ಅಯ್ಯಯ್ಯೋ ಅಯ್ಯರ್: ಕನ್ನಡಕ ಧರಿಸಿ ಬ್ಯಾಟಿಂಗ್; ಶೂನ್ಯಕ್ಕೆ ಔಟಾದ ಶ್ರೇಯಸ್ಗೆ ಟ್ರೋಲಿಗರ ಕಾಟ
Shreyas Iyer: ಕೇವಲ 7 ಎಸೆತಗಳನ್ನು ಆಡಿದ ಶ್ರೇಯಸ್ ಅಯ್ಯರ್ ಖಾತೆ ತೆರೆಯದೆ ಔಟಾದರು. ಖಲೀಲ್ ಅಹ್ಮದ್ ಎಸೆತದಲ್ಲಿ ಔಟಾದ ಅಯ್ಯರ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ನಂತರ, ಅಯ್ಯರ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿರುವ ನೆಟ್ಟಿಗರು ತರಹೆವಾರಿ ಕಾಮೆಂಟ್ಗಳೊಂದಿಗೆ ಅವರ ಕಾಲೆಳೆದಿದ್ದಾರೆ.
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ವೃತ್ತಿಜೀವನ ಸದ್ಯಕ್ಕೆ ಹಳಿ ತಪ್ಪಿದ ರೈಲಿನಂತ್ತಾಗಿದೆ. ಸಾಕಷ್ಟು ಅವಕಾಶಗಳು ಸಿಕ್ಕರೂ ಅಯ್ಯರ್ಗೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀಲಂಕಾ ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದ ಅಯ್ಯರ್, ಆ ಬಳಿಕ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ದುಲೀಪ್ ಟ್ರೋಫಿಯಲ್ಲೂ ಅಯ್ಯರ್ ಕಳಪೆ ಫಾರ್ಮ್ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರೂ ಅಯ್ಯರ್ ತಂಡಕ್ಕೆ ಗೆಲುವು ಸಿಕ್ಕಿರಲಿಲ್ಲ. ಇದೀಗ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಅಯ್ಯರ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಕ್ರಿಕೆಟ್ನಲ್ಲಿ ಬ್ಯಾಟರೊಬ್ಬ ಶೂನ್ಯಕ್ಕೆ ಔಟಾಗುವುದು ಸರ್ವೆ ಸಾಮಾನ್ಯ. ಆದರೆ ಶ್ರೇಯಸ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಅಯ್ಯರ್ ಶೂನ್ಯಕ್ಕೆ ಔಟಾದುದ್ದಲ್ಲ. ಬದಲಿಗೆ ಅವರು ಕಪ್ಪು ಕನ್ನಡಕ ಧರಿಸಿ ಬ್ಯಾಟಿಂಗ್ಗೆ ಬಂದಿದ್ದು.
ಕಪ್ಪು ಕನ್ನಡಕ ಧರಿಸಿ ಬ್ಯಾಟಿಂಗ್ಗೆ ಇಳಿದ ಅಯ್ಯರ್
ವಾಸ್ತವವಾಗಿ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ಎ ಹಾಗೂ ಭಾರತ ಡಿ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಭಾರತ ಡಿ ತಂಡದ ನಾಯಕನಾಗಿರುವ ಶ್ರೇಯಸ್ ಅಯ್ಯರ್ ಕನ್ನಡಕ ಹಾಕಿಕೊಂಡು ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದಿದ್ದರು. ಆದರೆ ಕೇವಲ 7 ಎಸೆತಗಳನ್ನು ಆಡಿದ ಅಯ್ಯರ್ ಖಾತೆ ತೆರೆಯದೆ ಔಟಾದರು. ಖಲೀಲ್ ಅಹ್ಮದ್ ಎಸೆತದಲ್ಲಿ ಔಟಾದ ಅಯ್ಯರ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ನಂತರ, ಅಯ್ಯರ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿರುವ ನೆಟ್ಟಿಗರು ತರಹೆವಾರಿ ಕಾಮೆಂಟ್ಗಳೊಂದಿಗೆ ಅವರ ಕಾಲೆಳೆದಿದ್ದಾರೆ. ಅವುಗಳ ಒಂದಿಷ್ಟು ಝಲಕ್ ಇಲ್ಲಿದೆ.
#INDvsBAN #ShreyasIyer#DuleepTrophy
Mean while @ShreyasIyer15 : pic.twitter.com/uARnQRbi2K
— Karthik (@Karthik_71831) September 13, 2024
Lagta hai shreyas bhai 100 rs wala chashma use kr rhe the 😅#shreyasiyer #DuleepTrophy pic.twitter.com/HRZmEoLRqc
— Nishu(二州) (@nishugovt) September 13, 2024
It was a test match not a fashion show Shreyas Iyer. 0 run wow🤯 pic.twitter.com/fscM8QAICz
— Kshitiz Bhardwaj Singh (@imkbs996) September 13, 2024
Chasma pahin ke kaun khelta h re 🤨😂#earthquake #Shreyasiyer #DuleepTrophy pic.twitter.com/O9CJRiYd8Y
— अनुज यादव 🇮🇳 (@Hello_anuj) September 13, 2024
What advice do you want to give to Shreyas Iyer? pic.twitter.com/7KVXLgj1Ye
— Suhana (@suhana18_) September 13, 2024
Shreyas Bhai came with sunglasses and got out for a duck! 🦆#ShreyasIyer #RiyanParag #INDvsBAN #DuleepTrophy #ShubmanGill #RohitSharma #HardikPandya #ViratKohli #96in pic.twitter.com/dmM3wkxZVN
— 96inofficial (@96inofficiall) September 13, 2024
ಪಂದ್ಯ ಹೀಗಿದೆ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಭಾರತ ಎ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಸಿತು. ತಂಡದ ಪರ ಶಮ್ಸ್ ಮುಲಾನಿ 89 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ತನುಷ್ ಕೋಟ್ಯಾನ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಇನ್ನು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಡಿ ತಂಡ 183 ರನ್ಗಳಿಗೆ ಆಲೌಟ್ ಆಗಿದೆ. ತಂಡದ ಪರ ಕನ್ನಡಿಗ ದೇವದತ್ ಪಡಿಕ್ಕಲ್ 92 ರನ್‌ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ, ಉಳಿದವರು ಹೆಚ್ಚಾಗಿ ಒಂದಂಕಿಗೆ ಸುಸ್ತಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