ENG vs AFG ICC World Cup 2023: ಇಂಗ್ಲೆಂಡ್ ವಿರುದ್ದ ಗೆದ್ದು ಬೀಗಿದ ಅಫ್ಘಾನಿಸ್ತಾನ್
England vs Afghanistan, ICC world Cup 2023: ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ ಕೇವಲ 3 ಬಾರಿ ಮಾತ್ರ ಮುಖಾಮುಖಿಯಾಗಿವೆ. ಈ ವೇಳೆ ಎರಡೂ ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಇದೀಗ ಮೂರನೇ ಬಾರಿಯ ಸೆಣಸಾಟದಲ್ಲಿ ಅಫ್ಘಾನಿಸ್ತಾನ್ ತಂಡ ಚೊಚ್ಚಲ ಗೆಲುವು ದಾಖಲಿಸಿದೆ.
ಏಕದಿನ ವಿಶ್ವಕಪ್ನ 13ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಅಮೋಘ ಗೆಲುವು ದಾಖಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅಫ್ಘಾನಿಸ್ತಾನ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 49.5 ಓವರ್ಗಳಲ್ಲಿ 284 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 40.3 ಓವರ್ಗಳಲ್ಲಿ 215 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 69 ರನ್ಗಳಿಂದ ಸೋಲೊಪ್ಪಿಕೊಂಡಿತು.
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಖಿ.
LIVE Cricket Score & Updates
-
ENG vs AFG ICC World Cup 2023 Live Score: ಅಫ್ಘಾನ್ ತಂಡಕ್ಕೆ ಭರ್ಜರಿ ಜಯ
ರಶೀದ್ ಖಾನ್ ಎಸೆದ 41ನೇ ಓವರ್ನ 3ನೇ ಎಸೆತದಲ್ಲಿ ಮಾರ್ಕ್ ವುಡ್ ಕ್ಲೀನ್ ಬೌಲ್ಡ್. ಇಂಗ್ಲೆಂಡ್ ತಂಡ ಆಲೌಟ್.
ಇಂಗ್ಲೆಂಡ್ ವಿರುದ್ಧ 69 ರನ್ಗಳ ಐತಿಹಾಸಿಕ ಜಯ ಸಾಧಿಸಿದ ಅಫ್ಘಾನಿಸ್ತಾನ್ ತಂಡ.
ಅಫ್ಘಾನಿಸ್ತಾನ್– 284 (49.5)
ಇಂಗ್ಲೆಂಡ್– 215 (40.3)
-
ENG vs AFG ICC World Cup 2023 Live Score: ಹ್ಯಾಟ್ರಿಕ್ ಫೋರ್
ಫಝಲ್ಹಕ್ ಫಾರೂಖಿ ಎಸೆದ 40ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಫೋರ್ಗಳನ್ನು ಬಾರಿಸಿದ ರೀಸ್ ಟೋಪ್ಲಿ.
40 ಓವರ್ಗಳ ಮುಕ್ತಾಯಕ್ಕೆ ಇಂಗ್ಲೆಂಡ್ ತಂಡದ ಸ್ಕೋರ್ 213.
ಕ್ರೀಸ್ನಲ್ಲಿ ಮಾರ್ಕ್ ವುಡ್ ಹಾಗೂ ರೀಸ್ ಟೋಪ್ಲಿ ಬ್ಯಾಟಿಂಗ್,
ENG 213/9 (40)
-
ENG vs AFG ICC World Cup 2023 Live Score: 9ನೇ ವಿಕೆಟ್ ಪತನ
ರಶೀದ್ ಖಾನ್ ಎಸೆದ 38ನೇ ಓವರ್ನ ನಾಲ್ಕನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಆದಿಲ್ ರಶೀದ್.
13 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಶೀದ್.
ಸೋಲಿನ ಸುಳಿಯಲ್ಲಿ ಇಂಗ್ಲೆಂಡ್…ಗೆಲುವಿನತ್ತ ಅಫ್ಘಾನಿಸ್ತಾನ್ ತಂಡ.
ENG 198/9 (38.4)
ENG vs AFG ICC World Cup 2023 Live Score: ಮಾರ್ಕ್ ವುಡ್ ಮಾರ್ಕ್
ಫಝಲ್ಹಕ್ ಫಾರೂಖಿ ಎಸೆದ 38ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಮಾರ್ಕ್ ವುಡ್.
ಕ್ರೀಸ್ನಲ್ಲಿ ಮಾರ್ಕ್ ವುಡ್ ಹಾಗೂ ಆದಿಲ್ ರಶೀದ್ ಬ್ಯಾಟಿಂಗ್.
ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 12 ಓವರ್ಗಳಲ್ಲಿ 89 ರನ್ಗಳ ಅವಶ್ಯಕತೆ
ENG 196/8 (38)
ENG vs AFG ICC World Cup 2023 Live Score: ಇಂಗ್ಲೆಂಡ್ 8ನೇ ವಿಕೆಟ್ ಪತನ
ಮುಜೀಬ್ ಎಸೆದ 34ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಹ್ಯಾರಿ ಬ್ರೂಕ್
61 ಎಸೆತಗಳಲ್ಲಿ 66 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹ್ಯಾರಿ ಬ್ರೂಕ್.
8 ವಿಕೆಟ್ ಕಬಳಿಸಿದ ಅಫ್ಘಾನಿಸ್ತಾನ್ ತಂಡ.
ಸೋಲಿನ ಸುಳಿಯಲ್ಲಿ ಇಂಗ್ಲೆಂಡ್ ತಂಡ.
ENG 169/8 (34.2)
ENG vs AFG ICC World Cup 2023 Live Score: ಇಂಗ್ಲೆಂಡ್ 7ನೇ ವಿಕೆಟ್ ಪತನ
ಮುಜೀಬ್ ಉರ್ ರೆಹಮಾನ್ ಎಸೆದ 33ನೇ ಓವರ್ನ ಕೊನೆಯ ಎಸೆತದಲ್ಲಿ ಕ್ರಿಸ್ ವೋಕ್ಸ್ ಕ್ಲೀನ್ ಬೌಲ್ಡ್.
7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್.
3 ವಿಕೆಟ್ ಪಡೆದರೆ ಅಫ್ಘಾನಿಸ್ತಾನ್ ತಂಡಕ್ಕೆ ಜಯ.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ ಹಾಗೂ ಆದಿಲ್ ರಶೀದ್ ಬ್ಯಾಟಿಂಗ್.
ENG 160/7 (33)
ENG vs AFG ICC World Cup 2023 Live Score: ಬ್ರೂಕ್ ಭರ್ಜರಿ ಸಿಕ್ಸ್
ಮುಜೀಬ್ ಉರ್ ರೆಹಮಾನ್ ಎಸೆದ 31ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಹ್ಯಾರಿ ಬ್ರೂಕ್.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ ಹಾಗೂ ಕ್ರಿಸ್ ವೋಕ್ಸ್ ಬ್ಯಾಟಿಂಗ್.
ENG 154/6 (31)
ENG vs AFG ICC World Cup 2023 Live Score: 30 ಓವರ್ಗಳು ಮುಕ್ತಾಯ
30 ಓವರ್ಗಳಲ್ಲಿ 143 ರನ್ ಕಲೆಹಾಕಿದ ಇಂಗ್ಲೆಂಡ್ ಬ್ಯಾಟರ್ಗಳು.
6 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಅಫ್ಘಾನ್ ಬೌಲರ್ಗಳು.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ (53) ಹಾಗೂ ಕ್ರಿಸ್ ವೋಕ್ಸ್ (3) ಬ್ಯಾಟಿಂಗ್.
ಕುತೂಹಲಘಟ್ಟದತ್ತ ಸಾಗುತ್ತಿರುವ ಅಫ್ಘಾನ್-ಇಂಗ್ಲೆಂಡ್ ಪಂದ್ಯ.
ENG 143/6 (30)
ENG vs AFG ICC World Cup 2023 Live Score: ಇಂಗ್ಲೆಂಡ್ 6ನೇ ವಿಕೆಟ್ ಪತನ
ಮೊಹಮ್ಮದ್ ನಬಿ ಎಸೆದ 28ನೇ ಓವರ್ನ ಮೊದಲ ಎಸೆತದಲ್ಲೇ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಸ್ಯಾಮ್ ಕರನ್…ಔಟ್.
23 ಎಸೆತಗಳಲ್ಲಿ 10 ರನ್ ಬಾರಿಸಿ ನಿರ್ಗಮಿಸಿದ ಎಡಗೈ ದಾಂಡಿಗ ಸ್ಯಾಮ್ ಕರನ್.
ಅಫ್ಘಾನಿಸ್ತಾನ್ ತಂಡಕ್ಕೆ 6ನೇ ಯಶಸ್ಸು.
ENG 141/6 (28)
ENG vs AFG ICC World Cup 2023 Live Score: 25 ಓವರ್ಗಳು ಮುಕ್ತಾಯ
25 ಓವರ್ಗಳ ಮುಕ್ತಾಯದ ವೇಳೆಗೆ 132 ರನ್ ಕಲೆಹಾಕಿದ ಇಂಗ್ಲೆಂಡ್ ತಂಡ.
ಕ್ರೀಸ್ನಲ್ಲಿ ಬಲಗೈ ಬ್ಯಾಟರ್ ಹ್ಯಾರಿ ಬ್ರೂಕ್ (49) ಹಾಗೂ ಎಡಗೈ ದಾಂಡಿಗ ಸ್ಯಾಮ್ ಕರನ್ (8) ಬ್ಯಾಟಿಂಗ್.
