ಇಂದಿನಿಂದ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ (England Vs South Africa) ನಡುವೆ ಟೆಸ್ಟ್ ಪಂದ್ಯ ಆರಂಭಾವಗಿದ್ದು, ಉಭಯ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಹೀಗಾಗಿ ಮೊದಲ ದಿನದಾಟವನ್ನು ನಿಗದಿತ ಸಮಯಕ್ಕಿಂತ ಮೊದಲೇ ನಿಲ್ಲಿಸಬೇಕಾಯಿತು. ಆದರೆ, ಆಟ ನಿಲ್ಲುವ ವೇಳೆಗೆ ಇಂಗ್ಲೆಂಡ್ ತಂಡದ ಅರ್ಧದಷ್ಟು ಬ್ಯಾಟರ್ಸ್ಗಳು ಪೆವಿಲಿಯನ್ ಸೇರಿದ್ದರು. ಅವರಲ್ಲಿ ಒಬ್ಬರು ಇಂಗ್ಲೆಂಡ್ ಆಟಗಾರ ಜಾನಿ ಬೈರ್‌ಸ್ಟೋವ್ (Jonny Bairstow). ಬೈರ್‌ಸ್ಟೋವ್ ಇತ್ತಿಚಿನ ದಿನಗಳಲ್ಲಿ ಸೂಪರ್ ಫಾರ್ಮ್‌ನಲ್ಲಿದ್ದು, ಕಳೆದ 5 ಇನ್ನಿಂಗ್ಸ್‌ಗಳಲ್ಲಿ 4 ರಲ್ಲಿ ಶತಕ ಬಾರಿಸಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಅವರನ್ನು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಅನ್ರಿಚ್ ನಾರ್ಕಿಯಾ (Anrich Nortje) ಬೇಟೆಯಾಡಿದರು.
ಎನ್ರಿಕ್ ನಾರ್ಕಿಯಾ ಅವರ ಹೆಸರು ಪ್ರಸ್ತುತ ವಿಶ್ವ ಕ್ರಿಕೆಟ್‌ನ ವೇಗದ ಬೌಲರ್‌ಗಳ ಪಟ್ಟಿಯಲ್ಲಿದೆ. ಅಷ್ಟೇ ಅಲ್ಲ, ಸದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಹಾಟೆಸ್ಟ್ ಫಾರ್ಮ್‌ನಲ್ಲಿರುವ ಯಾವುದೇ ಬ್ಯಾಟ್ಸ್‌ಮನ್ ಇದ್ದರೆ ಅದು ಜಾನಿ ಬೈರ್‌ಸ್ಟೋವ್ ಎಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಎದುರಾಳಿ ತಂಡದ ಸ್ಟಾರ್ ಬ್ಯಾಟರ್ನನ್ನು ಆದಷ್ಟು ಬೇಗ ಪೆವಿಲಿಯನ್ಗೆ ಕಳುಹಿಸಬೇಕಾದ ಜವಬ್ದಾರಿ ಹರಿಣಗಳ ಬೌಲಿಂಗ್ ವಿಭಾಗದ ಮೇಲಿತ್ತು. ಈ ಕೆಲಸವನ್ನು ತಂಡದ ವೇಗದ ಬೌಲರ್ ಎನ್ರಿಕ್ ನಾರ್ಕಿಯಾ ಬಹು ಬೇಗನೆ ಮಾಡಿ ಮುಗಿಸಿದರು.
ಶೂನ್ಯಕ್ಕೆ ಬೈರ್‌ಸ್ಟೋವ್ ಔಟ್
ಜಾನಿ ಬೈರ್‌ಸ್ಟೋವ್ ಕ್ರೀಸ್‌ಗೆ ಕಾಲಿಟ್ಟ ತಕ್ಷಣ ದಕ್ಷಿಣ ಆಫ್ರಿಕಾದ ವೇಗಿ ತಮ್ಮದೇ ವೇಗದಲ್ಲಿ ದಾಳಿ ನಡೆಸಿದರು. ಬೈರ್‌ಸ್ಟೋವ್ ಆಗಷ್ಟೇ ವಿಕೆಟ್ ಮೇಲೆ ಕಾಲಿಟ್ಟಿದ್ದರಿಂದ ದಕ್ಷಿಣ ಆಫ್ರಿಕಾ ವೇಗಿಗಳಿಗೆ ವಿಕೆಟ್ ಪಡೆಯುವುದು ಸುಲಭವಾಗಿತ್ತು. ಇದನ್ನು ಸದುಪಯೋಗ ಪಡಿಸಿಕೊಂಡ ವೇಗಿ ಎನ್ರಿಕ್, 5 ಎಸೆತಗಳನ್ನು ಎದುರಿಸಿದ ಜಾನಿ ಬೈರ್‌ಸ್ಟೋವ್ ಅವರನ್ನು ಖಾತೆ ತೆರೆಯಲೂ ಅವಕಾಶ ಮಾಡಿಕೊಡದೆ ಕ್ಲೀನ್ ಬೌಲ್ಡ್ ಮಾಡಿದರು. ಇದು ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ಐದನೇ ಹೊಡೆತವಾಗಿತ್ತು.
ವರ್ಷದ ಅತ್ಯಂತ ವೇಗದ ಟೆಸ್ಟ್ ಎಸೆತ
ಬೈರ್‌ಸ್ಟೋವ್ ಟೆಸ್ಟ್ ಕ್ರಿಕೆಟ್‌ನ ಕೊನೆಯ 5 ಇನ್ನಿಂಗ್ಸ್‌ಗಳಲ್ಲಿ 4 ರಲ್ಲಿ ಶತಕ ಗಳಿಸಿದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಬೇಕಾಯಿತು. ಆದಾಗ್ಯೂ, ಇಲ್ಲಿ ಮುಖ್ಯವಾದುದು ಎದುರಾಳಿ ತಂಡದ ಬೌಲರ್ನ ಬೆಂಕಿ ಎಸೆತ. ವಾಸ್ತವವಾಗಿ, ಆ ಚೆಂಡು ಈ ವರ್ಷದ ಟೆಸ್ಟ್‌ನಲ್ಲಿ ವಿಕೆಟ್ ಬಿದ್ದ ಅತ್ಯಂತ ವೇಗದ ಎಸೆತವಾಗಿತ್ತು.
ಎನ್ರಿಕ್, ಜಾನಿ ಬೈರ್‌ಸ್ಟೋವ್ ಅವರ ವಿಕೆಟ್ ಪಡೆದ ಚೆಂಡನ್ನು 93 mph ವೇಗದಲ್ಲಿ ಎಸೆdಇದ್ದರು. ಅಂದರೆ ಕಿಲೋಮೀಟರ್ ನಲ್ಲಿ ಲೆಕ್ಕ ಹಾಕಿದರೆ ಅದರ ವೇಗ ಗಂಟೆಗೆ 150 ಕಿ.ಮೀ. ಈ ವರ್ಷ ಟೆಸ್ಟ್‌ನಲ್ಲಿ ಇದುವರೆಗಿನ ಅತಿ ವೇಗದ ವಿಕೆಟ್ ಪಡೆದ ಎಸೆತ ಇದಾಗಿದೆ.