ವಿಶ್ವಕಪ್​ಗೂ ಮುನ್ನ ಬದಲಾದ ಇಂಗ್ಲೆಂಡ್ ನಾಯಕ! ಯುವ ಆಟಗಾರನಿಗೆ ತಂಡದ ನಾಯಕತ್ವ

ENG v IRE: ವಿಶ್ವಕಪ್‌ ದೃಷ್ಟಿಯಿಂದ ಇಂಗ್ಲೆಂಡ್ ತಂಡದಲ್ಲಿ ಅನುಭವಿ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಮೂವರು ಅನ್‌ಕ್ಯಾಪ್ಡ್ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಜೊತೆಗೆ ತಂಡದ ನಾಯಕತ್ವವನ್ನು ಸಹ ಹೊಸಬರಿಗೆ ನೀಡಲಾಗಿದೆ.

ವಿಶ್ವಕಪ್​ಗೂ ಮುನ್ನ ಬದಲಾದ ಇಂಗ್ಲೆಂಡ್ ನಾಯಕ! ಯುವ ಆಟಗಾರನಿಗೆ ತಂಡದ ನಾಯಕತ್ವ
ಇಂಗ್ಲೆಂಡ್ ತಂಡ
Follow us
ಪೃಥ್ವಿಶಂಕರ
|

Updated on: Sep 08, 2023 | 12:57 PM

ಈ ತಿಂಗಳ ಕೊನೆಯಲ್ಲಿ ನಡೆಯಲ್ಲಿರುವ ಐರ್ಲೆಂಡ್ (England vs Ireland) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ 13 ಸದಸ್ಯರ ತಂಡವನ್ನು ಪ್ರಕಟಿಸಿದೆ. ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನಾಡುತ್ತಿರುವ ಇಂಗ್ಲೆಂಡ್ ಪಡೆ, ಈ ಸರಣಿ ಮುಗಿದ ಬಳಿಕ ಐರ್ಲೆಂಡ್​ಗೆ ಏಕದಿನ ಸರಣಿಯಲ್ಲಿ ಆತಿಥ್ಯವಹಿಸುತ್ತಿದೆ. ವಿಶ್ವಕಪ್‌ (ODI World Cup) ದೃಷ್ಟಿಯಿಂದ ಇಂಗ್ಲೆಂಡ್ ತಂಡದಲ್ಲಿ ಅನುಭವಿ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಮೂವರು ಅನ್‌ಕ್ಯಾಪ್ಡ್ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಜೊತೆಗೆ ತಂಡದ ನಾಯಕತ್ವವನ್ನು ಸಹ ಹೊಸಬರಿಗೆ ನೀಡಲಾಗಿದೆ.

ಐರ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಝಾಕ್ ಕ್ರಾಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದು, ಬೆನ್ ಡಕೆಟ್​ಗೆ ತಂಡದ ಉಪನಾಯಕತ್ವ ನೀಡಲಾಗಿದೆ. ಸೆಪ್ಟೆಂಬರ್ 20 ರಿಂದ ಈ ಸರಣಿ ಆರಂಭವಾಗುತ್ತಿದ್ದು, ಮೊದಲ ಪಂದ್ಯ ಹೆಡಿಂಗ್ಲಿ ಮೈದಾನದಲ್ಲಿ ನಡೆಯಲ್ಲಿದೆ. ಇನ್ನು ಅನುಭವಿ ಆಟಗಾರರ ಉಪಸ್ಥಿತಿಯಲ್ಲಿ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಸರಣಿಯಲ್ಲಿ ಇಂಗ್ಲೆಂಡ್ ತಂಡದ ನಾಯಕರಾಗಿ ಆಯ್ಕೆಯಾಗಿರುವ ಕ್ರಾಲಿ ಬರೋಬ್ಬರಿ ಎರಡು ವರ್ಷಗಳ ನಂತರ ಏಕದಿನ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.