ಮೊದಲಾರ್ಧದಲ್ಲಿ 5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಅಫ್ಘಾನ್ ಬೌಲರ್ಗಳು.
ENG 132/5 (25)
ENG vs AFG ICC World Cup 2023 Live Score: ಇಂಗ್ಲೆಂಡ್ 5ನೇ ವಿಕೆಟ್ ಪತನ
ರಶೀದ್ ಖಾನ್ ಎಸೆದ 21ನೇ ಓವರ್ನ 4ನೇ ಎಸೆತದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಎಲ್ಬಿಡಬ್ಲ್ಯೂ…ಅಂಪೈರ್ ತೀರ್ಪು ಔಟ್.
14 ಎಸೆತಗಳಲ್ಲಿ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಲಿಯಾಮ್ ಲಿವಿಂಗ್‌ಸ್ಟೋನ್.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ ಹಾಗೂ ಸ್ಯಾಮ್ ಕರನ್ ಬ್ಯಾಟಿಂಗ್.
ENG 117/5 (20.4)
ENG vs AFG ICC World Cup 2023 Live Score: 20 ಓವರ್ಗಳು ಮುಕ್ತಾಯ
ಅಝ್ಮತ್ ಎಸೆತದಲ್ಲಿ ಲಾಂಗ್ ಆನ್ ನತ್ತ ಆಕರ್ಷಕ ಫೋರ್ ಬಾರಿಸಿದ ಹ್ಯಾರಿ ಬ್ರೂಕ್.
20 ಓವರ್ ಗಳ ಮುಕ್ತಾಯದ ವೇಳೆಗೆ 115 ರನ್ ಕಲೆಹಾಕಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ (40) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (9) ಬ್ಯಾಟಿಂಗ್.
ENG 115/4 (20)
ENG vs AFG ICC World Cup 2023 Live Score: ಇಂಗ್ಲೆಂಡ್ 4ನೇ ವಿಕೆಟ್ ಪತನ
ನವೀನ್ ಉಲ್ ಹಕ್ ಎಸೆದ ಇನ್ ಸ್ವಿಂಗ್ ಎಸೆತಕ್ಕೆ ಜೋಸ್ ಬಟ್ಲರ್ ಕ್ಲೀನ್ ಬೌಲ್ಡ್.
18 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿಂಗ್.
ENG 91/4 (17.2)
ENG vs AFG ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ ಮುಕ್ತಾಯದ ವೇಳೆಗೆ 72 ರನ್ ಕಲೆಹಾಕಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ (13) ಹಾಗೂ ಜೋಸ್ ಬಟ್ಲರ್ (3) ಬ್ಯಾಟಿಂಗ್.
ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಅಫ್ಘಾನಿಸ್ತಾನ್ ತಂಡದ ಬೌಲರ್ಗಳು.
ENG 72/3 (15)
ಡೇವಿಡ್ ಮಲಾನ್ (32), ಜೋ ರೂಟ್ (11) ಹಾಗೂ ಜಾನಿ ಬೈರ್‌ಸ್ಟೋವ್ (2) ಔಟ್.
ENG vs AFG ICC World Cup 2023 Live Score: ಇಂಗ್ಲೆಂಡ್ 3ನೇ ವಿಕೆಟ್ ಪತನ
ಮೊಹಮ್ಮದ್ ನಬಿ ಎಸೆದ 13ನೇ ಓವರ್ನ ನಾಲ್ಕನೇ ಎಸೆತದಲ್ಲಿ ಆಫ್ ಸೈಡ್ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಡೇವಿಡ್ ಮಲಾನ್.
39 ಎಸೆತಗಳಲ್ಲಿ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಡೇವಿಡ್ ಮಲಾನ್.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
ENG 68/3 (12.4)
ENG vs AFG ICC World Cup 2023 Live Score: ಆಕರ್ಷಕ ಬೌಂಡರಿ
ನವೀನ್ ಉಲ್ ಹಕ್ ಎಸೆದ 12ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡೇವಿಡ್ ಮಲಾನ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಹ್ಯಾರಿ ಬ್ರೂಕ್ ಬ್ಯಾಟಿಂಗ್.
ENG 66/2 (12)
ENG vs AFG ICC World Cup 2023 Live Score: 10 ಓವರ್ಗಳು ಮುಕ್ತಾಯ
ಫಝಲ್ಹಕ್ ಫಾರೂಖಿ ಎಸೆದ 10ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಹ್ಯಾರಿ ಬ್ರೂಕ್.
10 ಓವರ್ಗಳ ಮುಕ್ತಾಯದ ವೇಳೆಗೆ 52 ರನ್ ಕಲೆಹಾಕಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಹ್ಯಾರಿ ಬ್ರೂಕ್ ಬ್ಯಾಟಿಂಗ್.
