ರೀತ್ ಬೂಮ್ರಾ ಬೌಲಿಂಗ್ನಲ್ಲಿ ಎಲ್‌ಬಿಡಬ್ಲ್ಯೂ ಆದರು. ಅವರಿಗೂ ಡಿಆರ್‌ಎಸ್ ತೆಗೆದುಕೊಳ್ಳಲು ಆಗಲಿಲ್ಲ. ಹೀಗೆ ಇಬ್ಬರು ಆಟಗಾರರು ಡಿಆರ್‌ಎಸ್ ತೆಗೆದುಕೊಳ್ಳಲು ಆಗದೇ ಪೆವಿಲಿಯನ್ಗೆ ನಿರ್ಗಮಿಸುವಂತಾಯಿತು. ಈ ಘಟನೆ ನೋಡಿದ ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಹೇಳುತ್ತಿದ್ದಾರೆ.
So is the DRS not available for the whole match or only until the power is back… if its only a temporary power cut how is this fair for the teams? – The power issue has been restored and DRS is available now#DRS #MIvsCSK #umpire #RohitSharma? pic.twitter.com/8EAWghG7wF
— Rohit Sharma Fan Club (@45Rohitsharma45) May 12, 2022
Wosrt Umpiring This Season…?
Devon Conwey Was Not Out, But Due To Powercut The DRS Was Not Available…?
Now There Should Be No DRS In The Whole Match… Play Fair Pls…#CSKvsMI#MIvsCSK #umpire #IPL2022 pic.twitter.com/GAoQtz2rvr
— H Y P E R ‣‣‣ (@Freak_Hyper_) May 12, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಪರ ನಾಯಕ ಮಹೇಂದ್ರ ಸಿಂಗ್ ಧೋನಿ (ಔಟಾಗದೆ 36 ರನ್,33 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಏಕಾಂಗಿ ಹೋರಾಟದ ಹೊರತಾಗಿಯೂ 16 ಓವರ್‌ಗಳಲ್ಲಿ ಕೇವಲ 97 ರನ್‌ಗೆ ಆಲೌಟಾಯಿತು. ಡ್ವೇನ್ ಬ್ರಾವೊ(12 ರನ್), ಅಂಬಟಿ ರಾಯುಡು(10)ಹಾಗೂ ಶಿವಂ ದುಬೆ(10)ಎರಡಂಕೆಯ ಸ್ಕೋರ್ ಗಳಿಸಿದರು. ಕಾನ್ವೇ, ರಾಬಿನ್ ಉತ್ತಪ್ಪ ಹಾಗೂ ಮೊಯಿನ್ ಅಲಿ ಸೊನ್ನೆ ಸುತ್ತಿದರೆ ಗಾಯಕ್ವಾಡ್ 7 ರನ್‌ಗೆ ನಿರ್ಗಮಿಸಿದರು. ಮುಂಬೈ ಪರ ಡೆನಿಲ್ ಸ್ಯಾಮ್ಸ್ 3 ವಿಕೆಟ್ ಕಿತ್ತರು. ಗೆಲ್ಲಲು 98 ರನ್ ಸುಲಭ ಸವಾಲು ಪಡೆದ ಮುಂಬೈ 14.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು. ತಿಲಕ್ ವರ್ಮಾ(ಔಟಾಗದೆ 34), ಹೃತಿಕ್ ಶೋಕೀನ್(18 ರನ್) ,ಟಿಮ್ ಡೇವಿಡ್(ಔಟಾಗದೆ 16)ಹಾಗೂ ರೋಹಿತ್ ಶರ್ಮಾ(18 ರನ್) ಎರಡಂಕೆಯ ಸ್ಕೋರ್ ಗಳಿಸಿ ಮುಂಬೈಗೆ ಗೆಲುವು ತಂದುಕೊಟ್ಟರು. ಈ ಮೂಲಕ ಸಿಎಸ್‌ಕೆ ಐಪಿಎಲ್ 2022 ರಿಂದ ಹೊರಬಿದ್ದಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Fri, 13 May 22