AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಸ್ಟಾರ್ ಆಟಗಾರರಿಲ್ಲ; ಟೀಂ ಇಂಡಿಯಾ ವಿರುದ್ಧ ಏನಿದು ಇಂಗ್ಲೆಂಡ್‌ ರಣತಂತ್ರ..!

England's Oval Test XI: ಓವಲ್‌ನಲ್ಲಿ ನಡೆಯುವ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಅಚ್ಚರಿಯ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸೆ ಅವರ ಅನುಪಸ್ಥಿತಿಯು ಗಮನ ಸೆಳೆದಿದೆ. ತಂಡದಲ್ಲಿ ಹೆಚ್ಚಿನ ಸಂಖ್ಯೆಯ ವೇಗದ ಬೌಲರ್‌ಗಳಿದ್ದು, ಸ್ವಿಂಗ್ ಬೌಲಿಂಗ್‌ಗೆ ಪಿಚ್ ಅನುಕೂಲಕರವಾಗಿದ್ದರೆ ಭಾರತ ತಂಡಕ್ಕೆ ಸವಾಲು ಎದುರಾಗಲಿದೆ. ಭಾರತ ತಂಡದ ಸ್ಪಿನ್ನರ್‌ಗಳು ಪಿಚ್‌ನ ಸ್ವಭಾವವನ್ನು ಅವಲಂಬಿಸಿ ತಮ್ಮ ಪ್ರದರ್ಶನವನ್ನು ನೀಡಬೇಕಾಗುತ್ತದೆ.

IND vs ENG: ಸ್ಟಾರ್ ಆಟಗಾರರಿಲ್ಲ; ಟೀಂ ಇಂಡಿಯಾ ವಿರುದ್ಧ ಏನಿದು ಇಂಗ್ಲೆಂಡ್‌ ರಣತಂತ್ರ..!
ಇಂಗ್ಲೆಂಡ್ ತಂಡ
ಪೃಥ್ವಿಶಂಕರ
|

Updated on: Jul 30, 2025 | 6:41 PM

Share

ಓವಲ್ ಟೆಸ್ಟ್‌ಗಾಗಿ (Oval Test) ಇಂಗ್ಲೆಂಡ್ ತಂಡ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಅಚ್ಚರಿಯ ಸಂಗತಿ ಏನೆಂದರೆ, ಈ ಮಾಡು ಇಲ್ಲವೇ ಮಡಿ ಪಂದ್ಯದಿಂದ ನಾಯಕ ಬೆನ್ ಸ್ಟೋಕ್ಸ್ (Ben Stokes), ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸೆ ಹೊರಬಿದ್ದಿದ್ದಾರೆ. ಇದು ಇಂಗ್ಲೆಂಡ್‌ ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ನಾಯಕ ಬೆನ್ ಸ್ಟೋಕ್ಸ್ ಅಲಭ್ಯತೆ ಇಂಗ್ಲೆಂಡ್‌ ತಂಡಕ್ಕೆ ದೊಡ್ಡ ನಷ್ಟ. ಆದಾಗ್ಯೂ ಇಂಗ್ಲೆಂಡ್‌ ತಂಡ ತನ್ನ ಕೊನೆಯ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿರುವ 11 ಆಟಗಾರರು ಕೂಡ ಅಪಾಯಕಾರಿ ಎಂದರೆ ತಪ್ಪಾಗಲಾರದು. ಏಕೆಂದರೆ ತಂಡದ 11ನೇ ಆಟಗಾರನ ಕೂಡ ಆಲ್​ರೌಂಡರ್ ಪಟ್ಟಿಯಲ್ಲಿ ಸೇರುತ್ತಾನೆ ಎಂದಾದರೆ, ಇಂಗ್ಲೆಂಡ್‌ ತಂಡ ಕೊನೆಯ ಟೆಸ್ಟ್ ಪಂದ್ಯಕ್ಕೆ ಯಾವ ರೀತಿಯ ತಯಾರಿ ಮಾಡಿಕೊಂಡಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.