ENG 52/2 (10)
ENG vs AFG ICC World Cup 2023 Live Score: ಇಂಗ್ಲೆಂಡ್ 2ನೇ ವಿಕೆಟ್ ಪತನ
ಮುಜೀಬ್ ಉರ್ ರೆಹಮಾನ್ ಎಸೆದ 7ನೇ ಓವರ್ನ 4ನೇ ಎಸೆತದಲ್ಲಿ ಜೋ ರೂಟ್ ಕ್ಲೀನ್ ಬೌಲ್ಡ್.
17 ಎಸೆತಗಳಲ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಜೋ ರೂಟ್.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.
ENG 33/2 (7)
ENG vs AFG ICC World Cup 2023 Live Score: 5 ಓವರ್ಗಳು ಮುಕ್ತಾಯ
5 ಓವರ್ ಮುಕ್ತಾಯದ ವೇಳೆಗೆ 22 ರನ್ ಕಲೆಹಾಕಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜೋ ರೂಟ್ ಬ್ಯಾಟಿಂಗ್.
ಜಾನಿ ಬೈರ್‌ಸ್ಟೋವ್ (2) ವಿಕೆಟ್ ಪಡೆದ ಫಝಲ್ಹಕ್ ಫಾರೂಖಿ.
ENG 22/1 (5)
ENG vs AFG ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಫಝಲ್ಹಕ್ ಫಾರೂಖಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡೇವಿಡ್ ಮಲಾನ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜೋ ರೂಟ್ ಬ್ಯಾಟಿಂಗ್.
4 ಓವರ್ಗಳ ಮುಕ್ತಾಯದ ವೇಳೆಗೆ 19 ರನ್ ಕಲೆಹಾಕಿದ ಇಂಗ್ಲೆಂಡ್.
ENG 19/1 (4)
ENG vs AFG ICC World Cup 2023 Live Score: ಇಂಗ್ಲೆಂಡ್ ಮೊದಲ ವಿಕೆಟ್ ಪತನ
ಫಝಲ್ಹಕ್ ಫಾರೂಖಿ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಜಾನಿ ಬೈರ್‌ಸ್ಟೋವ್.
4 ಎಸೆತಗಳಲ್ಲಿ 2 ರನ್ಗಳಿಸಿ ವಿಕೆಟ್ ಒಪ್ಪಿಸಿದ ಸ್ಪೋಟಕ ದಾಂಡಿಗ ಜಾನಿ ಬೈರ್‌ಸ್ಟೋವ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜೋ ರೂಟ್ ಬ್ಯಾಟಿಂಗ್.
ENG 7/1 (2)
ENG vs AFG ICC World Cup 2023 Live Score: ಇಂಗ್ಲೆಂಡ್ ಇನಿಂಗ್ಸ್ ಆರಂಭ
ಸ್ಪಿನ್ ಬೌಲಿಂಗ್ನೊಂದಿಗೆ ಶುಭಾರಂಭ ಮಾಡಿದ ಅಫ್ಘಾನಿಸ್ತಾನ್ ತಂಡ.
ಮೊದಲ ಓವರ್ನಲ್ಲಿ ಕೇವಲ 3 ರನ್ ನೀಡಿದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ENG 3/0 (1)
ENG vs AFG ICC World Cup 2023 Live Score: ಅಫ್ಘಾನಿಸ್ತಾನ್ ಆಲೌಟ್
ರೀಸ್ ಟೋಪ್ಲಿ ಎಸೆದ ಕೊನೆಯ ಓವರ್ನಲ್ಲಿ ಕೇವಲ 2 ರನ್.
5ನೇ ಎಸೆತದಲ್ಲಿ ರನ್ ಕದಿಯುವ ಯತ್ನದಲ್ಲಿ ರನೌಟ್ ಆದ ನವೀನ್ ಉಲ್ ಹಕ್.
284 ರನ್ಗಳಿಗೆ ಆಲೌಟ್ ಆದ ಅಫ್ಘಾನಿಸ್ತಾನ್ ತಂಡ.
ಅಫ್ಘಾನಿಸ್ತಾನ್– 284 (49.5)
ಅಫ್ಘಾನಿಸ್ತಾನ್ ಪರ ರಹಮಾನುಲ್ಲಾ ಗುರ್ಬಾಝ್ (80) ಗರಿಷ್ಠ ರನ್ ಸ್ಕೋರರ್.
ENG vs AFG ICC World Cup 2023 Live Score: ವಿಕೆಟ್-ಫೋರ್
ಮಾರ್ಕ್ ವುಡ್ ಎಸೆದ 49ನೇ ಓವರ್ನ ಮೊದಲ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಮುಜೀಬ್ ಉರ್ ರೆಹಮಾನ್.
ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ನವೀನ್ ಉಲ್ ಹಕ್.
