AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy 2025: ದುಲೀಪ್ ಟ್ರೋಫಿ ಎಂದರೇನು?

ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ. ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

Duleep Trophy 2025: ದುಲೀಪ್ ಟ್ರೋಫಿ ಎಂದರೇನು?
Duleep Trophy
ಝಾಹಿರ್ ಯೂಸುಫ್
|

Updated on: Aug 17, 2025 | 2:07 PM

Share

Duleep Trophy 2025: ದುಲೀಪ್ ಟ್ರೋಫಿ 2025 ಆಗಸ್ಟ್ 28 ರಿಂದ ಶುರುವಾಗಲಿದೆ. ಈ ಬಾರಿಯ ಟೂರ್ನಿಯು ಎಲ್ಲಾ ಪಂದ್ಯಗಳು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿದೆ. ವಿಶೇಷ ಎಂದರೆ ಈ ಬಾರಿ ಕಣಕ್ಕಿಳಿಯಲಿರುವ 6 ತಂಡಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ 2025ರ ದುಲೀಪ್ ಟ್ರೋಫಿಯಲ್ಲಿ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

ಏನಿದು ದುಲೀಪ್ ಟ್ರೋಫಿ?

ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ.

ದುಲೀಪ್ ಟ್ರೋಫಿ ಯಾವಾಗ ಶುರುವಾಯಿತು?

ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.

ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?

ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

  • ಕೇಂದ್ರ ವಲಯ
  • ದಕ್ಷಿಣ ವಲಯ
  • ಪೂರ್ವ ವಲಯ
  • ಪಶ್ಚಿಮ ವಲಯ
  • ಉತ್ತರ ವಲಯ
  • ಈಶಾನ್ಯ ವಲಯ

ದುಲೀಪ್ ಟ್ರೋಫಿಯ ವಲಯ ರಾಜ್ಯಗಳಾವುವು?

  • ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.
  • ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
  • ಕೇಂದ್ರ ವಲಯ : ಛತ್ತೀಸ್‌ಗಢ, ಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.
  • ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
  • ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
  • ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ.

ಈ ರಾಜ್ಯಗಳ ಆಟಗಾರರು ಆಯಾ ವಲಯಗಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ಈ ವಲಯಗಳ ತಂಡಗಳನ್ನು ಎಲೈಟ್​​ ಹಾಗೂ ಇಂಡಿಯಾ ರೆಡ್, ಬ್ಲೂ, ಗ್ರೀನ್… ಹೆಸರಿನಲ್ಲಿ ಕಣಕ್ಕಿಳಿಸಲಾಗಿತ್ತು. ಹಾಗೆಯೇ ಇಂಡಿಯಾ A,B,C,D,E,F  ಎಂದು ಹೆಸರಿನೊಂದಿಗೆ ಸಹ ಆಡಲಾಗಿತ್ತು. ಆದರೆ ಈ ಬಾರಿ ಮತ್ತೆ ವಲಯ ತಂಡಗಳಾಗಿ ಟೂರ್ನಿಯನ್ನು ಆಡಲಾಗುತ್ತದೆ.

ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು

ದುಲೀಪ್ ಟ್ರೋಫಿಯ ಹಿಂದಿನ ವಿಜೇತರು ಯಾರು?

