Duleep Trophy: 16 ಎಸೆತಗಳಲ್ಲಿ 74 ರನ್ ಚಚ್ಚಿದ ಟೀಂ ಇಂಡಿಯಾದ ಆರಂಭಿಕ ಆಟಗಾರ..!

Duleep Trophy: ಪೃಥ್ವಿ ಶಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9ನೇ ಶತಕ ಸಿಡಿಸಿದ್ದು, ಇದರೊಂದಿಗೆ ಅವರು ಇಲ್ಲಿಯವರೆಗೆ 34 ಪ್ರಥಮ ದರ್ಜೆ ಪಂದ್ಯಗಳಲ್ಲಿ 2769 ರನ್ ಗಳಿಸಿದ್ದಾರೆ.

Duleep Trophy: 16 ಎಸೆತಗಳಲ್ಲಿ 74 ರನ್ ಚಚ್ಚಿದ ಟೀಂ ಇಂಡಿಯಾದ ಆರಂಭಿಕ ಆಟಗಾರ..!
prithvi shaw
Follow us
TV9 Web
| Updated By: ಪೃಥ್ವಿಶಂಕರ

Updated on:Sep 09, 2022 | 3:02 PM

ಏಷ್ಯಾಕಪ್​ನಲ್ಲಿ (Asia Cup 2022) ನಡೆದಿದ್ದನ್ನು ಮರೆತು ಟೀಂ ಇಂಡಿಯಾ ಈಗ ಮುನ್ನಡೆದಿದೆ. ಮುಂದೆ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಸ್ವದೇಶಿ ಸರಣಿಗಳನ್ನು ಆಡಬೇಕಾಗಿದೆ. ನಂತರ ಟಿ 20 ವಿಶ್ವಕಪ್ (T20 World Cup) ಇದ್ದು, ಇದಕ್ಕಾಗಿ ಟೀಮ್ ಇಂಡಿಯಾವನ್ನು ಸಹ ಆಯ್ಕೆ ಮಾಡಲಿದ್ದಾರೆ. ಆದರೆ, ಆ ಆಯ್ಕೆಗೂ ಮುನ್ನವೇ ಭಾರತದ ಆರಂಭಿಕ ಆಟಗಾರ ಅಬ್ಬರದ ಶತಕ ಬಾರಿಸಿದ್ದಾರೆ. 22ರ ಹರೆಯದ ಭಾರತೀಯ ಆರಂಭಿಕ ಆಟಗಾರ ಈ ರೀತಿಯಾಗಿ ಫಾರ್ಮ್​ಗೆ ಮರಳಿರುವುದು ಭಾರತೀಯ ಕ್ರಿಕೆಟ್‌ನ ದೃಷ್ಟಿಕೋನದಿಂದ ಉತ್ತಮ ಸಂಕೇತವಾಗಿದೆ. ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುತ್ತಾರೋ ಇಲ್ಲವೋ ಎಂಬುದು ಆಮೇಲೆ ತಿಳಿಯಲಿದೆ. ಆದರೆ ಸದ್ಯಕ್ಕೆ ಅವರ ಬ್ಯಾಟ್‌ನಿಂದ ರನ್ ಸಿಡಿಯುತ್ತಿರುವುದು ಸಮಾಧಾನ ತಂದಿದೆ. ಅಷ್ಟಕ್ಕೂ ಆ ಭಾರತೀಯ ಓಪನರ್ ಯಾರು ಎಂದು ಈಗ ನೀವು ಯೋಚಿಸುತ್ತಿರಬೇಕು?. ಅಷ್ಟಕ್ಕೂ ದೇಶೀಯ ಟೂರ್ನಿ ದುಲೀಪ್ ಟ್ರೋಫಿಯಲ್ಲಿ ಶತಕ ಸಿಡಿಸಿದ ಪೃಥ್ವಿ ಶಾ (Prithvi Shaw) ಬಗ್ಗೆ ನಾವು ಮಾತನಾಡುತ್ತಿದ್ದೇವೆ.

ದುಲೀಪ್ ಟ್ರೋಫಿಯಲ್ಲಿ ಪೃಥ್ವಿ ಶಾ ಶತಕ

ಪೃಥ್ವಿ ಶಾ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡದ ಭಾಗವಾಗಿದ್ದು, ಈಶಾನ್ಯ ವಲಯದ ವಿರುದ್ಧದ ಪಂದ್ಯದಲ್ಲಿ 121 ಎಸೆತಗಳಲ್ಲಿ 113 ರನ್ ಗಳಿಸಿದ್ದಾರೆ. ಈ ವೇಳೆ ಅವರು 11 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅದೇನೆಂದರೆ, ಅವರ ಶತಕ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 16 ಎಸೆತಗಳಲ್ಲಿ ಬೌಂಡರಿಗಳ ಮೂಲಕ 74 ರನ್ ಗಳಿಸಿದ್ದಾರೆ.

ಶಾ ಅದ್ಭುತ ಇನ್ನಿಂಗ್ಸ್‌, ಪಶ್ಚಿಮ ವಲಯಕ್ಕೆ ಬಲ

ಪಂದ್ಯದಲ್ಲಿ ಓಪನಿಂಗ್​ಗೆ ಇಳಿದ ಪೃಥ್ವಿ ಆರಂಭದಿಂದಲೂ ಲಯದಲ್ಲಿಯೇ ಕಾಣಿಸಿಕೊಂಡರು. ಮೈದಾನದ ಮೂಲೆ ಮೂಲೆಯಿಂದಲೂ ಅವರು ರನ್ ಕಲೆಹಾಕುತ್ತಿರುವುದು ಕಂಡು ಬಂತು. ಜೊತೆಗೆ ಅವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕ ವಿಕೆಟ್‌ಗೆ ಸ್ಕೋರ್ ಬೋರ್ಡ್‌ಗೆ 206 ರನ್ ಸೇರಿಸಿದರು. ಈ ಆರಂಭಿಕ ಜೊತೆಯಾಟದ ಫಲಿತಾಂಶವೆಂದರೆ ಪಶ್ಚಿಮ ವಲಯ ತಂಡವು ಈಶಾನ್ಯ ವಲಯದ ವಿರುದ್ಧ ಉತ್ತಮ ಮುನ್ನಡೆಯನ್ನು ಸಾಧಿಸಿದೆ.

ಪೃಥ್ವಿ ಶಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9ನೇ ಶತಕ ಸಿಡಿಸಿದ್ದು, ಇದರೊಂದಿಗೆ ಅವರು ಇಲ್ಲಿಯವರೆಗೆ 34 ಪ್ರಥಮ ದರ್ಜೆ ಪಂದ್ಯಗಳಲ್ಲಿ 2769 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 9 ಶತಕಗಳ ಹೊರತಾಗಿ 13 ಅರ್ಧಶತಕಗಳನ್ನು ಗಳಿಸಿದ್ದಾರೆ.

Published On - 3:02 pm, Fri, 9 September 22

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್