RCB vs PBKS: ಇಂದು ಆರ್ಸಿಬಿ ಗೆದ್ದರೆ ಪಾಯಿಂಟ್ ಟೇಬಲ್ನಲ್ಲಿ ಏನಾಗಲಿದೆ?: ಇಲ್ಲಿದೆ ನೋಡಿ
Royal Challengers Bangalore: ಆರ್ಸಿಬಿ-ಪಂಜಾಬ್ ನಡುವಣ ಕದನದಲ್ಲಿ ಮಯಾಂಕ್ ಪಡೆ ಗೆದ್ದರೆ ಪಾಯಿಂಟ್ ಟೇಬಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ರಥಮ ಅಥವಾ ದ್ವಿತೀಯ ಸ್ಥಾನ ಖಚಿತವಾಗಲಿದೆ.
ಐಪಿಎಲ್ 2022 (IPL 2022) ರಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ (RCB vs PBKS) ಅನ್ನು ಎದುರಿಸಲಿದೆ. ಮುಂದಿನ ಹಂತಕ್ಕೆ ಕಾಲಿಡುವ ದೃಷ್ಟಿಯಿಂದ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಕೇವಲ ಆರ್ಸಿಬಿ ಪಂಜಾಬ್ ಮತ್ರವಲ್ಲದೆ ಇತರೆ ತಂಡಗಳ ಭವಿಷ್ಯ ಕೂಡ ಇಂದಿನ ಈ ಪಂದ್ಯದ ಫಲಿತಾಂಶದ ಮೇಲೆ ನಿತ್ತಿದೆ. ಫಾಫ್ (Faf Duplessis) ಪಡೆಯ ಸೋಲು-ಗೆಲುವು ಇತರೆ ತಂಡಗಳಿಗೆ ದೊಡ್ಡ ಲಾಭ ತಂದುಕೊಡಲಿದೆ. ಟೂರ್ನಿಯಲ್ಲಿ ಆರ್ಸಿಬಿ ಒಟ್ಟು 12 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಪಂಜಾಬ್ 11 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು, ಉಳಿದ 6 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಂಡು ಎಂಟನೇ ಸ್ಥಾನದಲ್ಲಿದೆ. ಹಾಗಾದ್ರೆ ಇಂದಿನ ಪಂದ್ಯದಲ್ಲಿ ಯಾರು ಗೆದ್ದರೆ ಯಾರಿಗೆ ಸಹಕಾರಿ ಎಂಬುದನ್ನು ನೋಡೋಣ.
ಆರ್ಸಿಬಿ-ಪಂಜಾಬ್ ನಡುವಣ ಕದನದಲ್ಲಿ ಮಯಾಂಕ್ ಪಡೆ ಗೆದ್ದರೆ ಪಾಯಿಂಟ್ ಟೇಬಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ರಥಮ ಅಥವಾ ದ್ವಿತೀಯ ಸ್ಥಾನ ಖಚಿತವಾಗಲಿದೆ. ಲಖನೌ ಸೂಪರ್ ಜೇಂಟ್ಸ್ ತಂಡಕ್ಕೆ ಕೂಡ ಮೊದಲ ಎರಡು ಸ್ಥಾನಕ್ಕಾಗಿ ಪೈಪೋಟಿ ನಡೆಸಬಹುದು. ರಾಜಸ್ಥಾನ್ ರಾಯಲ್, ಸನ್ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇ ಆಫ್ ಅವಕಾಶ ಹೆಚ್ಚುತ್ತದೆ. ಹಾಗೆಯೆ ಆರ್ಸಿಬಿ ತಂಡ ಗೆದ್ದಿತು ಎಂದಾದರೆ ಇಷ್ಟೂ ತಂಡಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಜೊತೆಗೆ ಆರ್ಸಿಬಿ ಪ್ಲೇ ಆಫ್ ಟಿಕೆಟ್ ಅನ್ನು ಬಹುತೇಕ ಖಚಿತ ಪಡಿಸಿದಂತೆ.