AFG 282/9 (49)
ENG vs AFG ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಇಕ್ರಮ್
ರೀಸ್ ಟೋಪ್ಲಿ ಎಸೆದ 48ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಕ್ರಮ್ ಅಲಿಖಿಲ್.
ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸುವ ಯತ್ನದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್.
66 ಎಸೆತಗಳಲ್ಲಿ 58 ರನ್ ಬಾರಿಸಿ ಔಟಾದ ಇಕ್ರಮ್ ಅಲಿಖಿಲ್.
AFG 277/8 (48)
ENG vs AFG ICC World Cup 2023 Live Score: ಅರ್ಧಶತಕ ಪೂರೈಸಿದ ಇಕ್ರಮ್
62 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಎಡಗೈ ದಾಂಡಿಗ ಇಕ್ರಮ್ ಅಲಿಖಿಲ್.
47 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನ್ ತಂಡದ ಸ್ಕೋರ್ 263 ರನ್ಗಳು.
ಕ್ರೀಸ್ನಲ್ಲಿ ಮುಜೀಬ್ ಹಾಗೂ ಇಕ್ರಮ್ ಅಲಿಖಿಲ್ ಬ್ಯಾಟಿಂಗ್.
AFG 263/7 (47)
ENG vs AFG ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಸ್ಯಾಮ್ ಕರನ್ ಎಸೆದ 46ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಮುಜೀಬ್.
4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್…ನೋ ಬಾಲ್.
ಫ್ರೀಹಿಟ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ಮುಜೀಬ್.
AFG 255/7 (46)
ENG vs AFG ICC World Cup 2023 Live Score: ಅಫ್ಘಾನಿಸ್ತಾನ್ ತಂಡದ 7 ವಿಕೆಟ್ ಪತನ
ಆದಿಲ್ ರಶೀದ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿದ ರಶೀದ್ ಖಾನ್…ಬೌಂಡರಿ ಲೈನ್ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಜೋ ರೂಟ್.
22 ಎಸೆತಗಳಲ್ಲಿ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಶೀದ್ ಖಾನ್.
AFG 237/7 (45)
ENG vs AFG ICC World Cup 2023 Live Score: ರಶೀದ್-ಇಕ್ರಮ್ ಉತ್ತಮ ಬ್ಯಾಟಿಂಗ್
7ನೇ ವಿಕೆಟ್ಗೆ 41 ರನ್ಗಳ ಜೊತೆಯಾಟವಾಡಿದ ರಶೀದ್ ಖಾನ್ ಹಾಗೂ ಇಕ್ರಮ್ ಅಲಿಖಿಲ್.
43 ಓವರ್ಗಳ ಮುಕ್ತಾಯದ ವೇಳೆಗೆ 231 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
AFG 231/6 (43)
ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ಇಕ್ರಮ್ ಅಲಿಖಿಲ್ ಬ್ಯಾಟಿಂಗ್.
ENG vs AFG ICC World Cup 2023 Live Score: 40 ಓವರ್ಗಳು ಮುಕ್ತಾಯ
ರೀಸ್ ಟೋಪ್ಲಿ ಎಸೆದ 40ನೇ ಓವರ್ನ 4ನೇ ಎಸೆತವನ್ನು ಸ್ಕ್ವೇರ್ ಕಟ್ ಮೂಲಕ ಫೋರ್ ಬಾರಿಸಿದ ಇಕ್ರಮ್ ಅಲಿಖಿಲ್.
40 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 216 ರನ್ಗಳು.
ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ಇಕ್ರಮ್ ಅಲಿಖಿಲ್ ಬ್ಯಾಟಿಂಗ್.
AFG 216/6 (40)
ENG vs AFG ICC World Cup 2023 Live Score: ದ್ವಿಶತಕ ಪೂರೈಸಿದ ಅಫ್ಘಾನಿಸ್ತಾನ್
ಜೋ ರೂಟ್ ಎಸೆದ 38ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರಶೀದ್ ಖಾನ್.
ಈ ಫೋರ್ನೊಂದಿಗೆ ದ್ವಿಶತಕ ಪೂರೈಸಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ಇಕ್ರಮ್ ಅಲಿಖಿಲ್ ಬ್ಯಾಟಿಂಗ್.
AFG 204/6 (38)
ENG vs AFG ICC World Cup 2023 Live Score: ಅಫ್ಘಾನಿಸ್ತಾನ್ ತಂಡದ 6 ವಿಕೆಟ್ ಪತನ
ಮಾರ್ಕ್ ವುಡ್ ಎಸೆದ 37ನೇ ಓವರ್ನ ಮೊದಲ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ ಮೊಹಮ್ಮದ್ ನಬಿ.
15 ಎಸೆತಗಳಲ್ಲಿ 9 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಮೊಹಮ್ಮದ್ ನಬಿ.
