Dwayne Smith: 7 ಭರ್ಜರಿ ಸಿಕ್ಸ್​, 14 ಫೋರ್: ತೂಫಾನ್ ಸೆಂಚುರಿಸಿ ಸಿಡಿಸಿದ ಸ್ಮಿತ್

| Updated By: ಝಾಹಿರ್ ಯೂಸುಫ್

Updated on: Dec 05, 2023 | 11:41 PM

Dwayne Smith: ಶತಕದ ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸ್ಮಿತ್ 53 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 120 ರನ್ ಬಾರಿಸಿ ಪಂಕಜ್ ಸಿಂಗ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಅಂತಿಮ ಹಂತದಲ್ಲಿ ಗುರಕೀರತ್ ಸಿಂಗ್ 39 ರನ್​ಗಳ ಕೊಡುಗೆ ನೀಡಿದರು.

Dwayne Smith: 7 ಭರ್ಜರಿ ಸಿಕ್ಸ್​, 14 ಫೋರ್: ತೂಫಾನ್ ಸೆಂಚುರಿಸಿ ಸಿಡಿಸಿದ ಸ್ಮಿತ್
Dwayne Smith
Follow us on

ಸೂರತ್​​ನ ಲಾಲ್​ಭಾಯ್ ಮೈದಾನದಲ್ಲಿ ನಡೆದ ಲೆಜೆಂಡ್ಸ್​ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡ್ವೇನ್ ಸ್ಮಿತ್ (Dwayne Smith)  ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಅರ್ಬನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪಾಲ್ ಟೈಗರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಅರ್ಬನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಟಗಾರ ಡ್ವೇನ್ ಸ್ಮಿತ್ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಅಬ್ಬರಿಸಲಾರಂಭಿಸಿದ ವಿಂಡೀಸ್ ಆಟಗಾರ ಮಣಿಪಾಲ್ ಟೈಗರ್ಸ್ ಬೌಲರ್​ಗಳ ಬೆಂಡೆತ್ತಿದರು.

ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದ ಡ್ವೇನ್ ಸ್ಮಿತ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕವೇ 42 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಲೆಜೆಂಡ್ಸ್ ಲೀಗ್​ನಲ್ಲಿ ಅತ್ಯಂತ ವೇಗವಾಗಿ ಶತಕ ಬಾರಿಸಿದ ಹೊಸ ದಾಖಲೆಯನ್ನು ಸ್ಮಿತ್ ತಮ್ಮದಾಗಿಸಿಕೊಂಡರು.

ಇನ್ನು ಶತಕದ ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸ್ಮಿತ್ 53 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 120 ರನ್ ಬಾರಿಸಿ ಪಂಕಜ್ ಸಿಂಗ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಅಂತಿಮ ಹಂತದಲ್ಲಿ ಗುರಕೀರತ್ ಸಿಂಗ್ 39 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಅರ್ಬನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 253 ರನ್ ಕಲೆಹಾಕಿತು.

254 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮಣಿಪಾಲ್ ಟೈಗರ್ಸ್ ಪರ ಏಂಜೆಲೊ ಪೆರೇರಾ 30 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 73 ರನ್​ ಬಾರಿಸಿದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಲ್ಲದೆ 16.3 ಓವರ್​ಗಳಲ್ಲಿ 178 ರನ್ ಬಾರಿಸಿ ಆಲೌಟ್ ಆದರು. ಈ ಮೂಲಕ ಅರ್ಬನ್ ರೈಸರ್ಸ್ ಹೈದರಾಬಾದ್ ಈ ಪಂದ್ಯದಲ್ಲಿ 75 ರನ್​ಗಳ ಭರ್ಜರಿ ಜಯ ಸಾಧಿಸಿ ಫೈನಲ್​ಗೆ ಪ್ರವೇಶಿಸಿದೆ.

ಮಣಿಪಾಲ್ ಟೈಗರ್ಸ್ ಪ್ಲೇಯಿಂಗ್ ಇಲೆವೆನ್: ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್) , ಮೊಹಮ್ಮದ್ ಕೈಫ್ (ನಾಯಕ) , ಕಾಲಿನ್ ಡಿ ಗ್ರ್ಯಾಂಡ್‌ಹೋಮ್ , ಏಂಜೆಲೊ ಪೆರೆರಾ , ಅಸೆಲಾ ಗುಣರತ್ನೆ , ತಿಸಾರಾ ಪೆರೆರಾ , ಅಮಿತ್ ವರ್ಮಾ , ಇಮ್ರಾನ್ ಖಾನ್ , ಮಿಚೆಲ್ ಮೆಕ್‌ಕ್ಲೆನಾಘನ್ , ಪ್ರವೀಣ್ ಗುಪ್ತಾ , ಪಂಕಜ್ ಸಿಂಗ್ , ಕೈಲ್ ಕೋಟ್ಜರ್.

ಇದನ್ನೂ ಓದಿ: IPL 2024: ಈ ಆಟಗಾರರು ಹರಾಜಾಗುವುದು ಡೌಟ್..!

ಅರ್ಬನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಮಾರ್ಟಿನ್ ಗಪ್ಟಿಲ್ , ಡ್ವೇನ್ ಸ್ಮಿತ್ , ರಿಕ್ಕಿ ಕ್ಲಾರ್ಕ್ , ಗುರುಕೀರತ್ ಸಿಂಗ್ ಮಾನ್ , ಸುರೇಶ್ ರೈನಾ (ನಾಯಕ) , ಪೀಟರ್ ಟ್ರೆಗೊ , ಸ್ಟುವರ್ಟ್ ಬಿನ್ನಿ , ಅಸ್ಗರ್ ಅಫ್ಘಾನ್ , ಅಮಿತ್ ಪೌನಿಕರ್ (ವಿಕೆಟ್ ಕೀಪರ್) , ಪವನ್ ಸುಯಲ್ , ಕ್ರಿಸ್ ಎಂಪೋಫು , ಜೆರೋಮ್ ಟೇಲರ್.

 

Published On - 11:18 pm, Tue, 5 December 23