ಇಂಗ್ಲೆಂಡ್ ಅಲ್ಲ..! ವಿಶ್ವಕಪ್ ಗೆಲ್ಲುವ ತನ್ನ ನೆಚ್ಚಿನ ತಂಡವನ್ನು ಹೆಸರಿಸಿದ ಇಯಾನ್ ಮಾರ್ಗನ್

ಮೂವರು ಹೊಸಬರು

25 ವರ್ಷ ವಯಸ್ಸಿನ ಕ್ರಾಲಿ ಕೊನೆಯದಾಗಿ 2021 ರಲ್ಲಿ ಈ ಸ್ವರೂಪದಲ್ಲಿ ಆಡಿದ್ದರು. ಇವರೊಂದಿಗೆ ತಂಡದಲ್ಲಿ ಮೂವರು ಅನ್‌ಕ್ಯಾಪ್ಡ್ ಆಟಗಾರರು ಆಯ್ಕೆಯಾಗಿದ್ದು, ಅವರಲ್ಲಿ ಬ್ಯಾಟರ್ ಸ್ಯಾಮ್ ಹೈನ್, ವಿಕೆಟ್ ಕೀಪರ್-ಬ್ಯಾಟರ್ ಜೇಮೀ ಸ್ಮಿತ್ ಮತ್ತು ವೇಗಿ ಜಾರ್ಜ್ ಸ್ಕ್ರಿಮ್‌ಶಾ ಸೇರಿದ್ದಾರೆ.

ವೈಟಾಲಿಟಿ ಬ್ಲಾಸ್ಟ್ ಮತ್ತು ದಿ ಹಂಡ್ರೆಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಸ್ಯಾಮ್ ಹೈನ್​ಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿದ್ದು, ಇವರೊಂದಿಗೆ ದಿ ಹಂಡ್ರೆಡ್‌ನಲ್ಲಿ ಏಳು ಪಂದ್ಯಗಳಲ್ಲಿ 160.50 ಸ್ಟ್ರೈಕ್ ರೇಟ್‌ನಲ್ಲಿ 191 ರನ್ ಕಲೆಹಾಕಿದ್ದ ಜೇಮೀ ಸ್ಮಿತ್​ಗೂ ರಾಷ್ಟ್ರೀಯ ತಂಡದ ಕದ ತೆರೆದಿದೆ. ಹಾಗೆಯೇ ವೈಟಾಲಿಟಿ ಬ್ಲಾಸ್ಟ್‌ನಲ್ಲಿ ಡರ್ಬಿಶೈರ್‌ ತಂಡದ ಪರ ಆಡಿದ 14 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಉರುಳಿಸಿದ್ದ ಬಲಗೈ ವೇಗಿ ಸ್ಕ್ರಿಮ್‌ಶಾ ಕೂಡ ಚೊಚ್ಚಲ ಪಂದ್ಯವನ್ನಾಡಲಿದ್ದಾರೆ.

ಏಕದಿನ ಸರಣಿಗೆ ಇಂಗ್ಲೆಂಡ್ ತಂಡ: ಝಾಕ್ ಕ್ರಾಲಿ (ನಾಯಕ), ರೆಹಾನ್ ಅಹ್ಮದ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಸ್ಯಾಮ್ ಹೈನ್, ವಿಲ್ ಜ್ಯಾಕ್, ಕ್ರೇಗ್ ಓವರ್‌ಟನ್, ಮ್ಯಾಥ್ಯೂ ಪಾಟ್ಸ್, ಫಿಲ್ ಸಾಲ್ಟ್, ಜಾರ್ಜ್ ಸ್ಕ್ರಿಮ್‌ಶಾ, ಜೇಮೀ ಸ್ಮಿತ್, ಲ್ಯೂಕ್ ವುಡ್.

ಏಕದಿನ ಸರಣಿ ವೇಳಾಪಟ್ಟಿ

ಮೊದಲನೇ ಏಕದಿನ ಪಂದ್ಯ: 20 ಸೆಪ್ಟೆಂಬರ್, ಹೆಡಿಂಗ್ಲಿ.

ಎರಡನೇ ಏಕದಿನ ಪಂದ್ಯ: 23 ಸೆಪ್ಟೆಂಬರ್, ಟ್ರೆಂಟ್ ಬ್ರಿಡ್ಜ್.

ಮೂರನೇ ಏಕದಿನ ಪಂದ್ಯ: 26 ಸೆಪ್ಟೆಂಬರ್, ಬ್ರಿಸ್ಟಲ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