AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: 5+3+3.. ಪಾಕ್ ವಿರುದ್ಧ ಈ ಸೂತ್ರದೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

India vs Pakistan Asia Cup 2025: ಏಷ್ಯಾ ಕಪ್ 2025 ರಲ್ಲಿ ಯುಎಇ ವಿರುದ್ಧ ಭಾರತದ ಗೆಲುವಿನ ನಂತರ, ಪಾಕಿಸ್ತಾನದ ವಿರುದ್ಧದ ಹೈ-ವೋಲ್ಟೇಜ್ ಪಂದ್ಯಕ್ಕೆ ಎಲ್ಲರೂ ಕಾತುರರಾಗಿದ್ದಾರೆ. ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರು ಭಾರತದ ಸಂಭಾವ್ಯ ಆಡುವ ಹನ್ನೊಂದರ ಬಳಗವನ್ನು ಊಹಿಸಿದ್ದು, ಐದು ಬ್ಯಾಟ್ಸ್‌ಮನ್‌ಗಳು, ಮೂವರು ಆಲ್‌ರೌಂಡರ್‌ಗಳು ಮತ್ತು ಮೂವರು ಬೌಲರ್‌ಗಳನ್ನು ಒಳಗೊಂಡ ತಂಡವನ್ನು ಹೆಸರಿಸಿದ್ದಾರೆ. ಯುಎಇ ವಿರುದ್ಧ ಆಡಿದ ತಂಡವೇ ಪಾಕಿಸ್ತಾನ ವಿರುದ್ಧವೂ ಆಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Asia Cup 2025: 5+3+3.. ಪಾಕ್ ವಿರುದ್ಧ ಈ ಸೂತ್ರದೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
Team India
ಪೃಥ್ವಿಶಂಕರ
|

Updated on: Sep 11, 2025 | 6:01 PM

Share

2025 ರ ಏಷ್ಯಾಕಪ್​​ನಲ್ಲಿ (Asia Cup 2025) ಯುಎಇ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇದೀಗ ಪಾಕಿಸ್ತಾನ (India vs Pakistan) ವಿರುದ್ಧದ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿದೆ. ಸೂಪರ್ ಸಂಡೇಯಂದು ನಡೆಯಲಿರುವ ಉಭಯ ತಂಡಗಳ ಕದನಕ್ಕೆ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 14 ರಂದು ನಡೆಯಲಿರುವ ಈ ಪಂದ್ಯಕ್ಕಾಗಿ, ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಬದ್ಧವೈರಿಯ ವಿರುದ್ಧ ಟೀಂ ಇಂಡಿಯಾ ಐವರು ಬ್ಯಾಟ್ಸ್‌ಮನ್‌ಗಳು, ಮೂವರು ಆಲ್‌ರೌಂಡರ್‌ಗಳು ಮತ್ತು ಮೂವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹೇಳಿದ್ದಾರೆ.

ಅಜಯ್ ಜಡೇಜಾ ಹೇಳಿದ್ದಿದು

ಅಜಯ್ ಜಡೇಜಾ ಅವರ ಪ್ರಕಾರ, ಯುಎಇ ವಿರುದ್ಧ ಆಡಿದ ಅದೇ ತಂಡವು ಪಾಕಿಸ್ತಾನದ ವಿರುದ್ಧವೂ ಆಡುವುದನ್ನು ಕಾಣಬಹುದು. ಅಂದರೆ, ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಯುಎಇ ವಿರುದ್ಧದ ಪಂದ್ಯ ಪ್ರಾರಂಭವಾಗುವ ಸ್ವಲ್ಪ ಮೊದಲು ಏಷ್ಯಾಕಪ್ ಪ್ರಸಾರ ಚಾನೆಲ್ ಸೋನಿ ನೆಟ್‌ವರ್ಕ್‌ನಲ್ಲಿ ಅಜಯ್ ಜಡೇಜಾ ಈ ವಿಷಯವನ್ನು ಹೇಳಿದ್ದರು.