ಬಲಿಷ್ಠ ಪ್ಲೇಯಿಂಗ್ 11 ಪ್ರಕಟ

ಓವಲ್ ಟೆಸ್ಟ್‌ಗಾಗಿ ಇಂಗ್ಲೆಂಡ್ ಘೋಷಿಸಿರುವ ಪ್ಲೇಯಿಂಗ್ ಹನ್ನೊಂದರಲ್ಲಿ ಒಬ್ಬನೇ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲ. ಅರೆ ಕಾಲಿಕ ಸ್ಪಿನ್ನರ್​ಗಳಾಗಿ ಜೋ ರೂಟ್, ಹ್ಯಾರಿ ಬ್ರೂಕ್ ಹಾಗೂ ಜಾಕೋಬ್ ಬೆಥೆಲ್ ಇದ್ದಾರದರೂ ಅವರಿಂದ ಪಂದ್ಯ ಬದಲಿಸುವ ಪ್ರದರ್ಶನ ನಿರೀಕ್ಷಿಸುವುದು ಕಷ್ಟ ಸಾಧ್ಯ. ಉಳಿದಂತೆ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರಲ್ಲಿ ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್‌ಗೆ ಅವಕಾಶ ನೀಡಿದೆ, ಈ ನಾಲ್ವರೂ ವೇಗದ ಬೌಲರ್‌ಗಳು. ಜೊತೆಗೆ ಈ ಬೌಲರ್‌ಗಳಲ್ಲಿ ಮೂವರು ಸ್ವಿಂಗ್ ಬೌಲರ್‌ಗಳಿದ್ದಾರೆ. ಹಾಗೆಯೇ ಈ ಎಲ್ಲರೂ ಬೌಲಿಂಗ್​ ಜೊತೆಗೆ ಬ್ಯಾಟಿಂಗ್​​ನಲ್ಲೂ ಕೊಡುಗೆ ನೀಡಬಲ್ಲವರಾಗಿದ್ದಾರೆ. ಇದರರ್ಥ ಓವಲ್​ ಪಿಚ್ ಸ್ವಿಂಗ್‌ಗೆ ಸಹಾಯಕವಾಗಬಹುದು. ಹಾಗೆಯೇ ಬ್ಯಾಟ್ಸ್‌ಮನ್​ಗಳಿಗೆ ರನ್ ಗಳಿಸಲು ಕಷ್ಟಕರವಾಗಬಹುದು ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಬದಲಾಯ್ತ ಓವಲ್‌ ಪಿಚ್?

ಓವಲ್ ಪಿಚ್ ಸಾಮಾನ್ಯವಾಗಿ ಉತ್ತಮ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದೆ. ಆದರೆ ಇಂಗ್ಲೆಂಡ್‌ ತಂಡದಲ್ಲೆ ಕೇವಲ ವೇಗದ ಬೌಲರ್‌ಗಳಿಗೆ ಅವಕಾಶ ನೀಡಿರುವುದನ್ನು ಗಮನಿಸಿದರೆ, ನಾಳಿನ ಪಂದ್ಯದಲ್ಲಿ ಪಿಚ್​ ವೇಗದ ಬೌಲರ್​ಗಳಿಗೆ ನೆರವಾಗಬಹುದು. ಅದರಲ್ಲೂ ಸ್ವಿಂಗ್‌ ಬೌಲರ್​ಗಳು ಮೇಲುಗೈ ಸಾಧಿಸಬಹುದು. ಇದರರ್ಥ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗ ಈ ಸ್ವಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಬೇರೆಯದ್ದೇ ತಂತ್ರದೊಂದಿಗೆ ಕಣಕ್ಕಿಳಿಬೇಕಾಗುತ್ತದೆ.

IND vs ENG: ಕೊನೆಯ ಟೆಸ್ಟ್​ಗೆ ಇಂಗ್ಲೆಂಡ್‌ ಪ್ಲೇಯಿಂಗ್ 11 ಪ್ರಕಟ; ನಾಯಕ ಸೇರಿದಂತೆ ತಂಡದಲ್ಲಿ 4 ಬದಲಾವಣೆ

ಅಲ್ಲದೆ ಇಂಗ್ಲೆಂಡ್‌ ತಂಡದಲ್ಲಿರುವಂತೆ ಭಾರತದಲ್ಲೂ ಅತ್ಯುತ್ತಮ ಸ್ವಿಂಗ್ ಬೌಲರ್​ಗಳಿದ್ದಾರೆ. ಆದರೆ ಭಾರತ ತಂಡದಲ್ಲಿ ಇಬ್ಬರು ಸ್ಪಿನ್ನರ್​ಗಳನ್ನು ಆಡಿಸುವ ಸಾಧ್ಯತೆಗಳಿವೆ. ಇಡೀ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಆಡುವುದನ್ನು ನಾವು ಕಾಣಬಹುದಾಗಿದೆ. ಇದರರ್ಥ ಭಾರತ ತಂಡ ಇಬ್ಬರು ಸ್ಪಿನ್ನರ್ ಹಾಗೂ ಮೂವರು ವೇಗಿಗಳೊಂದಿಗೆ ಆಡಬಹುದು. ಒಂದು ವೇಳೆ ಈ ಪಿಚ್ ಸ್ಪಿನ್ನರ್​ಗಳಿಗೆ ನೆರವಾಗದಿದ್ದರೆ, ಭಾರತ ತಂಡಕ್ಕೆ ಹಿನ್ನಡೆಯಾಗುವುದಂತೂ ಖಚಿತ.

ಇಂಗ್ಲೆಂಡ್‌ನ ಆಡುವ XI: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್