ತಿಲಕ್ ವರ್ಮಾಗೆ ನಾಯಕತ್ವ: ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ

Duleep Trophy 2025: ದುಲೀಪ್ ಟ್ರೋಫಿ ಆಗಸ್ಟ್ 28 ರಿಂದ ಶುರುವಾಗಲಿದೆ. 6 ವಲಯಗಳ ನಡುವಣ ಈ ಕದನಕ್ಕಾಗಿ ಸೌತ್ ಝೋನ್ ತಂಡವನ್ನು ಹೆಸರಿಸಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಕೇರಳದ ಐವರು ಆಟಗಾರರು ಸ್ಥಾನ ಪಡೆದರೆ, ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ಇನ್ನು ಹೈದರಾಬಾದ್​ನ ಮೂವರು ಆಟಗಾರರಿಗೆ ಸ್ಥಾನ ಲಭಿಸಿದೆ.

ತಿಲಕ್ ವರ್ಮಾಗೆ ನಾಯಕತ್ವ: ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ
DDP-Tilak-Vyshak

Updated on: Jul 29, 2025 | 7:32 AM

ದುಲೀಪ್ ಟ್ರೋಫಿಗಾಗಿ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿ ಸೌತ್ ಝೋನ್ ತಂಡವನ್ನು ಯುವ ಎಡಗೈ ದಾಂಡಿಗ ತಿಲಕ್ ವರ್ಮಾ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಕೇರಳದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಅಝರುದ್ದೀನ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ 15 ಸದಸ್ಯರ ತಂಡದಲ್ಲಿ ಈ ಬಾರಿ ಕರ್ನಾಟಕದ ಇಬ್ಬರು ಸ್ಥಾನ ಪಡೆದಿದ್ದಾರೆ.

ಕರ್ನಾಟಕದ ಯುವ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಹಾಗೂ ವೇಗದ ಬೌಲರ್ ವೈಶಾಕ್ ವಿಜಯಕುಮಾರ್ ಸೌತ್ ಝೋನ್ ತಂಡದಲ್ಲಿದ್ದು, ಈ ಇಬ್ಬರು ಕೂಡ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ದುಲೀಪ್ ಟ್ರೋಫಿ ಟೂರ್ನಿಗೆ ದಕ್ಷಿಣ ವಲಯ ತಂಡ ಈ ಕೆಳಗಿನಂತಿದೆ…

ದಕ್ಷಿಣ ವಲಯ ತಂಡ:

  1. ತಿಲಕ್ ವರ್ಮಾ (ಹೈದರಾಬಾದ್)
  2. ಮೊಹಮ್ಮದ್ ಅಝರುದ್ದೀನ್ (ಕೇರಳ)
  3. ತನ್ಮಯ್ ಅಗರ್ವಾಲ್ (ಹೈದರಾಬಾದ್)
  4. ದೇವದತ್ ಪಡಿಕ್ಕಲ್ (ಕರ್ನಾಟಕ)
  5. ಮೋಹಿತ್ ಕಾಳೆ (ಪಾಂಡಿಚೇರಿ)
  6. ಸಲ್ಮಾನ್ ನಿಝಾರ್ (ಕೇರಳ)
  7. ನಾರಾಯಣ್ ಜಗದೀಸನ್ (ತಮಿಳುನಾಡು)
  8.  ಆರ್ ಸಾಯಿ ಕಿಶೋರ್ (ತಮಿಳುನಾಡು)
  9. ತನಯ್ ತ್ಯಾಗರಾಜನ್ (ಹೈದರಾಬಾದ್)
  10. ವೈಶಾಕ್ ವಿಜಯ್‌ಕುಮಾರ್ (ಕರ್ನಾಟಕ)
  11.  ನಿಧೀಶ್ ಎಂಡಿ (ಕೇರಳ)
  12. ರಿಕಿ ಭುಯಿ (ಆಂಧ್ರ ಪ್ರದೇಶ್)
  13. ಬೇಸಿಲ್ ಎನ್‌ಪಿ (ಕೇರಳ)
  14. ಗುರ್ಜಪ್ನೀತ್ ಸಿಂಗ್ (ತಮಿಳುನಾಡು)
  15. ಸ್ನೇಹಲ್ ಕೌತಾಂಕರ್ (ಗೋವಾ).

ಇದನ್ನೂ ಓದಿ: ಗೆಲ್ಲಲು ಮಾತ್ರ ಹೊರಟ ಇಂಗ್ಲೆಂಡ್​ಗೆ ಟೆಸ್ಟ್​ನ​ ಟೇಸ್ಟ್​ ತೋರಿಸಿದ ಟೀಮ್ ಇಂಡಿಯಾ

ಏನಿದು ದುಲೀಪ್ ಟ್ರೋಫಿ?

ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. 1961-62 ರಲ್ಲಿ ಶುರುವಾದ ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.

ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?

ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

  • ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.
  • ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
  • ಕೇಂದ್ರ ವಲಯ : ಛತ್ತೀಸ್‌ಗಢ, ಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.
  • ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
  • ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
  • ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