Duleep Trophy 2024: ದುಲೀಪ್ ಟ್ರೋಫಿ ಪಾಯಿಂಟ್ಸ್ ಟೇಬಲ್: ಯಾರಿಗೆ ಚಾಂಪಿಯನ್ ಪಟ್ಟ?

|

Updated on: Sep 17, 2024 | 10:20 AM

Duleep Trophy 2024: ದುಲೀಪ್ ಟ್ರೋಫಿಯ ಮೂರನೇ ಸುತ್ತಿನ ಪಂದ್ಯಗಳು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಹಂತದಲ್ಲಿ ಭಾರತ ಬಿ ತಂಡವು ಭಾರತ ಡಿ ತಂಡವನ್ನು ಎದುರಿಸಿದರೆ, ಭಾರತ ಸಿ ತಂಡವು ಭಾರತ ಎ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಗಳ ಬಳಿಕ ಈ ಬಾರಿಯ ಚಾಂಪಿಯನ್ ಯಾರೆಂಬುದು ನಿರ್ಧಾರವಾಗಲಿದೆ.

Duleep Trophy 2024: ದುಲೀಪ್ ಟ್ರೋಫಿ ಪಾಯಿಂಟ್ಸ್ ಟೇಬಲ್: ಯಾರಿಗೆ ಚಾಂಪಿಯನ್ ಪಟ್ಟ?
Duleep Trophy 2024
Follow us on

ದುಲೀಪ್ ಟ್ರೋಫಿ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೊದಲೆರಡು ಸುತ್ತಿನ ಪಂದ್ಯಗಳು ಮುಗಿದ್ದು, ಇನ್ನುಳಿದಿರುವುದು ಕೇವಲ 2 ಪಂದ್ಯಗಳು ಮಾತ್ರ. ಈ ಪಂದ್ಯಗಳ ಮೂಲಕ ಈ ಬಾರಿಯ ದುಲೀಪ್ ಟ್ರೋಫಿ ಚಾಂಪಿಯನ್ ಪಟ್ಟ ನಿರ್ಧಾರವಾಗಲಿದೆ. ಪ್ರಸ್ತುತ ಪಾಯಿಂಟ್ಸ್​ ಟೇಬಲ್​ನಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಸಿ ತಂಡವು ಅಗ್ರಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಇಂಡಿಯಾ ಸಿ ತಂಡವು 1 ಜಯ ಹಾಗೂ 1 ಡ್ರಾ ನೊಂದಿಗೆ ಒಟ್ಟು 9 ಅಂಕಗಳನ್ನು ಕಲೆಹಾಕಿದೆ.

ಅಭಿಮನ್ಯು ಈಶ್ವರನ್ ಮುಂದಾಳತ್ವದ ಭಾರತ ಬಿ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಒಂದು ಜಯ ಮತ್ತು ಒಂದು ಡ್ರಾನೊಂದಿಗೆ ಒಟ್ಟು 7 ಪಾಯಿಂಟ್ಸ್​ ಕಲೆಹಾಕಿದೆ.

ಮೂರನೇ ಸ್ಥಾನದಲ್ಲಿ ಭಾರತ ಎ ತಂಡವಿದ್ದು, ಮಯಾಂಕ್ ಅಗರ್ವಾಲ್ ಮುಂದಾಳತ್ವದ ಇಂಡಿಯಾ ಎ ತಂಡವು ಒಂದು ಜಯ ಮತ್ತು ಒಂದು ಸೋಲಿನೊಂದಿಗೆ ಒಟ್ಟು 6 ಅಂಕಗಳನ್ನು ಗಳಿಸಿದೆ.

ಇನ್ನು ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಡಿ ತಂಡವು ಈವರೆಗೆ ಯಾವುದೇ ಪಂದ್ಯ ಗೆದ್ದಿಲ್ಲ. ಹೀಗಾಗಿ ಅಂಕ ಪಟ್ಟಿಯಲ್ಲಿ ಶೂನ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ.

