Deepak Chahar Reception: ಭಾರತ ತಂಡದ ಆಲ್ರೌಂಡರ್ ದೀಪಕ್ ಚಹಾರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ದೆಹಲಿಯಲ್ಲಿ ಅದ್ದೂರಿಯಾಗಿ ನವ ದಂಪತಿಗಳ ಆರತಕ್ಷತೆ ಕಾರ್ಯಕ್ರವು ನೆರವೇರಿತತು. ಈ ಕಾರ್ಯಕ್ರಮದಲ್ಲಿ ಅನೇಕ ಆಟಗಾರರು ಭಾಗವಹಿಸಿದ್ದರು.
Jun 04, 2022 | 3:35 PM
1 / 5
2 / 5
ಚೆನ್ನೈನ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಈ ಹೊಸ ಜೋಡಿಯೊಂದಿಗಿನ ಆರತಕ್ಷತೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ರೈನಾ ಪತ್ನಿ ಪ್ರಿಯಾಂಕಾ ರೈನಾ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಯಾ ಗೋಲ್ಡನ್ ಗೌನ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡರೆ, ದೀಪಕ್ ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡರು.
3 / 5
ರೈನಾ ಅವರಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರಾಬಿನ್ ಉತ್ತಪ್ಪ, ಪಿಯೂಷ್ ಚಾವ್ಲಾ ತಮ್ಮ ಕುಟುಂಬದೊಂದಿಗೆ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಎಲ್ಲಾ ಆಟಗಾರರು ಆರತಕ್ಷತೆಯಲ್ಲಿ ಮೋಜಿನ ಮೂಡ್‌ನಲ್ಲಿ ಕಾಣಿಸಿಕೊಂಡರು. ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಕೂಡ ಆರತಕ್ಷತೆಗೆ ಬರುತ್ತಾರೆ ಎಂದು ಹೇಳಲಾಗಿದ್ದರೂ ಅದು ಆಗಲಿಲ್ಲ.
4 / 5
ಮಹಿಳಾ ಕ್ರಿಕೆಟರ್ ಪೂನಂ ಯಾದವ್ ದೀಪಕ್ ಚಾಹರ್ ಅವರ ಮದುವೆಯಲ್ಲಿ ಭಾಗವಹಿಸಿದ್ದರು. ಪೂನಂ ಆಗ್ರಾ ನಿವಾಸಿ. ಆದರೆ, ಇವರನ್ನು ಬಿಟ್ಟರೆ ಬೇರೆ ಯಾವ ಕ್ರಿಕೆಟಿಗರೂ ಮದುವೆಯಲ್ಲಿ ಕಾಣಿಸಿಕೊಂಡಿಲ್ಲ.