  • 196162 – ಪಶ್ಚಿಮ ವಲಯ
  • 1962–63 – ಪಶ್ಚಿಮ ವಲಯ
  • 1963–64 – ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ (ಜಂಟಿ ವಿಜೇತರು)
  • 196465 – ಪಶ್ಚಿಮ ವಲಯ
  • 1965–66 – ದಕ್ಷಿಣ ವಲಯ
  • 1966–67 – ದಕ್ಷಿಣ ವಲಯ
  • 1967–68 – ದಕ್ಷಿಣ ವಲಯ
  • 1968–69 – ಪಶ್ಚಿಮ ವಲಯ
  • 1969–70 – ಪಶ್ಚಿಮ ವಲಯ
  • 1970–71 – ದಕ್ಷಿಣ ವಲಯ
  • 1971–72 – ಕೇಂದ್ರ ವಲಯ
  • 1972–73 – ಪಶ್ಚಿಮ ವಲಯ
  • 1973–74 – ಕೇಂದ್ರ ವಲಯ
  • 1974–75 – ದಕ್ಷಿಣ ವಲಯ
  • 1975–76 – ದಕ್ಷಿಣ ವಲಯ
  • 1976–77 – ಪಶ್ಚಿಮ ವಲಯ
  • 1977–78 – ಪಶ್ಚಿಮ ವಲಯ
  • 1978–79 – ಉತ್ತರ ವಲಯ
  • 1979–80 – ಉತ್ತರ ವಲಯ
  • 1980–81 – ಪಶ್ಚಿಮ ವಲಯ
  • 1981–82 – ಪಶ್ಚಿಮ ವಲಯ
  • 1982–83 – ಉತ್ತರ ವಲಯ
  • 1983–84 – ಉತ್ತರ ವಲಯ
  • 1984–85 – ದಕ್ಷಿಣ ವಲಯ
  • 1985–86 – ಪಶ್ಚಿಮ ವಲಯ
  • 1986–87 – ದಕ್ಷಿಣ ವಲಯ
  • 1987–88 – ಉತ್ತರ ವಲಯ
  • 1988–89 – ಉತ್ತರ ವಲಯ ಮತ್ತು ಪಶ್ಚಿಮ ವಲಯ (ಜಂಟಿ ವಿಜೇತರು)
  • 198990 – ದಕ್ಷಿಣ ವಲಯ
  • 1990–91 – ಉತ್ತರ ವಲಯ
  • 1991–92 – ಉತ್ತರ ವಲಯ
  • 1992–93 – ಉತ್ತರ ವಲಯ
  • 1993–94 – ಉತ್ತರ ವಲಯ
  • 1994–95 – ಉತ್ತರ ವಲಯ
  • 1995–96 – ದಕ್ಷಿಣ ವಲಯ
  • 1996–97 – ಕೇಂದ್ರ ವಲಯ
  • 1997–98 – ಕೇಂದ್ರ ವಲಯ ಮತ್ತು ಪಶ್ಚಿಮ ವಲಯ (ಜಂಟಿ ವಿಜೇತರು)
  • 199899 – ಕೇಂದ್ರ ವಲಯ
  • 1999–2000 – ಉತ್ತರ ವಲಯ
  • 2000–01 – ಉತ್ತರ ವಲಯ
  • 2001–02 – ಪಶ್ಚಿಮ ವಲಯ
  • 2002–03 – ಎಲೈಟ್ ಸಿ
  • 2003–04 – ಉತ್ತರ ವಲಯ
  • 2004–05 – ಕೇಂದ್ರ ವಲಯ
  • 2005–06 – ಪಶ್ಚಿಮ ವಲಯ
  • 2006–07 – ಉತ್ತರ ವಲಯ
  • 2007–08 – ಉತ್ತರ ವಲಯ
  • 2008–09 – ಪಶ್ಚಿಮ ವಲಯ
  • 2009–10 – ಪಶ್ಚಿಮ ವಲಯ
  • 2010–11 – ದಕ್ಷಿಣ ವಲಯ
  • 2011–12 – ಪೂರ್ವ ವಲಯ
  • 2012–13 – ಪೂರ್ವ ವಲಯ
  • 2013–14 – ಉತ್ತರ ವಲಯ ಮತ್ತು ದಕ್ಷಿಣ ವಲಯ (ಜಂಟಿ ವಿಜೇತರು)
  • 201415 – ಕೇಂದ್ರ ವಲಯ
  • 2016–17 – ಇಂಡಿಯಾ ಬ್ಲೂ
  • 2017–18 – ಇಂಡಿಯಾ ರೆಡ್
  • 2018–19 – ಇಂಡಿಯಾ ಬ್ಲೂ
  • 2019–20 – ಇಂಡಿಯಾ ರೆಡ್
  • 2022–23 – ಪಶ್ಚಿಮ ವಲಯ
  • 2023 – ದಕ್ಷಿಣ ವಲಯ
  • 2024- ಇಂಡಿಯಾ ಸಿ

Follow Us
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು