Sri Lanka vs Pakistan: ಪಾಕ್ಗೆ 131 ರನ್ಗಳ ಗುರಿ ನೀಡಿದ ಶ್ರೀಲಂಕಾ: ಕುತೂಹಲಘಟ್ಟದಲ್ಲಿ ಪಂದ್ಯ
Sri Lanka vs Pakistan, 1st Test: ಶ್ರೀಲಂಕಾ ತಂಡವು 7 ವಿಕೆಟ್ ಕಬಳಿಸಿದರೆ ಪಂದ್ಯವನ್ನು ಜಯಿಸಬಹುದು. ಹೀಗಾಗಿಯೇ ಅಂತಿಮ ದಿನದಾಟದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
Sri Lanka vs Pakistan: ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಧನಂಜಯ ಡಿಸಿಲ್ವಾ (122) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 312 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಪಾಕಿಸ್ತಾನ್ ಪರ ಮೊದಲ ಇನಿಂಗ್ಸ್ನಲ್ಲಿ ಸೌದ್ ಶಕೀಲ್ (208) ಅಜೇಯ ದ್ವಿಶತಕ ಸಿಡಿಸಿದ್ದರು. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ಪಾಕ್ ತಂಡವು 461 ರನ್ ಕಲೆಹಾಕಿತು.
149 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಮತ್ತೊಮ್ಮೆ ಬ್ಯಾಟಿಂಗ್ ಕುಸಿತಕ್ಕೊಳಗಾಯಿತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ 82 ರನ್ ಬಾರಿಸಿ ಧನಂಜಯ ಡಿಸಿಲ್ವಾ ಮತ್ತೊಮ್ಮೆ ಆಸರೆಯಾದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಶ್ರೀಲಂಕಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 279 ರನ್ಗಳಿಗೆ ಆಲೌಟ್ ಆಯಿತು.
ಅತ್ತ ಮೊದಲ ಇನಿಂಗ್ಸ್ನಲ್ಲಿ 149 ರನ್ಗಳ ಮುನ್ನಡೆದಿದ್ದ ಪಾಕಿಸ್ತಾನ್ ತಂಡಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 131 ರನ್ಗಳ ಗುರಿ ಪಡೆಯಿತು. ಆದರೆ ಈ ಮೊತ್ತವನ್ನು ಬೆನ್ನತ್ತಿದ ಪಾಕ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಶ್ರೀಲಂಕಾ ಬೌಲರ್ಗಳು ಯಶಸ್ವಿಯಾಗಿದ್ದಾರೆ.
ನಾಲ್ಕನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ್ ತಂಡವು 48 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಸದ್ಯ ಕ್ರೀಸ್ನಲ್ಲಿ ಬಾಬರ್ ಆಝಂ (6) ಹಾಗೂ ಇಮಾಮ್ ಉಲ್ ಹಕ್ (25) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಲ್ಲದೆ 5ನೇ ದಿನದಾಟದಲ್ಲಿ 83 ರನ್ ಕಲೆಹಾಕಬೇಕಿದೆ.
ಅತ್ತ ಶ್ರೀಲಂಕಾ ತಂಡವು 7 ವಿಕೆಟ್ ಕಬಳಿಸಿದರೆ ಪಂದ್ಯವನ್ನು ಜಯಿಸಬಹುದು. ಹೀಗಾಗಿಯೇ ಅಂತಿಮ ದಿನದಾಟದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣಾರತ್ನೆ (ನಾಯಕ) , ನಿಶಾನ್ ಮದುಷ್ಕ , ಕುಸಲ್ ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ಧನಂಜಯ ಡಿ ಸಿಲ್ವಾ , ದಿನೇಶ್ ಚಂಡಿಮಲ್ , ಸದೀರ ಸಮರವಿಕ್ರಮ (ವಿಕೆಟ್ ಕೀಪರ್) , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ವಿಶ್ವ ಫೆರ್ನಾಂಡೋ , ಕಸುನ್ ರಜಿತ.
ಇದನ್ನೂ ಓದಿ: Saud Shakeel: ಸಚಿನ್, ಸೆಹ್ವಾಗ್ ದಾಖಲೆ ಸರಿಗಟ್ಟಿದ ಸೌದ್ ಶಕೀಲ್
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಖ್, ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) , ಸೌದ್ ಶಕೀಲ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಅಘ ಸಲ್ಮಾನ್ , ನೌಮಾನ್ ಅಲಿ , ಅಬ್ರಾರ್ ಅಹ್ಮದ್ , ಶಾಹೀನ್ ಅಫ್ರಿದಿ , ನಸೀಮ್ ಶಾ.