ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಎಂಎಸ್ ಧೋನಿ
MS Dhoni Plays Golf With Donald Trump: ಅಮೆರಿಕಾ ಪ್ರವಾಸದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರು ಯುಎಸ್ಎ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಗಾಲ್ಫ್ ಆಟವನ್ನು ಆಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಲ್ಲಿದೆ ನೋಡಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ (MS Dhoni) ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ (ಯುಎಸ್ಎ) ತಮ್ಮ ರಜೆಯನ್ನು ಆನಂದಿಸುತ್ತಿದ್ದಾರೆ. ಸದ್ಯ ಯುಎಸ್ ಪ್ರವಾಸದಲ್ಲಿರುವ ಕೂಲ್ ಕ್ಯಾಪ್ಟನ್ ಅವರು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಗಾಲ್ಫ್ ಆಟವನ್ನು ಆಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಧೋನಿ ಹಾಗೂ ಟ್ರಂಪ್ ಗಾಲ್ಫ್ ಆಡುತ್ತಿರುವ ಮಧ್ಯೆ ಫೋಟೋಕ್ಕೆ ಪೋಸ್ ನೀಡಿದ್ದು, ಎಲ್ಲೆಡೆ ಹರಿದಾಡುತ್ತಿದೆ. ವೈರಲ್ ಫೋಟೋದಲ್ಲಿ ಧೋನಿ ಮತ್ತು ಟ್ರಂಪ್ ಪಕ್ಕದಲ್ಲಿ ನಿಂತಿದ್ದಾರೆ.
ಟ್ರಂಪ್ ಜೊತೆಗಿನ ವೈರಲ್ ಫೋಟೋ ಮತ್ತು ವಿಡಿಯೋ ಇಲ್ಲಿದೆ ನೋಡಿ:
Former US President Donald Trump hosted a Golf game for MS Dhoni.
– Thala fever in USA….!!! pic.twitter.com/8V7Vz7nHMB
— Johns. (@CricCrazyJohns) September 8, 2023
MS Dhoni and former US President Donald Trump in a Golf Game.
– MSD, an icon, a legend….!!!! pic.twitter.com/d9o1TfHmSX
— Mufaddal Vohra (@mufaddal_vohra) September 8, 2023
ವರದಿಗಳ ಪ್ರಕಾರ, ಧೋನಿ ಅವರು ಯುಎಸ್ ಪ್ರವಾಸದಲ್ಲಿ ಇದ್ದಾರೆ ಎಂಬುದನ್ನು ಅರಿತು ಸ್ವತಃ ಟ್ರಂಪ್ ಅವರೇ ಧೋನಿಯನ್ನು ಗಾಲ್ಫ್ ಆಟಕ್ಕೆ ಆಹ್ವಾನಿಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ‘ಥಲಾ ಫೀವರ್ ಅಮೇರಿಕಾದಲ್ಲೂ ಇದೆ’ ಎಂದಿದ್ದಾರೆ.
ICC ODI Rankings: ಒಂಬತ್ತೇ ದಿನದಲ್ಲಿ ನಂ.1 ಪಟ್ಟ ಕಳೆದುಕೊಂಡ ಪಾಕಿಸ್ತಾನ..!
ಸೆಪ್ಟೆಂಬರ್ 6 ರಂದು, ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದ ವೇಳೆ ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಟೆನಿಸ್ ಆಟವನ್ನು ವೀಕ್ಷಿಸಲು ಧೋನಿ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ಹಾಜರಿದ್ದರು. ಇದರ ವಿಡಿಯೋ ಕೂಡ ಎರಡು ದಿನಗಳ ಹಿಂದೆ ವೈರಲ್ ಆಗಿತ್ತು.
ಟೆನಿಸ್ ಆಟವನ್ನು ವೀಕ್ಷಿಸುತ್ತಿರುವ ಎಂಎಸ್ ಧೋನಿ:
The MS Dhoni cameo during the US Open Quarter Finals.pic.twitter.com/Dfys7nafpI
— Mufaddal Vohra (@mufaddal_vohra) September 7, 2023
ಇತ್ತೀಚೆಗೆ ನಾಲ್ಕನೇ ಬಾರಿಗೆ ಟ್ರಂಪ್ ವಿರುದ್ಧ ಕ್ರಿಮಿನಲ್ ಆರೋಪ ಕೇಳಿಬಂದಿದೆ. ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಅವರು ಈ ನಾಲ್ಕು ಪ್ರಕರಣಗಳಲ್ಲಿ ಒಟ್ಟು 91 ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ನ ಇತಿಹಾಸದಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಧ್ಯಕ್ಷ ಇವರಾಗಿದ್ದಾರೆ. ಟ್ರಂಪ್ ಜನವರಿ 2021 ರಲ್ಲಿ ಅಧಿಕಾರವನ್ನು ಕಳೆದುಕೊಂಡರು. 2024 ರಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗುವ ಬಯಕೆ ಹೊಂದಿದ್ದಾರೆ. ಆದರೆ ಇದಕ್ಕೂ ಮುನ್ನ ಟ್ರಂಪ್ ಎಲ್ಲಾ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಬೇಕಾಗುತ್ತದೆ.
ಇತ್ತ ಎಂಎಸ್ ಧೋನಿ ಅಮೆರಿಕಾ ಪ್ರವಾಸದಿಂದ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಗಾಗಿ ತಯಾರಿ ಆರಂಭಿಸಲಿದ್ದಾರೆ. 2023 ರಲ್ಲಿ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ, ಧೋನಿ ಅವರು ಲೀಗ್‌ನಿಂದ ಇನ್ನೂ ನಿವೃತ್ತಿಯಾಗಿಲ್ಲ ಎಂದು ಹೇಳಿದ್ದರು. ಹೀಗಾಗಿ ಎಂಎಸ್ಡಿ ಅವರು ಐಪಿಎಲ್ 2024 ಆಡಲಿದ್ದಾರೆ ಎನ್ನಲಾಗಿದ್ದು, ಸದ್ಯದಲ್ಲೇ ಪ್ರ್ಯಾಕ್ಟೀಸ್ ಶುರು ಮಾಡಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