IPL 2022: RCB ಪಾಲಿಗೆ ನಿರ್ಣಾಯಕ ಪಂದ್ಯ
RCB vs PBKS: ಉಭಯ ತಂಡಗಳು ಇದುವರೆಗೆ 29 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಪಂಜಾಬ್ ಕಿಂಗ್ಸ್ ಗೆದ್ದಿರುವುದು ಬರೋಬ್ಬರಿ 16 ಬಾರಿ. ಹಾಗೆಯೇ ಆರ್ಸಿಬಿ ಗೆದ್ದಿದ್ದು ಕೇವಲ 13 ಬಾರಿ ಮಾತ್ರ.
ಐಪಿಎಲ್ನ 60ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಉಭಯ ತಂಡಗಳಿಗೂ ಇದು ನಿರ್ಣಾಯಕ ಪಂದ್ಯ. ಏಕೆಂದರೆ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಪ್ಲೇಆಫ್ ಹಾದಿ ಸುಲಭವಾಗಲಿದೆ. ಆದರೆ ಅತ್ತ ಪಂಜಾಬ್ ಕಿಂಗ್ಸ್ ಗೆದ್ದರೆ ಪ್ಲೇಆಫ್ ರೇಸ್ನಲ್ಲೇ ಉಳಿಯಲಿದೆ. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಪಂಜಾಬ್ ಕಿಂಗ್ಸ್ಗೆ ಇದಲ್ಲದೆ ಇನ್ನೂ 2 ಪಂದ್ಯಗಳಿವೆ. ಅಂದರೆ ಆರ್ಸಿಬಿ ಈ ಪಂದ್ಯದಲ್ಲಿ ಸೋತು ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಗೆದ್ದರೂ, 16 ಪಾಯಿಂಟ್ ಆಗಲಿದೆ. ಆದರೆ ಇಲ್ಲಿ ಪಂಜಾಬ್ ಕಿಂಗ್ಸ್ಗೆ ಇನ್ನು 2 ಪಂದ್ಯಗಳಿರುವ ಕಾರಣ, ಆ ಪಂದ್ಯಗಳನ್ನು ಗೆದ್ದು 16 ಪಾಯಿಂಟ್ಸ್ಗಳಿಸಿ ನೆಟ್ ರನ್ರೇಟ್ ಮೂಲಕ ಪ್ಲೇಆಫ್ಗೇರಬಹುದು.
ಹೀಗಾಗಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪಾಲಿಗೆ ಇದು ನಿರ್ಣಾಯಕ ಪಂದ್ಯ. ಏಕೆಂದರೆ ಆರ್ಸಿಬಿ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಪ್ಲೇಆಫ್ ರೇಸ್ನಿಂದಲೇ ಹೊರಗಿಡಬಹುದು. ಏಕೆಂದರೆ ಉಳಿದ 2 ಮ್ಯಾಚ್ಗಳನ್ನು ಪಂಜಾಬ್ ಗೆದ್ದರೂ 16 ಪಾಯಿಂಟ್ ಹೊಂದಿರುವ ಆರ್ಸಿಬಿಗೆ ಯಾವುದೇ ತೊಂದರೆ ಆಗುವುದಿಲ್ಲ.
ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ಆರ್ಸಿಬಿಗೆ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಒಂದು ವೇಳೆ ಒಂದು ಪಂದ್ಯದಲ್ಲಿ ಸೋತರೆ ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ಪಾಲಿಗೆ ಈ ಪಂದ್ಯ ನಿರ್ಣಾಯಕವಾಗಲಿದೆ.
ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಮೊದಲಾರ್ಧದ ಪಂದ್ಯದಲ್ಲಿ ಆರ್ಸಿಬಿ ವಿರುದ್ದ ಪಂಜಾಬ್ ಗೆದ್ದಿತ್ತು. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಕಳಪೆ ಪ್ರದರ್ಶನ ನೀಡಿದ್ರೂ ಆರ್ಸಿಬಿ ವಿರುದ್ದ ಮಾತ್ರ ಅತ್ಯುತ್ತಮ ಪ್ರದರ್ಶನ ನೀಡಿದೆ. ಏಕೆಂದರೆ ಉಭಯ ತಂಡಗಳು ಇದುವರೆಗೆ 29 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಪಂಜಾಬ್ ಕಿಂಗ್ಸ್ ಗೆದ್ದಿರುವುದು ಬರೋಬ್ಬರಿ 16 ಬಾರಿ. ಹಾಗೆಯೇ ಆರ್ಸಿಬಿ ಗೆದ್ದಿದ್ದು ಕೇವಲ 13 ಬಾರಿ ಮಾತ್ರ.
ಇನ್ನು ಈ ಬಾರಿಯ ಮೊದಲ ಪಂದ್ಯದಲ್ಲೂ ಆರ್ಸಿಬಿ ವಿರುದ್ದ ಪಂಜಾಬ್ ಕಿಂಗ್ಸ್ 5 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿಯೇ ಆರ್ಸಿಬಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದಾಗ್ಯೂ ಪ್ಲೇಆಫ್ಗೇರುವ ಹಾದಿಯಲ್ಲಿರುವ ಆರ್ಸಿಬಿ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಈ ಮೂಲಕ ಮುಂದಿನ ಪಂದ್ಯವನ್ನು ಗೆದ್ದು ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಆದರೆ ಮೊದಲ ಮುಖಾಮುಖಿಯಲ್ಲಿ ಆರ್ಸಿಬಿಗೆ ಸೋಲುಣಿಸಿರುವ ಪಂಜಾಬ್ ವಿರುದ್ದ ಈ ಬಾರಿ ಆರ್ಸಿಬಿ ಸೇಡು ತೀರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಪಂಜಾಬ್ ಕಿಂಗ್ಸ್ (PBKS): ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ಒಡಿಯನ್ ಸ್ಮಿತ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಹರ್, ಅರ್ಷ್‌ದೀಪ್ ಸಿಂಗ್, ಇಶಾನ್ ಪೊರೆಲ್, ಸಂದೀಪ್ ಶರ್ಮಾ, ಅಥರ್ವ ಪತ್ರಾ, ವೈಭವ್, ರಾಜ್ ಅಂಗದ್ ಬಾವಾ, ಬೆನ್ನಿ ಹೋವೆಲ್, ರಿಷಿ ಧವನ್, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್, ರಿತಿಕ್ ಚಟರ್ಜಿ, ನಾಥನ್ ಎಲ್ಲಿಸ್, ಪ್ರೇರಕ್ ಮಂಕಡ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.