India A vs Pakistan A: ಸಾಯಿ ಸೆಂಚುರಿ: ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ

| Updated By: ಝಾಹಿರ್ ಯೂಸುಫ್

Updated on: Jul 19, 2023 | 9:08 PM

Emerging Teams Asia Cup 2023: ಅಂತಿಮ ಹಂತದಲ್ಲಿ ಬಿಗಿ ದಾಳಿ ಸಂಘಟಿಸಿದ ರಾಜವರ್ಧನ್ ಹಂಗರ್ಗೇಕರ್ ಮೊಹಮ್ಮದ್ ವಾಸಿಂ ಜೂನಿಯರ್ (8) ಹಾಗೂ ಶಹನವಾಝ್ ದಹನಿ (4) ಗೆ ಪೆವಿಲಿಯನ್ ಹಾದಿ ತೋರಿಸಿದರು.

India A vs Pakistan A: ಸಾಯಿ ಸೆಂಚುರಿ: ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ
INDIA A
Follow us on

India A vs Pakistan A: ಉದಯೋನ್ಮುಖ ತಂಡಗಳ ಏಷ್ಯಾಕಪ್​ ಟೂರ್ನಿಯಲ್ಲಿ ಪಾಕಿಸ್ತಾನ್ ಎ ತಂಡದ ವಿರುದ್ಧ ಭಾರತ ಎ ತಂಡವು ಭರ್ಜರಿ ಜಯ ಸಾಧಿಸಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಇತ್ತ ಟೀಮ್ ಇಂಡಿಯಾ ಪರ ಕರಾರುವಾಕ್ ದಾಳಿ ಸಂಘಟಿಸಿದ ರಾಜವರ್ಧನ್ ರಾಜವರ್ಧನ್ ಹಂಗರ್ಗೇಕರ್ ಪಾಕ್ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು.

ತಮ್ಮ ನಾಲ್ಕನೇ ಓವರ್​ನಲ್ಲಿ ಸೈಮ್ ಅಯೂಬ್ (0) ಹಾಗೂ ಒಮೈರ್ ಯೂಸುಫ್ (0) ವಿಕೆಟ್ ಕಬಳಿಸಿದ ರಾಜವರ್ಧನ್ ಟೀಮ್ ಇಂಡಿಯಾಗೆ ಆರಂಭಿಕ ಯಶಸ್ಸು ತಂದುಕೊಟ್ಟರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಖಾಸಿಂ ಅಕ್ರಮ್ 48 ರನ್​ ಕಲೆಹಾಕಿ ತಂಡಕ್ಕೆ ಆಸರೆಯಾದರು. ಈ ವೇಳೆ ಮತ್ತೆ ದಾಳಿಗಿಳಿದಿ ರಾಜವರ್ಧನ್ ಖಾಸಿಂ ವಿಕೆಟ್ ಉರುಳಿಸಿದರು. ಇನ್ನೊಂದೆಡೆ ಮಾನವ್ ಸುತಾರ್ ಕೂಡ 3 ವಿಕೆಟ್ ಕಬಳಿಸಿ ಉತ್ತಮ ಸಾಥ್ ನೀಡಿದರು.

ಇನ್ನು ಅಂತಿಮ ಹಂತದಲ್ಲಿ ಬಿಗಿ ದಾಳಿ ಸಂಘಟಿಸಿದ ರಾಜವರ್ಧನ್ ಹಂಗರ್ಗೇಕರ್ ಮೊಹಮ್ಮದ್ ವಾಸಿಂ ಜೂನಿಯರ್ (8) ಹಾಗೂ ಶಹನವಾಝ್ ದಹನಿ (4) ಗೆ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ 48 ಓವರ್​ಗಳಲ್ಲಿ 205 ರನ್​ಗಳಿಗೆ ಪಾಕಿಸ್ತಾನ್ ತಂಡವು ಆಲೌಟ್ ಆಯಿತು.