ಆರ್ಸಿಬಿ ಬ್ಯಾಟಿಂಗ್ ಬಲಿಷ್ಠ:
ಆರ್ಸಿಬಿ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಬೇಗನೆ ಔಟ್ ಆಗುತ್ತಿದ್ದಾರೆ ಆದರೂ ಅದು ದೊಡ್ಡ ಹೊಡೆತ ನೀಡುತ್ತಿಲ್ಲ. ನಾಯಕ ಫಾ ಡು ಪ್ಲೆಸಿಸ್, ಯಂಗ್ ಗನ್ ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಸಿಡಿದು ನಿಂತು ಮೂರೇ ವಿಕೆಟಿಗೆ 192 ರನ್ ಪೇರಿಸುವ ಮೂಲಕ ಹೈದರಾಬಾದ್ ವೇಗಕ್ಕೆ ಸಡ್ಡು ಹೊಡೆದಿದ್ದರು. ಇವರ ಜೊತೆಗೆ ಕೊಹ್ಲಿಯೂ ಕೈ ಜೋಡಿಸಿದರೆ ತಂಡದ ಮೊತ್ತ 200ರ ಗಡಿ ದಾಟುವುದು ಖಚಿತ ಅಥವಾ ಸುಲಭ ಗೆಲುವು ಪಡೆದುಕೊಳ್ಳಬಹುದು. ದಿನೇಶ್ ಕಾರ್ತಿಕ್ ಅಂತೂ ಪ್ರತಿ ಪಂದ್ಯದಲ್ಲಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಬೌಲಿಂಗ್ನಲ್ಲಿ ಜೋಶ್ ಹ್ಯಾಜಲ್ ವುಡ್ ಹೊಸ ಆಯಾಮವನ್ನು ತಂದುಕೊಟ್ಟಿದ್ದಾರೆ. ಹರ್ಷಲ್ ವಿಕೆಟ್ ಬೇಟೆ ನೆಮ್ಮದಿ ತಂದಿದೆ. ಆದರೆ, ಮೊಹಮ್ಮದ್ ಸಿರಾಜ್ ಈ ಆವೃತ್ತಿಯಲ್ಲಿ ಸಾಕಷ್ಟು ದುಬಾರಿಯಾಗಿದ್ದಾರೆ. ಪ್ರಮುಖವಾಗಿ ಲೈನ್-ಲೆಂತ್ನಲ್ಲಿ ಎಡವುತ್ತಿರುವ ಸಿರಾಜ್ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 8 ವಿಕೆಟ್ ಮಾತ್ರ ಗಳಿಸಿದ್ದಾರೆ. ಹಸರಂಗ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ. ಮ್ಯಾಕ್ಸ್ ವೆಲ್, ಶಹಬಾಸ್ ಮತ್ತು ಲೊಮ್ರೊರ್ ಕೂಡ ಬೌಲಿಂಗ್ ಮಾಡಬಲ್ಲರು.
ಪಂಜಾಬ್ ತಂಡ ಹೇಗಿದೆ?:
ಪಂಜಾಬ್ ಕಿಂಗ್ಸ್ ತಂಡ ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ತೀವ್ರ ಒತ್ತಡದಲ್ಲಿದೆ. ಹೀಗಾಗಿ ಮಯಾಂಕ್ ಪಡೆ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಜಾನಿ ಬೇರ್ ಸ್ಟೋವ್ ಆರಂಭಿಕರಾಗಿ ತಂಡಕ್ಕೆ ನೆರವಾಗಿದ್ದಾರೆ. ಶಿಖರ್ ಧವನ್ ದೊಡ್ಡ ಇನ್ನಿಂಗ್ಸ್ ಕಟ್ಟುವುದರಲ್ಲಿ ನಿಸ್ಸೀಮ. ಭಾನುಕಾ ರಾಜಪಕ್ಸ ಮತ್ತು ಲಿಯಂ ಲಿವಿಂಗ್ ಸ್ಟೋನ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿದ್ದರೆ ಡೇಂಜರಸ್ ಆಗುತ್ತಾರೆ. ಅಗರ್ವಾಲ್ ಮತ್ತು ಜಿತೇಶ್ ಶರ್ಮಾ ಕೂಡ ಬಿಗ್ ಹಿಟ್ಟರ್ ಗಳೇ. ಹೀಗಾಗಿ ಉಭಯ ತಂಡ ಕೂಡ ಬಲಷ್ಠವಾಗಿದ್ದು ಇದು ಹೈವೋಲ್ಟೇಜ್ ಪಂದ್ಯ ಆಗುವುದರಲ್ಲಿ ಅನುಮಾನವಿಲ್ಲ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.