AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI Revenue: ಕಳೆದ 5 ವರ್ಷಗಳಲ್ಲಿ ಬಿಸಿಸಿಐ ಗಳಿಸಿದ ಆದಾಯ ಎಷ್ಟು ಸಾವಿರ ಕೋಟಿ ಗೊತ್ತಾ?

BCCI's Massive Wealth: ಕಳೆದ ಐದು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಖಜಾನೆಯು ಭಾರಿ ಪ್ರಮಾಣದಲ್ಲಿ ಬೆಳೆದಿದೆ. ಐಪಿಎಲ್‌ನ ಯಶಸ್ಸಿನಿಂದಾಗಿ ಬಿಸಿಸಿಐನ ಆದಾಯವು 2019 ರ ₹6059 ಕೋಟಿಯಿಂದ 2024 ರ ₹20686 ಕೋಟಿಗೆ ಏರಿಕೆಯಾಗಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಪಂದ್ಯಗಳಿಂದ ಆದಾಯ ಕಡಿಮೆಯಾಗಿದೆ. ಬಿಸಿಸಿಐ ಹೆಚ್ಚಿನ ಹಣವನ್ನು ಮೂಲಸೌಕರ್ಯ ಅಭಿವೃದ್ಧಿ ಮತ್ತು ಕ್ರಿಕೆಟ್ ಪ್ರೋತ್ಸಾಹಕ್ಕಾಗಿ ಮೀಸಲಿಟ್ಟಿದೆ.

BCCI Revenue: ಕಳೆದ 5 ವರ್ಷಗಳಲ್ಲಿ ಬಿಸಿಸಿಐ ಗಳಿಸಿದ ಆದಾಯ ಎಷ್ಟು ಸಾವಿರ ಕೋಟಿ ಗೊತ್ತಾ?
Bcci
ಪೃಥ್ವಿಶಂಕರ
|

Updated on: Sep 07, 2025 | 4:29 PM

Share

ಕ್ರಿಕೆಟ್ ಜನಪ್ರಿಯತೆ ಹೆಚ್ಚಾದಂತೆ ಇತ್ತ ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಬಿಸಿಸಿಐನ ಖಜಾನೆಯ ಗಾತ್ರವೂ ಕೂಡ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿದೆ. ಐಪಿಎಲ್ ಎಂಬ ಚಿನ್ನದ ಮೊಟ್ಟೆಯನ್ನಿಡುವ ಕೋಳಿ ಹುಟ್ಟುವುದಕ್ಕಿಂತ ಮೊದಲು ಆಟಗಾರರ ವೇತನ ನೀಡಲು ಕಷ್ಟಪಡುತ್ತಿದ್ದ ಬಿಸಿಸಿಐ ಇಂದು ಸಾವಿರಾರು ಕೋಟಿಗಳ ಒಡೆಯ. ಇದಕ್ಕೆ ಪೂರಕವಾಗಿ ಕಳೆದ 5 ವರ್ಷಗಳಲ್ಲಿ ಬಿಸಿಸಿಐ ಖಜಾನೆಗೆ ಎಷ್ಟು ಹಣ ಸೇರಿದೆ ಎಂಬ ವರದಿ ಹೊರಬಿದ್ದಿದೆ. ವರದಿಗಳ ಪ್ರಕಾರ, 2019 ರಲ್ಲಿ ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ 6059 ಕೋಟಿ ರೂ.ಗಳಾಗಿತ್ತು. ಆದರೀಗ ಅದು 20686 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಕಳೆದ ಹಣಕಾಸು ವರ್ಷ ಒಂದರಲ್ಲೇ, ಮಂಡಳಿಯು 4193 ಕೋಟಿ ರೂ. ಆದಾಯ ಗಳಿಸಿದೆ.

5 ವರ್ಷಗಳಲ್ಲಿ ಇಷ್ಟೊಂದು ಆದಾಯ

ಕ್ರಿಕ್‌ಬಜ್ ವರದಿಗಳ ಪ್ರಕಾರ, ಕಳೆದ 5 ವರ್ಷಗಳಲ್ಲಿ ಬಿಸಿಸಿಐನ ಬ್ಯಾಂಕ್ ಬ್ಯಾಲೆನ್ಸ್ 14627 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 28 ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಮಂಡಳಿಯ ಈ ಗಳಿಕೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಬಹುದು. 2019 ರಿಂದ ಕಳೆದ ಐದು ವರ್ಷಗಳಲ್ಲಿ ಮಂಡಳಿಯ ಖಾತೆಗೆ 14,627 ಕೋಟಿ ರೂ.ಗಳು ಹರಿದುಬಂದಿದೆ. ಇದಲ್ಲದೆ, 2019 ರಿಂದ ಸಾಮಾನ್ಯ ನಿಧಿಯು 3,906 ಕೋಟಿ ರೂ.ಗಳಿಂದ 7,988 ಕೋಟಿ ರೂ.ಗಳಿಗೆ ಏರಿದೆ. ಹಾಗೆಯೇ 2023-24 ನೇ ಸಾಲಿಗೆ ಮಂಡಳಿಯು ತೆರಿಗೆಗಾಗಿಯೇ 3150 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ವರದಿಗಳ ಪ್ರಕಾರ, ಬಿಸಿಸಿಐನ ಗಳಿಕೆ ಇನ್ನು ಹೆಚ್ಚಿರುತ್ತಿತ್ತು, ಆದರೆ ಕೆಲವು ಕಾರಣಗಳಿಂದಾಗಿ ಅದರ ಲಾಭ ಕಡಿಮೆಯಾಗಿದೆ.