ಟೀಮ್ ಇಂಡಿಯಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ರಾಜವರ್ಧನ್ ಹಂಗರ್ಗೇಕರ್ 42 ರನ್ ನೀಡಿ 8 ವಿಕೆಟ್ ಕಬಳಿಸಿದರೆ. ಮಾನವ್ ಸುತಾರ್ 36 ರನ್​ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಇನ್ನು 206 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾಗೆ ಎಡಗೈ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 58 ರನ್​ಗಳ ಜೊತೆಯಾಟವಾಡಿ ಅಭಿಷೇಕ್ ಶರ್ಮಾ (20) ಔಟಾದರು. ಆ ಬಳಿಕ ಬಂದ ಕನ್ನಡಿಗ ನಿಕಿನ್ ಜೋಸ್ 64 ಎಸೆತಗಳಲ್ಲಿ 7 ಫೋರ್​ಗಳೊಂದಿಗೆ 53 ರನ್​ ಚಚ್ಚಿದರು.

ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ರನ್ ಪೇರಿಸುತ್ತಾ ಸಾಗಿದ ಸಾಯಿ ಸುದರ್ಶನ್ ಸಿಕ್ಸ್ ಸಿಡಿಸುವ ಮೂಲಕ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 35 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ 191 ರನ್ ಕಲೆಹಾಕಿತು.

ಅಂತಿಮವಾಗಿ ಯಶ್ ಧುಲ್ (21) ಜೊತೆಗೂಡಿ 110 ಎಸೆತಗಳಲ್ಲಿ ಅಜೇಯ 104 ರನ್​ ಬಾರಿಸುವ ಮೂಲಕ ಸಾಯಿ ಸುದರ್ಶನ್ 36.4 ಓವರ್​ಗಳಲ್ಲಿ ಟೀಮ್ ಇಂಡಿಯಾವನ್ನು ಗುರಿ ಮುಟ್ಟಿಸಿದರು. ಈ ಭಾರತ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಭಾರತ ಎ ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಅಭಿಷೇಕ್ ಶರ್ಮಾ , ನಿಕಿನ್ ಜೋಸ್ , ಯಶ್ ಧುಲ್ (ನಾಯಕ) , ರಿಯಾನ್ ಪರಾಗ್ , ನಿಶಾಂತ್ ಸಿಂಧು , ಧ್ರುವ್ ಜುರೆಲ್ ( ​​ವಿಕೆಟ್ ಕೀಪರ್ ) , ಮಾನವ್ ಸುತಾರ್ , ಹರ್ಷಿತ್ ರಾಣಾ , ನಿತೀಶ್ ರೆಡ್ಡಿ , ರಾಜವರ್ಧನ್ ಹಂಗರ್ಗೇಕರ್.

ಇದನ್ನೂ ಓದಿ: Asia Cup 2023 Schedule: ಏಷ್ಯಾಕಪ್ ವೇಳಾಪಟ್ಟಿ ಪ್ರಕಟ

ಪಾಕಿಸ್ತಾನ್ ಎ ಪ್ಲೇಯಿಂಗ್ 11: ಸೈಮ್ ಅಯೂಬ್ , ಹಸೀಬುಲ್ಲಾ ಖಾನ್ , ಮೊಹಮ್ಮದ್ ಹ್ಯಾರಿಸ್ (ನಾಯಕ) , ಕಮ್ರಾನ್ ಗುಲಾಮ್ , ಸಾಹಿಬ್ಜಾದಾ ಫರ್ಹಾನ್ , ಒಮೈರ್ ಯೂಸುಫ್ , ಖಾಸಿಮ್ ಅಕ್ರಮ್ , ಮುಬಾಸಿರ್ ಖಾನ್ , ಮೆಹ್ರಾನ್ ಮುಮ್ತಾಜ್ , ಮೊಹಮ್ಮದ್ ವಾಸಿಮ್ ಜೂನಿಯರ್ , ಶಾನವಾಜ್ ದಹನಿ.

 

Published On - 8:34 pm, Wed, 19 July 23