ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ಗಾಗಿ (T20 World Cup) ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಇಯಾನ್ ಮಾರ್ಗನ್ ನಿವೃತ್ತಿಯ ನಂತರ ಸೀಮಿತ ಓವರ್‌ಗಳ ನಾಯಕರಾಗಿ ನೇಮಕಗೊಂಡ ಜೋಸ್ ಬಟ್ಲರ್ (Jos Buttler) ಈ ಟೂರ್ನಿಯಲ್ಲಿ ಇಂಗ್ಲಿಷ್ ತಂಡವನ್ನು ಮುನ್ನಡೆಸಲಿದ್ದಾರೆ. ಬಟ್ಲರ್ ಗಾಯಗೊಂಡಿದ್ದರೂ ಈ ನಡುವೆಯೂ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆರಂಭಿಕ ಆಟಗಾರ ಜೇಸನ್ ರಾಯ್ (Jason Roy) ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬುದು ದೊಡ್ಡ ಸುದ್ದಿಯಾಗಿದೆ. ರಾಯ್ ತುಂಬಾ ಕಳಪೆ ಫಾರ್ಮ್‌ನಲ್ಲಿರುವುದರಿಂದ ಅವರು ಅದರ ಭಾರವನ್ನು ಅನುಭವಿಸಬೇಕಾಯಿತು.
ಕ್ರಿಸ್ ವೋಕ್ಸ್ ಮತ್ತು ಮಾರ್ಕ್ವುಡ್ ಇಂಜುರಿಯಿಂದ ಚೇತರಿಸಿಕೊಂಡಿದ್ದು, ಇಬ್ಬರೂ ಆಟಗಾರರು ಈ ವರ್ಷದ ಆರಂಭದಲ್ಲಿ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ಪರ ಆಡಿದ್ದರು. ರಾಯ್ ಕಳೆದ ಕೆಲವು ತಿಂಗಳುಗಳಿಂದ ಕಳಪೆ ಫಾರ್ಮ್‌ನಿಂದ ಹೋರಾಡುತ್ತಿದ್ದಾರೆ. ಈ ಬೇಸಿಗೆಯಲ್ಲಿ ಆರು T20 ಪಂದ್ಯಗಳನ್ನಾಡಿರುವ ರಾಯ್ ಕೇವಲ 78 ರನ್ ಗಳಿಸಿದ್ದರು. ಈಗ ನಡೆಯುತ್ತಿರುವ ‘ದಿ ಹಂಡ್ರೆಡ್’ ಟೂರ್ನಿಯಲ್ಲೂ ರಾಯ್ ತನ್ನ ಮೊದಲ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಹೀಗಾಗಿ ಎಲ್ಲರ ನಿರೀಕ್ಷೆಯಂತೆ ಆಂಗ್ಲ ಮಂಡಳಿ ರಾಯ್ಗೆ ಕೋಕ್ ನೀಡಿದೆ.
Squad ? #T20WorldCup ? ? ? pic.twitter.com/k539Gzd5Ka
— England Cricket (@englandcricket) September 2, 2022
ಇದುವರೆಗೆ ಇಂಗ್ಲೆಂಡ್ ಪರ ನಾಲ್ಕು T20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಫಿಲ್ ಸಾಲ್ಟ್, ಇಂಗ್ಲಿಷ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಾಯಕ ಜೋಸ್ ಬಟ್ಲರ್ ಜೊತೆಗೆ ಆರಂಭಿಕ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ. ಪರ್ಯಾಯವಾಗಿ, ಜಾನಿ ಬೈರ್‌ಸ್ಟೋವ್ ಕೂಡ ಆರಂಭಿಕರ ಪಟ್ಟಿಯಲ್ಲಿದ್ದಾರೆ.
ಅಲ್ಲದೆ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಕ್ರಿಸ್ ಜೋರ್ಡಾನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನೂ ತಂಡದಲ್ಲಿ ಸೇರಿಸಲಾಗಿದೆ. ಈ ಇಬ್ಬರ ಜೊತೆಗೆ ಬಟ್ಲರ್ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಪಾಕ್ ಪ್ರವಾಸಕ್ಕೂ ತಂಡ ಪ್ರಕಟ
ಇದರ ಜೊತೆಗೆ, ಐದು ಅನ್‌ಕ್ಯಾಪ್ ಆಟಗಾರರನ್ನು ಒಳಗೊಂಡಿರುವ 19 ಸದಸ್ಯರ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ಪ್ರವಾಸಕ್ಕಾಗಿ ಪ್ರಕಟಿಸಲಾಗಿದೆ. ಈ ಪ್ರವಾಸದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನದ ಎದುರು ಬರೋಬ್ಬರಿ ಏಳು ಟಿ20 ಪಂದ್ಯಗಳನ್ನು ಆಡಲ್ಲಿದ್ದು, ಸೆಪ್ಟೆಂಬರ್ 14 ರಂದು ಪಾಕಿಸ್ತಾನಕ್ಕೆ ತೆರಳಲಿದೆ.
ಪಾಕಿಸ್ತಾನ ಪ್ರವಾಸಕ್ಕಾಗಿ ಇಂಗ್ಲೆಂಡ್ ತಂಡ:
ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ (ಉಪನಾಯಕ), ಹ್ಯಾರಿ ಬ್ರೂಕ್, ಜೋರ್ಡಾನ್ ಕಾಕ್ಸ್, ಸ್ಯಾಮ್ ಕರನ್, ಬೆನ್ ಡಕೆಟ್, ಲಿಯಾಮ್ ಡಾಸನ್, ರಿಚರ್ಡ್ ಗ್ಲೀಸನ್, ಟಾಮ್ ಹೆಲ್ಮ್, ವಿಲ್ ಜ್ಯಾಕ್ಸ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಓಲಿ ಸ್ಟೋನ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಲ್ಯೂಕ್ವುಡ್, ಮಾರ್ಕ್ವುಡ್
Published On - 3:23 pm, Fri, 2 September 22