ಯುಎಇ ವಿರುದ್ಧ ಭಾರತದ ಆಡುವ ಹನ್ನೊಂದರ ಬಳಗದ ಬಗ್ಗೆ ಚರ್ಚಿಸುವಾಗ ಅಜಯ್ ಜಡೇಜಾ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಯುಎಇ ವಿರುದ್ಧ ಭಾರತ 8 ಬ್ಯಾಟ್ಸ್‌ಮನ್‌ಗಳನ್ನು ಆಡಿಸಬಾರದಿತ್ತು. ಆದಾಗ್ಯೂ ತಂಡದಲ್ಲಿ 8 ಬ್ಯಾಟ್ಸ್‌ಮನ್​ಗಳನ್ನು ಕಣಕ್ಕಿಳಿಸಿರುವುದರಿಂದ ಇದೇ ತಂಡವೇ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಅಂದರೆ, ಯುಎಇ ವಿರುದ್ಧ ಆಡಿದ ಅದೇ ತಂಡ ಪಾಕಿಸ್ತಾನದ ವಿರುದ್ಧವೂ ಆಡುತ್ತದೆ ಎಂಬುದು ಅಜಯ್ ಜಡೇಜಾ ಅಭಿಪ್ರಾಯವಾಗಿದೆ.

Asia Cup 2025: 4 ವಿಕೆಟ್ ಉರುಳಿಸಿದ ಕುಲ್ದೀಪ್​ಗೆ ಪಾಕ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶವಿಲ್ಲ

ಭಾರತದ ಪ್ಲೇಯಿಂಗ್ XI ಆಗಿರಬಹುದು

ಬ್ಯಾಟ್ಸ್‌ಮನ್‌ಗಳು- ಶುಭ್​ಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)

ಆಲ್‌ರೌಂಡರ್‌ಗಳು- ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್

ಬೌಲರ್‌ಗಳು- ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ
ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ
ಯತೀಂದ್ರ ಕಾಂಗ್ರೆಸ್ ಪಕ್ಷದ ಹೈಕಮಾಂಡ್: ಡಿಕೆ ಶಿವಕುಮಾರ್ ಮಾತಿನ ಮರ್ಮಾವೇನು?
ಯತೀಂದ್ರ ಕಾಂಗ್ರೆಸ್ ಪಕ್ಷದ ಹೈಕಮಾಂಡ್: ಡಿಕೆ ಶಿವಕುಮಾರ್ ಮಾತಿನ ಮರ್ಮಾವೇನು?
ಸತೀಶ್ ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಲಕ್ಷ್ಮೀ ಹೆಬ್ಬಾಳಕರ್..!
ಸತೀಶ್ ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಲಕ್ಷ್ಮೀ ಹೆಬ್ಬಾಳಕರ್..!
3 ಭಾಷೆಯಲ್ಲಿ ತಾನೇ ಬರೆದ ಗೀತೆ ಹಾಡಿದ ಬಾಲಕಿ; ಪ್ರಧಾನಿ ಮೋದಿ ಮೆಚ್ಚುಗೆ
3 ಭಾಷೆಯಲ್ಲಿ ತಾನೇ ಬರೆದ ಗೀತೆ ಹಾಡಿದ ಬಾಲಕಿ; ಪ್ರಧಾನಿ ಮೋದಿ ಮೆಚ್ಚುಗೆ
ಕಳೆದು ಹೋದ ಸಮಯದ ಬಗ್ಗೆ ಚಿಂತೆ ಬೇಡ, ಭವಿಷ್ಯದ ಬಗ್ಗೆ ಗಮನಕೊಡಿ: ಮೋದಿ
ಕಳೆದು ಹೋದ ಸಮಯದ ಬಗ್ಗೆ ಚಿಂತೆ ಬೇಡ, ಭವಿಷ್ಯದ ಬಗ್ಗೆ ಗಮನಕೊಡಿ: ಮೋದಿ
ಇಂದು ನಾನು ಕಷ್ಟಪಟ್ಟು 'ವಿಕಸಿತ ಭಾರತ'ದ ಬುನಾದಿ ಹಾಕುತ್ತಿರುವುದು ನಿಮಗಾಗಿ
ಇಂದು ನಾನು ಕಷ್ಟಪಟ್ಟು 'ವಿಕಸಿತ ಭಾರತ'ದ ಬುನಾದಿ ಹಾಕುತ್ತಿರುವುದು ನಿಮಗಾಗಿ
ಎಎಪಿ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಕೊಲೆ
ಎಎಪಿ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಕೊಲೆ
ತಂತ್ರಜ್ಞಾನ ಶಾಪ ಎಂದು ಭಾವಿಸುವ ಬದಲು "ವರದಾನ" ಎಂದು ಸ್ವೀಕರಿಸಿ
ತಂತ್ರಜ್ಞಾನ ಶಾಪ ಎಂದು ಭಾವಿಸುವ ಬದಲು