ಬಿಸಿಸಿಐ ಆದಾಯದಲ್ಲಿ ಇಳಿಕೆ

ವರದಿಗಳ ಪ್ರಕಾರ, ಬಿಸಿಸಿಐ ಬೋಕಸಕ್ಕೆ ಇನ್ನು ಹೆಚ್ಚು ಆದಾಯ ಬರುತ್ತಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಅಂತರರಾಷ್ಟ್ರೀಯ ಪಂದ್ಯಗಳಿಂದ ಅದರ ಗಳಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಕಳೆದ ವರ್ಷ, ಬಿಸಿಸಿಐ ಅಂತರರಾಷ್ಟ್ರೀಯ ಪಂದ್ಯಗಳ ಮಾಧ್ಯಮ ಹಕ್ಕುಗಳಿಂದ 2,524.80 ಕೋಟಿ ರೂ. ಗಳಿಸಿತ್ತು. ಆದರೆ ಈ ಬಾರಿ ಅದು 813.14 ಕೋಟಿ ರೂ.ಗೆ ಇಳಿದಿದೆ. ಇದಕ್ಕೆ ಕಾರಣ ಅಂತರರಾಷ್ಟ್ರೀಯ ಪಂದ್ಯಗಳ ಆಯೋಜನೆ ಕಡಿಮೆಯಾಗಿರುವುದು.

ವರದಿಗಳ ಪ್ರಕಾರ, 2023 ರಲ್ಲಿ, ಬಿಸಿಸಿಐ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಅನ್ನು ಆಯೋಜಿಸಿತ್ತು . ಇದಲ್ಲದೆ, ಕಳೆದ ವರ್ಷ, ಟೀಂ ಇಂಡಿಯಾದ ಅಂತರರಾಷ್ಟ್ರೀಯ ಪ್ರವಾಸಗಳಿಂದ 642.78 ಕೋಟಿ ರೂ. ಗಳಿಸಲಾಗಿತ್ತು, ಅದು ಈಗ 361.22 ಕೋಟಿ ರೂ.ಗೆ ಇಳಿದಿದೆ. ಇದಲ್ಲದೆ, ಬಿಸಿಸಿಐ ಬ್ಯಾಂಕ್ ಠೇವಣಿಗಳಿಂದ ಬಡ್ಡಿ ರೂಪದಲ್ಲಿ 986.45 ಕೋಟಿ ರೂ. ಗಳಿಸಿತ್ತು. ಆದರೆ ಈ ಬಾರಿ ಅದು ಕೇವಲ 533.05 ಕೋಟಿ ರೂ.ಗೆ ಇಳಿದಿದೆ.

ಬಿಸಿಸಿಐ ವೆಚ್ಚವೂ ಹೆಚ್ಚಾಗಿದೆ

ಆದಾಯದ ಜೊತೆಗೆ, ಮಂಡಳಿಯ ಖರ್ಚು ಕೂಡ ಹೆಚ್ಚಾಗಿದೆ. ಕಳೆದ ವರ್ಷ, 1,167.99 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು, ಅದು ಈಗ 1,623.08 ಕೋಟಿ ರೂ.ಗಳಿಗೆ ಏರಿದೆ. ಇದಲ್ಲದೆ, ಬಿಸಿಸಿಐ ಮೂಲಸೌಕರ್ಯ ಅಭಿವೃದ್ಧಿಗಾಗಿ 1200 ಕೋಟಿ ರೂ.ಗಳನ್ನು, ಪ್ಲಾಟಿನಂ ಜುಬಿಲಿ ಬೆನೆವೊಲೆಂಟ್ ಫಂಡ್‌ಗೆ 350 ಕೋಟಿ ರೂ.ಗಳನ್ನು ಮತ್ತು ಕ್ರಿಕೆಟ್ ಅಭಿವೃದ್ಧಿ ನಿಧಿಯ ಮೂಲಸೌಕರ್ಯಕ್ಕಾಗಿ 500 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