ಮೈದಾನದಲ್ಲಿ ರಿಜ್ವಾನ್ ನಮಾಜ್; ಜೈ ಶ್ರೀ ರಾಮ್ ಘೋಷಣೆ ಕೂಗಿದ ಫ್ಯಾನ್ಸ್! ವಿಡಿಯೋ ನೋಡಿ
India vs Pakistan, ICC World Cup 2023: ಪಂದ್ಯಗಳು ನಡೆಯುವ ಸಮಯದಲ್ಲಿ ರಿಜ್ವಾನ್ ಮೈದಾನದಲ್ಲಿ ನಮಾಜ್ ಮಾಡುವ ವೀಡಿಯೊ ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ಇದೀಗ ಟೀಂ ಇಂಡಿಯಾ ಅಭಿಮಾನಿಗಳು ರಿಜ್ವಾನ್ ಅವರನ್ನು ಜೈ ಶ್ರೀ ರಾಮ್ ಘೋಷಣೆಯ ಮೂಲಕ ಅಣುಕಿಸಿ ಕಾಲೆಳೆದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ವಿಶ್ವಕಪ್ 2023 ರ (ICC World Cup 2023) 12 ನೇ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಜಯ ಸಾಧಿಸಿದೆ. ನಾಯಕನ ಆಟ ಆಡಿದ ರೋಹಿತ್ ಶರ್ಮಾ, ಪಾಕ್ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ನಂ.1 ಸ್ಥಾನವನ್ನು ತಲುಪಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ ಬಿಗ್ ಸ್ಕೋರ್ ಕಲೆಹಾಕುವಲ್ಲಿ ವಿಫಲವಾಯಿತು. ಹೀಗಾಗಿ ತಂಡ ಕೇವಲ 191 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಜ್ವಾನ್ (Muhammad Rizwan) ಅರ್ಧಶತಕದ ಜೊತೆಯಾಟ ಆಡಿದರಾದರೂ ಬಿಗ್ ಸ್ಕೋರ್ ಕಲೆಹಾಕುವಲ್ಲಿ ವಿಫಲರಾಗಿ ಪೆವಲಿಯನ್ ಸೇರಿಕೊಂಡರು. ಇದೇ ವೇಳೆ 49 ರನ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳುತ್ತಿದ್ದ ರಿಜ್ವಾನ್ರನ್ನು ಟೀಂ ಇಂಡಿಯಾ ಅಭಿಮಾನಿಗಳು ಕೆಣಕ್ಕಿದ ಪ್ರಸಂಗವೂ ನಡೆಯಿತು.
‘ಜೈ ಶ್ರೀ ರಾಮ್’ ಘೋಷಣೆ
ವಾಸ್ತವವಾಗಿ ನಾಯಕ ಬಾಬರ್ ಜೊತೆ ಸ್ಮರಣೀಯ ಇನ್ನಿಂಗ್ಸ್ ಆಡಿದ ರಿಜ್ವಾನ್ 49 ರನ್ ಸಿಡಿಸಿ ಕೇವಲ 1 ರನ್ಗಳಿಂದ ಅರ್ಧಶತಕ ವಂಚಿತರಾದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್ನ ಮರ್ಮ ಅರಿಯದ ರಿಜ್ವಾನ್ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೊಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗುವಾಗ ಟೀಂ ಇಂಡಿಯಾದ ಅಭಿಮಾನಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಮಾಡುವ ಮೂಲಕ ಅವರನ್ನು ಅಣಕಿಸಿದರು. ಅಭಿಮಾನಿಗಳು ರಿಜ್ವಾನ್ ಅವರನ್ನು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಅಣಕಿಸಿದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿವೆ.
#WATCH : Mohammad Rizwan intentionally does this when there are Indians watching him. During T20 World Cup 2021, India vs Pakistan match he has offers ‘Namaz’ in ground during drink break. #MohammadRizwan #Pakistan #PAKvNED #namaz #INDVSPAK #icccricketworldcup2023 #ICCWorldCup pic.twitter.com/a0NAz4JvkZ
— Ravi Pandey🇮🇳 (@ravipandey2643) October 6, 2023
IND vs AUS: ಹೀನಾಯವಾಗಿ ಸೋತು ಬಿಸಿಸಿಐ ಮೇಲೆ ಗೂಬೆ ಕೂರಿಸಿದ ಪಾಕ್ ತಂಡದ ನಿರ್ದೇಶಕ
ಮೈದಾನದಲ್ಲಿ ನಮಾಜ್ ಮಾಡಿದ್ದ ರಿಜ್ವಾನ್
ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಇದುವರೆಗೆ ಮೂರು ಪಂದ್ಯಗಳನ್ನು ಆಡಿದೆ. ಈ ಮೂರೂ ಪಂದ್ಯಗಳಲ್ಲೂ ಪಾಕಿಸ್ತಾನದ ಪರ ವಿಕೆಟ್‌ಕೀಪರ್ ಬ್ಯಾಟರ್ ರಿಜ್ವಾನ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇದೇ ವೇಳೆ ಈ ಮೂರು ಪಂದ್ಯಗಳು ನಡೆಯುವ ಸಮಯದಲ್ಲಿ ರಿಜ್ವಾನ್ ಮೈದಾನದಲ್ಲಿ ನಮಾಜ್ ಮಾಡುವ ವೀಡಿಯೊ ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ಇದೀಗ ಟೀಂ ಇಂಡಿಯಾ ಅಭಿಮಾನಿಗಳು ರಿಜ್ವಾನ್ ಅವರನ್ನು ಜೈ ಶ್ರೀ ರಾಮ್ ಘೋಷಣೆಯ ಮೂಲಕ ಅಣುಕಿಸಿ ಕಾಲೆಳೆದಿದ್ದಾರೆ.
As per Pakistanis, offering Namaz is okay but chanting "Jai Shree Ram" is not okay. Hypocrites.
We will do. Stop if you can.#JaiShreeRam #INDvsPAK #indvspak2023 #NarendraModiStadium #ICCCricketWorldCup23 pic.twitter.com/0fH3BfniOr
— The Right Wing Guy (@T_R_W_G) October 14, 2023
Crowd of 100K+ Singing Jai Shree Ram at Narendra Modi Stadium🚩🔥#viratkohli #INDvsPAK pic.twitter.com/VOrotZBul9
— 𝙒𝙧𝙤𝙜𝙣🥂 (@wrogn_edits) October 14, 2023
ಪಾಕ್ ತಂಡದ ಪೆವಿಲಿಯನ್ ಪರೇಡ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಕೇವಲ 191 ರನ್ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕ ಬಾಬರ್ ಆಝಂ 50 ರನ್ ಸಿಡಿಸಿದರೆ, ಮೊಹಮ್ಮದ್ ರಿಜ್ವಾನ್, ಏಳು ಬೌಂಡರಿಗಳ ನೆರವಿನಿಂದ 49 ರನ್ ಕಲೆಹಾಕಿದರು. ಇನ್ನು ಈ ಗುರಿ ಬೆನ್ನಟ್ಟಿದ ಭಾರತದ ಪರ ರೋಹಿತ್ ಶರ್ಮಾ 6ಅವರ ಬಿರುಸಿನ 86 ರನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅಜೇಯ 53 ರನ್ಗಳ ನೆರವಿನಿಂದ ಸುಲಭವಾಗಿ ಗೆಲುವಿನ ದಡ ಸೇರಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Sun, 15 October 23