ಕ್ರೀಸ್ನಲ್ಲಿ ಇಕ್ರಮ್ ಅಲಿಖಿಲ್ ಹಾಗೂ ರಶೀದ್ ಖಾನ್ ಬ್ಯಾಟಿಂಗ್.
AFG 190/6 (36.1)
ENG vs AFG ICC World Cup 2023 Live Score: 35 ಓವರ್ಗಳು ಮುಕ್ತಾಯ
35 ಓವರ್ಗಳ ಮುಕ್ತಾಯದ ವೇಳೆಗೆ 186 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ಮೊಹಮ್ಮದ್ ನಬಿ (7) ಹಾಗೂ ಇಕ್ರಮ್ ಅಲಿಖಿಲ್ (23) ಬ್ಯಾಟಿಂಗ್.
5 ವಿಕೆಟ್ ಕಬಳಿಸಿ ಅಫ್ಘಾನ್ ತಂಡದ ರನ್ ಗತಿಯನ್ನು ನಿಯಂತ್ರಿಸಿದ ಇಂಗ್ಲೆಂಡ್.
AFG 186/5 (35)
ENG vs AFG ICC World Cup 2023 Live Score: ಜೋ ಮ್ಯಾಜಿಕ್- ಕ್ಲೀನ್ ಬೌಲ್ಡ್
ಜೋ ರೂಟ್ ಎಸೆದ 33ನೇ ಓವರ್ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದ ಹಶ್ಮತ್ ಶಾಹಿದಿ.
36 ಎಸೆತಗಳಲ್ಲಿ 14 ರನ್ಗಳಿಸಿ ವಿಕೆಟ್ ಒಪ್ಪಿಸಿದ ಅಫ್ಘಾನ್ ತಂಡದ ನಾಯಕ ಹಶ್ಮತ್.
ಕ್ರೀಸ್ನಲ್ಲಿ ಇಕ್ರಮ್ ಹಾಗೂ ಮೊಹಮ್ಮದ್ ನಬಿ ಬ್ಯಾಟಿಂಗ್.
AFG 174/5 (32.1)
ENG vs AFG ICC World Cup 2023 Live Score: 30 ಓವರ್ಗಳು ಮುಕ್ತಾಯ
30 ಓವರ್ಗಳ ಮುಕ್ತಾಯದ ವೇಳೆಗೆ 167 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ (12) ಹಾಗೂ ಇಕ್ರಮ್ ಅಲಿಖಿಲ್ (13) ಬ್ಯಾಟಿಂಗ್.
AFG 167/4 (30)
ಇಬ್ರಾಹಿಂ ಝದ್ರಾನ್ (28), ರಹಮತ್ ಶಾ ( 3) ಹಾಗೂ ರಹಮಾನುಲ್ಲಾ ಗುರ್ಬಾಝ್ (80), ಅಝ್ಮತ್ ಒಮರ್ಝಾಹಿ (19) ಔಟ್.
ENG vs AFG ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಇಕ್ರಮ್
ಜೋ ರೂಟ್ ಎಸೆದ 29ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಕ್ರಮ್ ಅಲಿಖಿಲ್.
29 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 166 ರನ್ ಬಾರಿಸಿದ ಅಫ್ಘಾನ್.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಇಕ್ರಮ್ ಅಲಿಖಿಲ್ ಬ್ಯಾಟಿಂಗ್.
AFG 166/4 (29)
ENG vs AFG ICC World Cup 2023 Live Score: ಅಫ್ಘಾನಿಸ್ತಾನ್ 4ನೇ ವಿಕೆಟ್ ಪತನ
ಲಿಯಾಮ್ ಲಿವಿಂಗ್‌ಸ್ಟೋನ್ ಎಸೆದ 26ನೇ ಓವರ್ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ಔಟ್ ಆದ ಅಝ್ಮತ್.
24 ಎಸೆತಗಳಲ್ಲಿ 19 ರನ್ ಬಾರಿಸಿ ನಿರ್ಗಮಿಸಿದ ಅಝ್ಮತ್.
AFG 152/4 (26)
ENG vs AFG ICC World Cup 2023 Live Score: 25 ಓವರ್ಗಳು ಮುಕ್ತಾಯ
ಕ್ರಿಸ್ ವೋಕ್ಸ್ ಎಸೆದ 25ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಝ್ಮತ್.
4ನೇ ಎಸೆತದಲ್ಲಿ ಅಝ್ಮತ್ ಬ್ಯಾಟ್ನಿಂದ ಆಫ್ ಸೈಡ್ನತ್ತ ಮತ್ತೊಂದು ಫೋರ್.
25 ಓವರ್ಗಳ ಮುಕ್ತಾಯದ ವೇಳೆಗೆ 149 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಅಫ್ಘಾನಿಸ್ತಾನ್- 149/3 (25)
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಓಮರ್ಝಾಹಿ ಬ್ಯಾಟಿಂಗ್.