ದುಲೀಪ್ ಟ್ರೋಫಿ ಅಂಕ ಪಟ್ಟಿ:

ಸ್ಥಾನ ತಂಡಗಳು  ಪಂದ್ಯಗಳು ಗೆಲುವು ಸೋಲು ಟೈ ಡ್ರಾ ಎನ್​ಆರ್ ಅಂಕಗಳು
1 ಭಾರತ ಸಿ 2 1 0 0 1 0 9
2 ಭಾರತ ಬಿ 2 1 0 0 1 0 7
3 ಭಾರತ ಎ 2 1 1 0 0 0 6
4 ಭಾರತ ಡಿ 2 0 2 0 0 0

ಯಾರು ಚಾಂಪಿಯನ್?

ಈ ಬಾರಿಯ ದುಲೀಪ್ ಟ್ರೋಫಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿವೆ. ಅಂದರೆ ಇಲ್ಲಿ ಪ್ರತಿ ತಂಡಗಳು ಮೂರು ಪಂದ್ಯಗಳನ್ನಾಡಲಿದೆ. ಆ ಬಳಿಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಅಂದರೆ ಇಲ್ಲಿ ಯಾವುದೇ ಸೆಮಿಫೈನಲ್ ಮತ್ತು ಫೈನಲ್ ಪಂದ್ಯವಿರುವುದಿಲ್ಲ. ಹೀಗಾಗಿ ಅಂತಿಮವಾಗಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡವು ಚಾಂಪಿಯನ್ ಪಟ್ಟಕ್ಕೇರಲಿದೆ.

ಮುಂದಿನ ಪಂದ್ಯಗಳ ವೇಳಾಪಟ್ಟಿ:

ಗುರುವಾರ, ಸೆಪ್ಟೆಂಬರ್ 19 ರಿಂದ  22 ರವರೆಗೆ ಭಾರತ B vs ಭಾರತ D 9:00 AM ಎಸಿಎ ಎಡಸಿಎ ಮೈದಾನ, ಅನಂತಪುರ
ಗುರುವಾರ, ಸೆಪ್ಟೆಂಬರ್ 19 ರಿಂದ 22 ರವರೆಗೆ ಭಾರತ A vs ಭಾರತ C 9:00 AM ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂ, ಅನಂತಪುರ

ಭಾರತ A ತಂಡ:  ಮಯಾಂಕ್ ಅಗರ್ವಾಲ್ (ನಾಯಕ), ರಿಯಾನ್ ಪರಾಗ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ಕುಮಾರ್ ಕುಶಾಗ್ರಾ, ಶಾಶ್ವತ್ ರಾವತ್, ಪ್ರಥಮ್ ಸಿಂಗ್, ಅಕ್ಷಯ್ ವಾಡ್ಕರ್, ಶೇಖ್ ರಶೀದ್, ಶಮ್ಸ್ ಮುಲಾನಿ, ಆಕಿಬ್ ಖಾನ್.

ಭಾರತ B ತಂಡ:  ಅಭಿಮನ್ಯು ಈಶ್ವರನ್ (ನಾಯಕ), ಸರ್ಫರಾಝ್ ಖಾನ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮುಖೇಶ್ ಕುಮಾರ್, ರಾಹುಲ್ ಚಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ, ಎನ್ ಜಗದೀಸನ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ರಿಂಕು ಸಿಂಗ್, ಹಿಮಾಂಶು ಮಂತ್ರಿ.

ಭಾರತ C ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಬಿ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ವೈಶಾಕ್ ವಿಜಯ್‌ಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಚೌಹಾಣ್, ಮಯಾಂಕ್ ಮಾರ್ಕಾಂಡೆ , ಸಂದೀಪ್ ವಾರಿಯರ್, ಗೌರವ್ ಯಾದವ್.

ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!

ಭಾರತ D ತಂಡ:  ಶ್ರೇಯಸ್ ಲೈಯರ್ (ನಾಯಕ), ಅಥರ್ವ ತೈಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ರಿಕಿ ಭುಯಿ, ಸರನ್ಶ್ ಜೈನ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ಆಕಾಶ್ ಸೆಂಗುಪ್ತ, ಕೆಎಸ್ ಭರತ್ (ವಿಕೆಟ್ ಕೀಪರ್), ಸೌರಭ್ ಕುಮಾರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಿದ್ವತ್ ಕಾವೇರಪ್ಪ.