IND vs ENG: ಸೆಮಿಫೈನಲ್​ನಲ್ಲಿ ರೋಹಿತ್ ಪಡೆಗೆ ಹೀನಾಯ ಸೋಲು; ಫೈನಲ್​ಗೆ ಲಗ್ಗೆ ಇಟ್ಟ ಇಂಗ್ಲೆಂಡ್

T20 World Cup 2022: 140 ಕೋಟಿ ಜನರ ಆಶಾಕಿರಣವನ್ನು ಹೊತ್ತು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಟೀಂ ಇಂಡಿಯಾ ಬರಿಗೈಯಲ್ಲೇ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ.

IND vs ENG: ಸೆಮಿಫೈನಲ್​ನಲ್ಲಿ ರೋಹಿತ್ ಪಡೆಗೆ ಹೀನಾಯ ಸೋಲು; ಫೈನಲ್​ಗೆ ಲಗ್ಗೆ ಇಟ್ಟ ಇಂಗ್ಲೆಂಡ್
Follow us
TV9 Web
| Updated By: ಪೃಥ್ವಿಶಂಕರ

Updated on:Nov 10, 2022 | 4:50 PM

ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್ ಪಂದ್ಯದಲ್ಲಿ ಅಸಂಖ್ಯಾತ ಅಭಿಮಾನಿಗಳು ಏನನ್ನು ನಿರೀಕ್ಷಿಸಿರಲಿಲ್ಲವೋ ಅದೇ ಸಂಭವಿಸಿದೆ. 140 ಕೋಟಿ ಜನರ ಆಶಾಕಿರಣವನ್ನು ಹೊತ್ತು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಟೀಂ ಇಂಡಿಯಾ (Team India) ಬರಿಗೈಯಲ್ಲೇ ವಾಪಸ್ಸಾಗಿದೆ. ಅಡಿಲೇಡ್​ನಲ್ಲಿ ಗೆಲುವಿನ ಸ್ಪರ್ಧಿ ಎಂದೇ ಬಿಂಬಿತವಾಗಿದ್ದ ಟೀಂ ಇಂಡಿಯಾ ಸುಮಾರು 50 ಸಾವಿರ ಪ್ರೇಕ್ಷಕರ ಮುಂದೆ ಹೀನಾಯ ಸೋಲು ಅನುಭವಿಸಿದೆ. ಅಡಿಲೇಡ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 10 ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೊಹ್ಲಿ (Virat Kohli) ಹಾಗೂ ಹಾರ್ದಿಕ್ ಅರ್ಧಶತಕದ ಆದಾರದ ಮೇಲೆ 169 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಆರಂಭಿಕರಿಬ್ಬರೂ ತಲಾ ಅರ್ಧಶತಕ ಸಿಡಿಸಿ ಮಿಂಚಿದರು.

ಮತ್ತೆ ಆರಂಭಿಕರ ಫ್ಲಾಪ್ ಶೋ

ಅಡಿಲೇಡ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರಿಂದ ಟೀಂ ಇಂಡಿಯಾಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಅಡಿಲೇಡ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಇಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ಇತಿಹಾಸವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಬಟ್ಲರ್ ಅವರ ಈ ನಿರ್ಧಾರ ಆಘಾತಕಾರಿಯಾಗಿತ್ತು. ಅದೇ ಸಮಯದಲ್ಲಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮೊದಲು ಬ್ಯಾಟಿಂಗ್ ಮಾಡಲು ಬಯಸುವುದಾಗಿ ಹೇಳಿದರು. ಆದರೆ ಬ್ಯಾಟಿಂಗ್ ಆರಂಭವಾದಗ ಇಡೀ ಕತೆಯೇ ಬದಲಾಯಿತು.

ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿ ಒಂದೇ ಒಂದು ದೊಡ್ಡ ಜೊತೆಯಾಟವನ್ನು ಆಡಿಲ್ಲ. ಇದರಿಂದಾಗಿ ಭಾರತವು ಪವರ್‌ಪ್ಲೇನಲ್ಲಿ ಒಮ್ಮೆಯೂ ಬಿರುಸಿನ ಆರಂಭವನ್ನು ಪಡೆಯಲಿಲ್ಲ. ಇಲ್ಲಿಯೂ ಇದೇ ಟ್ರೆಂಡ್ ಮುಂದುವರೆದಿದ್ದು, ಎರಡನೇ ಓವರ್‌ನಲ್ಲಿಯೇ ಕೆಎಲ್ ರಾಹುಲ್ ಔಟಾದರು. ಮತ್ತೊಮ್ಮೆ ವಿರಾಟ್ ಕೊಹ್ಲಿ ಮೇಲೆಯೇ ಟೀಂ ಇಂಡಿಯಾದ ಇನ್ನಿಂಗ್ಸ್ ಜವಬ್ದಾರಿ ಬಿತ್ತು. ಅದೇ ಸಮಯದಲ್ಲಿ ನಾಯಕ ರೋಹಿತ್ ಈ ಬಾರಿ ಅಬ್ಬರದ ಬ್ಯಾಟಿಂಗ್ ಮಾಡುವ ನಿರೀಕ್ಷೆ ಇತ್ತು. ಇಬ್ಬರೂ ಇನ್ನಿಂಗ್ಸ್ ನಿಭಾಯಿಸಿದರೂ ಅಗತ್ಯವಿದ್ದ ಆಕ್ರಮಣಶೀಲತೆ ಕಾಣಲಿಲ್ಲ.

ರೋಹಿತ್- ಸೂರ್ಯ ಫ್ಲಾಪ್

ನಿಧಾನಗತಿಯ ಆರಂಭದ ನಂತರ ರೋಹಿತ್ ಶರ್ಮಾ ಔಟಾದರೆ, ಸೂರ್ಯಕುಮಾರ್ ಯಾದವ್ ವಿಕೆಟ್‌ನಿಂದ ದೊಡ್ಡ ಹೊಡೆತ ಬಿದ್ದಿತು. ಮೊದಲ ಬಾರಿಗೆ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಆಡುತ್ತಿರುವ ಸೂರ್ಯ, ಲೆಗ್ ಸ್ಪಿನ್ನರ್ ಆದಿಲ್ ರಶೀದ್​ಗೆ ಬಲಿಯಾದರು. ಹೀಗಾಗಿ 12 ನೇ ಓವರ್‌ ಆಗುವಷ್ಟರಲ್ಲಿ ಭಾರತ 75 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇಲ್ಲಿಂದ ಕೊಹ್ಲಿ ಮತ್ತು ಹಾರ್ದಿಕ್ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು, ಆದರೆ ಅವರು ವೇಗವನ್ನು ಪಡೆಯಲು ಸಮಯ ತೆಗೆದುಕೊಂಡರು. ವಿಶ್ವಕಪ್‌ನಲ್ಲಿ ಕೊಹ್ಲಿ ತಮ್ಮ ನಾಲ್ಕನೇ ಅರ್ಧಶತಕವನ್ನು ಬಾರಿಸಿ, ನಂತರದ ಎಸೆತದಲ್ಲಿ ಕ್ರಿಸ್ ಜೋರ್ಡಾನ್​ಗೆ ಬಲಿಯಾದರು.

ಅವಮಾನ ತಪ್ಪಿಸಿದ ಹಾರ್ದಿಕ್

ಆದರೆ ಆರಂಭಿಕ ನಿಧಾನಗತಿಯ ನಂತರ ಬಿರುಸಿನ ಫಾರ್ಮ್ ತೋರಿದ ಹಾರ್ದಿಕ್ ಕೊನೆಯ 3 ಓವರ್‌ಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಹಾರ್ದಿಕ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಕೊನೆಯ 3 ಓವರ್‌ಗಳಲ್ಲಿ ಹಾರ್ದಿಕ್ ಬ್ಯಾಟಿಂಗ್ ಬಲದಿಂದ ಭಾರತ 47 ರನ್ ಗಳಿಸಿ 6 ವಿಕೆಟ್‌ಗೆ 168 ರನ್‌ಗಳ ಸವಾಲಿನ ಸ್ಕೋರ್ ಗಳಿಸಿತು.

Published On - 4:31 pm, Thu, 10 November 22

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