ENG vs AFG ICC World Cup 2023 Live Score: ನೋ ಬೌಂಡರಿ
ಕೊನೆಯ 53 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸದ ಅಫ್ಘಾನ್ ಬ್ಯಾಟರ್ಗಳು.
ರಹಮಾನುಲ್ಲಾ ಗುರ್ಬಾಝ್ ಔಟಾದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಇಂಗ್ಲೆಂಡ್ ಬೌಲರ್ಗಳು.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಓಮರ್ಝಾಹಿ ಬ್ಯಾಟಿಂಗ್.
AFG 139/3 (24)
ENG vs AFG ICC World Cup 2023 Live Score: 20 ಓವರ್ಗಳು ಮುಕ್ತಾಯ
20 ಓವರ್ಗಳ ಮುಕ್ತಾಯದ ವೇಳೆಗೆ 125 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಓಮರ್ಝಾಹಿ ಬ್ಯಾಟಿಂಗ್.
AFG 125/3 (20)
ಇಬ್ರಾಹಿಂ ಝದ್ರಾನ್ (28), ರಹಮತ್ ಶಾ ( 3) ಹಾಗೂ ರಹಮಾನುಲ್ಲಾ ಗುರ್ಬಾಝ್ (80) ಔಟ್.
ENG vs AFG ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್
ಆದಿಲ್ ರಶೀದ್ ಎಸೆದ 19ನೇ ಓವರ್ನ 4ನೇ ಎಸೆತದಲ್ಲಿ ಸ್ಟಂಪ್ ಔಟ್ ಆದ ರಹಮತ್ ಶಾ…ವಿಕೆಟ್ ಕೀಪರ್ ಜೋಸ್ ಬಟ್ಲರ್ರಿಂದ ಅತ್ಯುತ್ತಮ ಸ್ಟಂಪಿಂಗ್.
5ನೇ ಎಸೆತದಲ್ಲಿ ರಹಮಾನುಲ್ಲಾ ಗುರ್ಬಾಝ್ ರನೌಟ್.
57 ಎಸೆತಗಳಲ್ಲಿ 80 ರನ್ ಬಾರಿಸಿ ನಿರ್ಗಮಿಸಿದ ರಹಮಾನುಲ್ಲಾ ಗುರ್ಬಾಝ್.
AFG 123/3 (19)
ENG vs AFG ICC World Cup 2023 Live Score: ಅಫ್ಘಾನಿಸ್ತಾನ್ ಮೊದಲ ವಿಕೆಟ್ ಪತನ
ಆದಿಲ್ ರಶೀದ್ ಎಸೆದ 17ನೇ ಓವರ್ನ ಮೂರನೇ ಎಸೆತದಲ್ಲಿ ಲೆಗ್ ಸೈಡ್ನ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಇಬ್ರಾಹಿಂ ಝದ್ರಾನ್.
48 ಎಸೆತಗಳಲ್ಲಿ 28 ರನ್ ಬಾರಿಸಿ ನಿರ್ಗಮಿಸಿದ ಇಬ್ರಾಹಿಂ ಝದ್ರಾನ್.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ರಹಮಾನುಲ್ಲಾ ಗುರ್ಬಾಝ್ ಬ್ಯಾಟಿಂಗ್.
AFG 115/1 (17)
ENG vs AFG ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 106 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ (69) ಹಾಗೂ ಇಬ್ರಾಹಿಂ ಝದ್ರಾನ್ (26) ಉತ್ತಮ ಜೊತೆಯಾಟ.
ಐವರು ಬೌಲರ್ಗಳನ್ನು ಬಳಸಿದರೂ ಮೊದಲ ವಿಕೆಟ್ಗಾಗಿ ಇಂಗ್ಲೆಂಡ್ ಬೌಲರ್ಗಳ ಪರದಾಟ.
AFG 106/0 (15)
ENG vs AFG ICC World Cup 2023 Live Score: ಗುರ್ಬಾಝ್ ಸಿಡಿಲಬ್ಬರ
ಆದಿಲ್ ರಶೀದ್ ಎಸೆದ 13ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಹಮಾನುಲ್ಲಾ ಗುರ್ಬಾಝ್.
ಈ ಭರ್ಜರಿ ಸಿಕ್ಸ್ನೊಂದಿಗೆ ಶತಕ ಪೂರೈಸಿದ ಅಫ್ಘಾನಿಸ್ತಾನ್.
ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಭರ್ಜರಿ ಬ್ಯಾಟಿಂಗ್.
AFG 102/0 (13)
ENG vs AFG ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಗುರ್ಬಾಝ್
ಮಾರ್ಕ್ವುಡ್ ಎಸೆದ 12ನೇ ಓವರ್ನ ಮೂರನೇ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಹಮಾನುಲ್ಲಾ ಗುರ್ಬಾಝ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಉತ್ತಮ ಬ್ಯಾಟಿಂಗ್.
AFG 93/0 (12)
ENG vs AFG ICC World Cup 2023 Live Score: ಅರ್ಧಶತಕ ಪೂರೈಸಿದ ಗುರ್ಬಾಝ್
ಆದಿಲ್ ರಶೀದ್ ಎಸೆದ 11ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.
ಈ ಫೋರ್ನೊಂದಿಗೆ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಗುರ್ಬಾಝ್.
AFG 86/0 (11)
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ENG vs AFG ICC World Cup 2023 Live Score: ಅಫ್ಘಾನಿಸ್ತಾನ್ ಭರ್ಜರಿ ಬ್ಯಾಟಿಂಗ್
10 ಓವರ್ಗಳ ಮುಕ್ತಾಯದ ವೇಳೆಗೆ 79 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ಆರಂಭಿಕರು.
ಮೊದಲ 10 ಓವರ್ಗಳಲ್ಲಿ 7.9 ಸರಾಸರಿಯಲ್ಲಿ ರನ್ ಕಲೆಹಾಕಿರುವ ಅಫ್ಘಾನ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ (46) ಹಾಗೂ ಇಬ್ರಾಹಿಂ ಝದ್ರಾನ್ (22).
AFG 79/0 (10)
ENG vs AFG ICC World Cup 2023 Live Score: ಅರ್ಧಶತಕ ಪೂರೈಸಿದ ಅಫ್ಘಾನಿಸ್ತಾನ್
ಸ್ಯಾಮ್ ಕರನ್ ಎಸೆದ 7ನೇ ಓವರ್ನ ಮೊದಲ ಎಸೆತದಲ್ಲೇ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
AFG 51/0 (7)
ENG vs AFG ICC World Cup 2023 Live Score: 5 ಓವರ್ಗಳು ಮುಕ್ತಾಯ
ಕ್ರಿಸ್ ವೋಕ್ಸ್ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.
3ನೇ ಎಸೆತದಲ್ಲಿ ಗುರ್ಬಾಝ್ ಬ್ಯಾಟ್ನಿಂದ ಲೆಗ್ ಸೈಡ್ನತ್ತ ಮತ್ತೊಂದು ಫೋರ್.
5 ಓವರ್ಗಳ ಮುಕ್ತಾಯದ ವೇಳೆಗೆ 35 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
AFG 35/0 (5)
ENG vs AFG ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಗುರ್ಬಾಝ್
ಕ್ರಿಸ್ ವೋಕ್ಸ್ ಎಸೆದ 3ನೇ ಓವರ್ನ ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ರಹಮಾನುಲ್ಲಾ ಗುರ್ಬಾಝ್.
5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಇಬ್ರಾಹಿಂ ಝದ್ರಾನ್.
ಅಫ್ಘಾನಿಸ್ತಾನ್ ಆರಂಭಿಕರಿಂದ ಉತ್ತಮ ಬ್ಯಾಟಿಂಗ್.
AFG 21/0 (3)
ENG vs AFG ICC World Cup 2023 Live Score: ಮೇಡನ್ ಓವರ್
2ನೇ ಓವರ್ ಅನ್ನು ಮೇಡನ್ ಮಾಡಿದ ಎಡಗೈ ವೇಗಿ ರೀಸ್ ಟೋಪ್ಲಿ.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
AFG 7/0 (2)
ಟಾಸ್ ಗೆದ್ದ ಇಂಗ್ಲೆಂಡ್ ತಂಡದಿಂದ ಬೌಲಿಂಗ್
ENG vs AFG ICC World Cup 2023 Live Score: ಅಫ್ಘಾನಿಸ್ತಾನ್ ಇನಿಂಗ್ಸ್ ಆರಂಭ
ಮೊದಲ ಓವರ್ನ ಮೊದಲ ಎಸೆತವನ್ನು ವೈಡ್ ಎಸೆದ ಕ್ರಿಸ್ ವೋಕ್ಸ್…ವಿಕೆಟ್ ಕೀಪರ್ನ ವಂಚಿಸಿ ಚೆಂಡು ಬೌಂಡರಿಗೆ…ಫೋರ್
ಮೊದಲ ಓವರ್ನಲ್ಲಿ 7 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್
AFG 7/0 (1)
ENG vs AFG ICC World Cup 2023 Live Score: ಅಫ್ಘಾನಿಸ್ತಾನ್ ಪ್ಲೇಯಿಂಗ್ ಇಲೆವೆನ್
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಖಿ.
ENG vs AFG ICC World Cup 2023 Live Score: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ.
ENG vs AFG ICC World Cup 2023 Live Score: ಟಾಸ್ ಗೆದ್ದ ಇಂಗ್ಲೆಂಡ್
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - Oct 15,2023 1:33 PM