IND vs ZIM: 7 ಓವರ್ 3 ವಿಕೆಟ್; 188 ದಿನಗಳ ನಂತರ ತಂಡಕ್ಕೆ ಭರ್ಜರಿ ಎಂಟ್ರಿಕೊಟ್ಟ ದೀಪಕ್ ಚಹಾರ್..!
Deepak Chahar: ದೀಪಕ್ ಚಹಾರ್ ಇದುವರೆಗೆ 7 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ನಿರೀಕ್ಷೆಯಂತೆ ಕಮ್ ಬ್ಯಾಕ್ ಮಾಡಿದ್ದಾರೆ.
ಹಲವು ತಿಂಗಳು ಕ್ರಿಕೆಟ್ನಿಂದ ಬ್ರೇಕ್ ತೆಗೆದುಕೊಂಡು ತಂಡಕ್ಕೆ ಮರಳಿದ ಬಳಿಕ ಅದ್ಭುತ ಪ್ರದರ್ಶನ ನೀಡುವುದು ಅಷ್ಟು ಸುಲಭವಲ್ಲ. ಆದರೆ ಕೆಲವೇ ಆಟಗಾರರು ಬಲವಾದ ಪುನರಾಗಮನ ಮಾಡುತ್ತಾರೆ. ಅಂತಹ ಆಟಗಾರರಲ್ಲಿ ಒಬ್ಬರು ದೀಪಕ್ ಚಹಾರ್. 188 ದಿನಗಳ ಅಂದರೆ 6 ತಿಂಗಳ ಅಂತರದ ನಂತರ, ದೀಪಕ್ ಚಹಾರ್ (Deepak Chahar) ಇಂದು ಮೈದಾನಕ್ಕೆ ಮರಳಿದ್ದಾರೆ. ತಮ್ಮ ಕೊನೆಯ ಏಕದಿನ ಪಂದ್ಯವನ್ನು ಫೆಬ್ರವರಿ 11 ರಂದು ಆಡಿದ್ದ ದೀಪಕ್ಗೆ ಈ ಸರಣಿಯ ಬಹಳ ಮುಖ್ಯವಾಗಿದೆ. ಏಕೆಂದರೆ ಈ ಸರಣಿಯಲ್ಲಿನ ಅವರ ಪ್ರದರ್ಶನದ ಆಧಾರದ ಮೇಲೆ, ಏಷ್ಯಾಕಪ್ (Asia Cup) ಮತ್ತು ನಂತರ ಮುಂಬರುವ T20 ವಿಶ್ವಕಪ್‌ನ ಬಾಗಿಲುಗಳು ಅವರಿಗೆ ತೆರೆದುಕೊಳ್ಳಬಹುದು. ಹೀಗಾಗಿ ದೀಪಕ್ ಚಹಾರ್ ಅವರಿಂದ ಅಭಿಮಾನಿಗಳು ಮತ್ತು ಬಿಸಿಸಿಐ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಇಂದು 6 ತಿಂಗಳ ಬಳಿಕ ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ ದೀಪಕ್ ನಿರಾಸೆ ಮೂಡಿಸಲಿಲ್ಲ.
ದೀಪಕ್ ಚಹಾರ್ ಅದ್ಭುತ ಸ್ಪೆಲ್
ಪವರ್‌ಪ್ಲೇಯಲ್ಲಿ ವಿಕೆಟ್‌ಗಳನ್ನು ಕಬಳಿಸುವುದು ದೀಪಕ್ ಚಹಾರ್ ಅವರ ವಿಶೇಷತೆ. ಇಂದು ಕೂಡ ದೀಪಕ್ ತಮ್ಮ ಆಟಕ್ಕೆ ತಕ್ಕಂತೆ ಪ್ರದರ್ಶನ ನೀಡಿದರು. ಜಿಂಬಾಬ್ವೆ ಇಂದು ಎಚ್ಚರಿಕೆಯ ಆರಂಭ ಮಾಡಿ ಔಟಾಗದೆ 24 ರನ್ ಗಳಿಸಲಾಯಿತು. ಅದಾದ ನಂತರ ದೀಪಕ್ ಚಹಾರ್ ಅವರ ಆರ್ಭಟ ಶುರುವಾಯಿತು. ಜಿಂಬಾಬ್ವೆಯ ಆರಂಭಿಕ ಆಟಗಾರನಿಗೆ ದೀಪಕ್ ಅವರ ಸ್ವಿಂಗ್ ಎಸೆತಗಳನ್ನು ಆಡಲು ಸಾಧ್ಯವಾಗಲಿಲ್ಲ. 4 ರನ್ ಗಳಿಸಿ ಆಡುತ್ತಿದ್ದ ಕೀಯಾ, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರ ಎರಡನೇ ಆರಂಭಿಕ ಆಟಗಾರ ಮರುಮಣಿಯನ್ನು 8 ರನ್‌ಗಳಿಗೆ ಔಟ್ ಮಾಡಿದರು. ಹೀಗಾಗಿ ಜಿಂಬಾಬ್ವೆ 8.1 ಓವರ್‌ಗಳಲ್ಲಿ 26 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಆ ನಂತರ ವೆಸ್ಲಿ ಕೇವಲ 5 ರನ್‌ಗಳಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಜಿಂಬಾಬ್ವೆ 4 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿತು.
3 wickets. In a spell of 7 overs in a go.
Deepak Chahar has announced his comeback ❤? pic.twitter.com/wbQfKPIbYg
— JayGawas (@JayGawas14) August 18, 2022
ಐಪಿಎಲ್‌ನಲ್ಲಿ ದುಬಾರಿ ಬೆಲೆ
ದೀಪಕ್ ಚಹಾರ್ ಇದುವರೆಗೆ 7 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ನಿರೀಕ್ಷೆಯಂತೆ ಕಮ್ ಬ್ಯಾಕ್ ಮಾಡಿದ್ದಾರೆ. ಜಿಂಬಾಬ್ವೆ ಸರಣಿಗೂ ಮುನ್ನ ದೀಪಕ್ ಚಹಾರ್ ಭಾರತ ಪರ 7 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 5 ಇನ್ನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳೊಂದಿಗೆ 179 ರನ್ ಗಳಿಸಿ, ಬೌಲಿಂಗ್‌ನಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ದೀಪಕ್ ಚಹಾರ್ ದಾಖಲೆ ಮೊತ್ತಕ್ಕೆ ಮಾರಾಟವಾಗುವುದರೊಂದಿಗೆ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ ಗಾಯದ ಕಾರಣ ಐಪಿಎಲ್‌ನ ಪೂರ್ಣ ಸೀಸನ್ ಆಡಲು ದೀಪಕ್ಗೆ ಸಾಧ್ಯವಾಗಲಿಲ್ಲ.