ಸೆಪ್ಟೆಂಬರ್ 5 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯೊಂದಿಗೆ ಭಾರತದ 2024-25ರ ದೇಶೀಯ ಕ್ರಿಕೆಟ್ ಸೀಸನ್ ಕೂಡ ಆರಂಭವಾಗಲಿದೆ. ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಗೆ ಸಾಕಷ್ಟು ಮನ್ನಣೆ ನೀಡಲಾಗುತ್ತಿದೆ. ಏಕಂದರೆ ಈ ಟೂರ್ನಿಯಲ್ಲಿ ಮಿಂಚುವ ಆಟಗಾರರಿಗೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಖಚಿತವಾಗಲಿದೆ. ಹೀಗಾಗಿಯೇ ಈ ಪಂದ್ಯಾವಳಿಯಲ್ಲಿ ಅನೇಕ ಸ್ಟಾರ್ ಕ್ರಿಕೆಟಿಗರು ಆಡುತ್ತಿದ್ದಾರೆ. ಇನ್ನು ನಾಳೆಯಿಂದ ಆರಂಭವಾಗಲಿರುವ ಈ ಟೂರ್ನಿಯ ಎಲ್ಲಾ ಪಂದ್ಯಗಳು ಎರಡು ನಗರಗಳಲ್ಲಿ ನಡೆಯಲಿದ್ದು, ಬೆಂಗಳೂರು ಮತ್ತು ಅನಂತಪುರ ಆತಿಥ್ಯವಹಿಸಲಿವೆ.
ಈ ಬಾರಿ 61ನೇ ಸೀಸನ್ ದುಲೀಪ್ ಟ್ರೋಫಿ ನಡೆಯುತ್ತಿದ್ದು, ಇದರಲ್ಲಿ 4 ತಂಡಗಳು ಮಾತ್ರ ಭಾಗವಹಿಸಲಿವೆ. ಈ ಮೊದಲು ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸುತ್ತಿದ್ದವು. ಆದರೆ ಈ ಬಾರಿ 4 ತಂಡಗಳು ಮಾತ್ರ ಭಾಗವಹಿಸುತ್ತಿದ್ದು, ಆ ನಾಲ್ಕು ತಂಡಗಳನ್ನು ಭಾರತ ಎ, ಇಂಡಿಯಾ ಬಿ, ಇಂಡಿಯಾ ಸಿ ಮತ್ತು ಇಂಡಿಯಾ ಡಿ ತಂಡಗಳಾಗಿ ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಬಾಂಗ್ಲಾದೇಶ ಸರಣಿಗೆ ಈ ಎಲ್ಲ ತಂಡಗಳಿಂದ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ದುಲೀಪ್ ಟ್ರೋಫಿಯ ಮೊದಲ ಎರಡು ಪಂದ್ಯಗಳು ಬಹಳ ಮಹತ್ವದ್ದಾಗಲಿವೆ. ಏಕೆಂದರೆ ಟೀಂ ಇಂಡಿಯಾದ ಆಯ್ಕೆಯು ಈ ಎರಡು ಪಂದ್ಯಗಳನ್ನು ಆಧರಿಸಿರುತ್ತದೆ.
61ನೇ ಆವೃತ್ತಿಯ ದುಲೀಪ್ ಟ್ರೋಫಿ ಇದೇ ಸೆಪ್ಟೆಂಬರ್ 4 ರಿಂದ ಆರಂಭವಾಗಲಿದೆ.
ದುಲೀಪ್ ಟ್ರೋಫಿಯ ಎಲ್ಲಾ ಪಂದ್ಯಗಳು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿವೆ.
ದುಲೀಪ್ ಟ್ರೋಫಿಯ ಮೊದಲ ಪಂದ್ಯ ಭಾರತ ಎ ಮತ್ತು ಭಾರತ ಬಿ ನಡುವೆ ಸೆಪ್ಟೆಂಬರ್ 5 ರಿಂದ 8 ರವರೆಗೆ ನಡೆಯಲಿದೆ.
ಸ್ಪೋರ್ಟ್ಸ್ 18 ನಲ್ಲಿ ಈ ಬಾರಿಯ ದುಲೀಪ್ ಟ್ರೋಫಿಯ ನೇರ ಪ್ರಸಾರ ಇರಲಿದೆ.
ಈ ಬಾರಿ ದುಲೀಪ್ ಟ್ರೋಫಿಯ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಇರಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Wed, 4 September 24