Duleep Trophy 2025 Final: ದಕ್ಷಿಣ ವಲಯ ವಿರುದ್ಧ ಮೇಲುಗೈ ಸಾಧಿಸಿದ ರಜತ್ ಪಡೆ

Duleep Trophy 2025 Final: ಬೆಂಗಳೂರಿನಲ್ಲಿ ಆರಂಭವಾದ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನ ಕೇಂದ್ರ ವಲಯ ತಂಡವು ಪ್ರಾಬಲ್ಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯ 149 ರನ್‌ಗಳಿಗೆ ಆಲೌಟ್ ಆಗಿತು. ಕೇಂದ್ರ ವಲಯ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿದೆ. ಡ್ಯಾನಿಶ್ ಮಾಲೆವಾರ್ ಮತ್ತು ಅಕ್ಷಯ್ ವಾಡ್ಕರ್ ಅವರು ಅಜೇಯರಾಗಿದ್ದಾರೆ. ಕೇಂದ್ರ ವಲಯ ಉತ್ತಮ ಸ್ಥಿತಿಯಲ್ಲಿದೆ.

Duleep Trophy 2025 Final: ದಕ್ಷಿಣ ವಲಯ ವಿರುದ್ಧ ಮೇಲುಗೈ ಸಾಧಿಸಿದ ರಜತ್ ಪಡೆ
Duleep Trophy Final 2025

Updated on: Sep 11, 2025 | 7:38 PM

ದುಲೀಪ್ ಟ್ರೋಫಿಯ ಫೈನಲ್ (Duleep Trophy Final) ಪಂದ್ಯ ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಿದೆ. ಈ ಪ್ರಶಸ್ತಿ ಪಂದ್ಯದಲ್ಲಿ ದಕ್ಷಿಣ ವಲಯ ಮತ್ತು ಕೇಂದ್ರ ವಲಯ (South Zone vs Central Zone) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇಂದ್ರ ವಲಯ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ, ಕೇಂದ್ರ ವಲಯ ತಂಡವು ದಿನದ ಆಟದ ಅಂತ್ಯದ ವೇಳೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 50 ರನ್ ಗಳಿಸಿದೆ. ತಂಡದ ಪರ ಡ್ಯಾನಿಶ್ ಮಾಲೆವಾರ್ 64 ಎಸೆತಗಳಲ್ಲಿ 28 ರನ್‌ಮತ್ತು ಅಕ್ಷಯ್ ವಾಡ್ಕರ್ 52 ಎಸೆತಗಳಲ್ಲಿ 20 ರನ್‌ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.

ದಕ್ಷಿಣ ವಲಯದ ಇನ್ನಿಂಗ್ಸ್

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯವು ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ ಸಾಗಿತು. ದಕ್ಷಿಣ ವಲಯದ ನಾಲ್ವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಗಡಿ ಮುಟ್ಟಲು ಸಹ ಸಾಧ್ಯವಾಗಲಿಲ್ಲ. ಮೋಹಿತ್ ಕಾಳೆ ಒಂಬತ್ತು ರನ್‌ಗಳಿಗೆ ಔಟಾದರೆ, ಸ್ಮರಣ್ ರವಿಚಂದ್ರನ್, ನಾಯಕ ಮೊಹಮ್ಮದ್ ಅಜರುದ್ದೀನ್ ನಾಲ್ಕು ರನ್‌ಗಳಿಗೆ ಔಟಾದರು. ಗುರ್ಜಪ್‌ನೀತ್ ಸಿಂಗ್ ಎರಡು ರನ್‌ಗಳಿಗೆ ಔಟಾದರು. ಉಳಿದಂತೆ ರಿಕಿ ಭೂಯಿ 15 ರನ್‌, ತನ್ಮಯ್ ಅಗರ್ವಾಲ್ 31 ರನ್‌, ಸಲ್ಮಾನ್ ನಿಜರ್ 24 ರನ್‌ಗಳ ಇನ್ನಿಂಗ್ಸ್ ಆಡಿದರು. ಆಂಡ್ರೆ ಸಿದ್ಧಾರ್ಥ್ ಕೇವಲ 12 ರನ್‌ಗಳಿಗೆ ಔಟಾದರೆ, ಅಂಕಿತ್ ಶರ್ಮಾ 20 ರನ್‌ ಮತ್ತು ನಿಧಿಶ್ 12 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಕೇಂದ್ರ ವಲಯ ಪರ ಕುಮಾರ್ ಕಾರ್ತಿಕೇಯ ನಾಲ್ಕು ವಿಕೆಟ್‌ ಮತ್ತು ಸರಾಂಶ್ ಜೈನ್ ಐದು ವಿಕೆಟ್‌ಗಳನ್ನು ಪಡೆದರು.

Duleep Trophy 2025: ಕೇಂದ್ರ ಹಾಗೂ ದಕ್ಷಿಣ ವಲಯಗಳ ನಡುವೆ ದುಲೀಪ್ ಟ್ರೋಫಿ ಫೈನಲ್ ಫೈಟ್

ಸೆಂಟ್ರಲ್ ಝೋನ್ ಇನ್ನಿಂಗ್ಸ್

ದಕ್ಷಿಣ ವಲಯ ತಂಡವನ್ನು 149 ರನ್​ಗಳಿಗೆ ಆಲೌಟ್ ಮಾಡಿರುವ ಕೇಂದ್ರ ವಲಯ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿದೆ. ಡ್ಯಾನಿಶ್ ಮಾಲೆವಾರ್ (28) ಮತ್ತು ಅಕ್ಷಯ್ ವಾಡ್ಕರ್ (20) ಕ್ರೀಸ್‌ನಲ್ಲಿದ್ದಾರೆ. ಪ್ರಸ್ತುತ, ಸೆಂಟ್ರಲ್ ಝೋನ್ ದಕ್ಷಿಣ ವಲಯಕ್ಕಿಂತ 99 ರನ್‌ಗಳ ಹಿಂದಿದೆ. ಆದಾಗ್ಯೂ ಪಂದ್ಯದ ಮೇಲೆ ರಜತ್ ಪಡೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:38 pm, Thu, 11 September 25