Duleep Trophy 2025: ಕೇಂದ್ರ ಹಾಗೂ ದಕ್ಷಿಣ ವಲಯಗಳ ನಡುವೆ ದುಲೀಪ್ ಟ್ರೋಫಿ ಫೈನಲ್ ಫೈಟ್
Duleep Trophy 2025: 2025ರ ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಡ್ರಾ ಆಗಿವೆ. ಕೇಂದ್ರ ಮತ್ತು ದಕ್ಷಿಣ ವಲಯಗಳು ಮೊದಲ ಇನಿಂಗ್ಸ್‌ನಲ್ಲಿನ ಮುನ್ನಡೆಯಿಂದ ಫೈನಲ್‌ಗೆ ಪ್ರವೇಶ ಪಡೆದಿವೆ. ಕೇಂದ್ರ ವಲಯವು ಪಶ್ಚಿಮ ವಲಯವನ್ನು ಸೋಲಿಸಿದರೆ, ದಕ್ಷಿಣ ವಲಯವು ಉತ್ತರ ವಲಯವನ್ನು ಮಣಿಸಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 11 ರಂದು ನಡೆಯಲಿದೆ.

2025 ರ ದುಲೀಪ್ ಟ್ರೋಫಿಯ (Duleep Trophy 2025) ಸೆಮಿಫೈನಲ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಶಾರ್ದೂಲ್ ಠಾಕೂರ್ ನಾಯಕತ್ವದ ಪಶ್ಚಿಮ ವಲಯ ಹಾಗೂ ರಜತ್ ಪಾಟಿದರ್ ನಾಯಕತ್ವದ ಕೇಂದ್ರ ವಲಯ ತಂಡಗಳ ನಡುವೆ ಮೊದಲ ಸೆಮಿಫೈನಲ್ ನಡೆದರೆ, ಎರಡನೇ ಸೆಮಿಫೈನಲ್‌ನಲ್ಲಿ ಉತ್ತರ ವಲಯ ಮತ್ತು ದಕ್ಷಿಣ ವಲಯದ ನಡುವೆ ನಡೆಯಿತು. ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಎರಡು ತಂಡಗಳು ಫೈನಲ್‌ಗೆ ಟಿಕೆಟ್ ಪಡೆದುಕೊಂಡಿವೆ. ಅದರಲ್ಲಿ ಮೊದಲನೆಯ ತಂಡ ರಜತ್ ಪಾಟಿದರ್ ನಾಯಕತ್ವದ ಕೇಂದ್ರ ವಲಯವಾದರೆ, ಮತ್ತೊಂದು ತಂಡ ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ದಕ್ಷಿಣ ವಲಯವಾಗಿದೆ. ಇದೀಗ ಈ ಎರಡು ತಂಡಗಳು ಸೆಪ್ಟೆಂಬರ್ 11 ರಂದು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ದಕ್ಷಿಣ ವಲಯ ತಂಡಕ್ಕೆ ಫೈನಲ್ ಟಿಕೆಟ್
ಸೆಮಿ ಫೈನಲ್‌ನಲ್ಲಿ ದಕ್ಷಿಣ ವಲಯವು ನಾರಾಯಣ್ ಜಗದೀಶನ್ (ಅಜೇಯ 52) ಮತ್ತು ಗುರ್ಜಪ್ನೀತ್ ಸಿಂಗ್ (ನಾಲ್ಕು ವಿಕೆಟ್‌ಗಳು) ಮತ್ತು ಎಂಡಿ ನಿಧಿಶ್ (ಮೂರು ವಿಕೆಟ್‌ಗಳು) ಅವರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಮುನ್ನಡೆ ಪಡೆದುಕೊಂಡಿತು. ತಂಡದ ಪರ ಆರು ಬ್ಯಾಟ್ಸ್‌ಮನ್‌ಗಳು ಅರ್ಧಶತಕಗಳನ್ನು ಗಳಿಸಿದರು. ಅವರಲ್ಲಿ ಶುಭಮ್ ಶರ್ಮಾ (96), ಡ್ಯಾನಿಶ್ ಮಾಲೆವಾರ್ (76), ನಾಯಕ ರಜತ್ ಪಾಟಿದಾರ್ (77), ಉಪೇಂದ್ರ ಯಾದವ್ (87), ಹರ್ಷ್ ದುಬೆ (75) ಮತ್ತು ಸರನ್ಶ್ ಜೈನ್ (63) ಸೇರಿದ್ದಾರೆ. ಇವರ ಆಟದ ಆಧಾರದ ಮೇಲೆ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್ನಲ್ಲಿ 536 ರನ್ ಕಲೆಹಾಕಿತು. ಇತ್ತ ಉತ್ತರ ವಲಯ ತಂಡ 361 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸುವ ಮೂಲಕ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತು. ತಂಡದ ಪರ ಶುಭಮ್ ಖಜುರಿಯಾ (128) ರನ್ ಬಾರಿಸಿದರು. ಅವರನ್ನು ಹೊರತುಪಡಿಸಿ ನಿಶಾಂತ್ ಸಿಂಧು 82 ರನ್ಗಳ ಇನ್ನಿಂಗ್ಸ್ ಆಡಿದರು.
ಫೈನಲ್ಗೇರಿದ ಕೇಂದ್ರ ವಲಯ
ಇನ್ನೊಂದು ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯ ವಿರುದ್ಧದ ಪಂದ್ಯದಲ್ಲಿ ಕೇಂದ್ರ ವಲಯ ತಂಡವು ಆರಂಭದಿಂದಲೂ ಮೇಲುಗೈ ಸಾಧಿಸಿತು. ಪಶ್ಚಿಮ ವಲಯ ತಂಡ ಮೊದಲ ಇನ್ನಿಂಗ್ಸ್ನಲ್ಲಿ 438 ರನ್ ಬಾರಿಸಿದರೆ, ಇತ್ತ ಕೇಂದ್ರ ವಲಯ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 600 ರನ್ ಬಾರಿಸಿ 162 ರನ್ಗಳ ಮುನ್ನಡೆ ಪಡೆಯಿತು. ಇತ್ತ ಪಶ್ಚಿಮ ವಲಯ ತಂಡವು ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 8 ವಿಕೆಟ್ಗಳಿಗೆ 216 ರನ್ ಕಲೆಹಾಕಿತು. ಅಂತಿಮವಾಗಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು. ಇತ್ತ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ರಜತ್ ಪಾಟಿದರ್ ನಾಯಕತ್ವದ ಕೇಂದ್ರ ವಲಯ ತಂಡವು ಫೈನಲ್ಗೇರಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
