NED vs SA: ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ವಿಲನ್ ಆದ ತಂಡದ ಮಾಜಿ ಆಟಗಾರ..!

|

Updated on: Oct 18, 2023 | 8:09 AM

ICC World Cup 2023: ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ 44 ರನ್​ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರಲ್ಲಿ ವಿಶೇಷತೆ ಏನೆಂದರೆ ಆಫ್ರಿಕಾ ಪರ ಉರುಳಿದ 4 ವಿಕೆಟ್​ಗಳಲ್ಲಿ ಪ್ರಮುಖ 2 ವಿಕೆಟ್​ಗಳನ್ನು ಪಡೆದಿದ್ದು, ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಂಬುದು.

NED vs SA: ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ವಿಲನ್ ಆದ ತಂಡದ ಮಾಜಿ ಆಟಗಾರ..!
ರೋಲೋಫ್ ವ್ಯಾನ್ ಡೆರ್ ಮೆರ್ವೆ
Follow us on

ಏಕದಿನ ವಿಶ್ವಕಪ್​ನಲ್ಲಿ (ICC World cup 2023) ಸತತ 2 ಪಂದ್ಯಗಳನ್ನು ಗೆದ್ದಿದ್ದ ದಕ್ಷಿಣ ಆಫ್ರಿಕಾ, ನೆದರ್ಲೆಂಡ್ಸ್ (South Africa vs Netherlands) ಎದುರು ಮುಜುಗರದ ಸೋಲನುಭವಿಸಿದೆ. ನೆದರ್ಲೆಂಡ್ಸ್ ವಿರುದ್ಧ 246 ರನ್ ಚೇಸ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಯಾರೂ ಊಹಿಸದ ಸೋಲನುಭವಿಸಿದೆ. ಅದರಲ್ಲೂ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಹರಿಣಗಳು ನೆದರ್ಲೆಂಡ್ಸ್ ವಿರುದ್ಧ ಮಾತ್ರ ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ 44 ರನ್​ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರಲ್ಲಿ ವಿಶೇಷತೆ ಏನೆಂದರೆ ಆಫ್ರಿಕಾ ಪರ ಉರುಳಿದ 4 ವಿಕೆಟ್​ಗಳಲ್ಲಿ ಪ್ರಮುಖ 2 ವಿಕೆಟ್​ಗಳನ್ನು ಪಡೆದಿದ್ದು, ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಂಬುದು.

ಆರಂಭದಲ್ಲೇ ಕುಸಿದ ಆಫ್ರಿಕಾ

ಮೊದಲ 10 ಓವರ್​ಗಳಲ್ಲೇ ನೆದರ್ಲೆಂಡ್ಸ್ ಬೌಲರ್‌ಗಳು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ನಾಯಕ ಟೆಂಬಾ ಬವುಮಾ, ಏಡನ್ ಮಾರ್ಕ್ರಾಮ್ ಮತ್ತು ರಾಸ್ಸಿ ವ್ಯಾನ್ ಡೆರ್ ಡ್ಯುಸೆನ್ ಅವರನ್ನು ಮೈದಾನದಿಂದ ಹೊರಗಟ್ಟಿದರು. 246 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಎಚ್ಚರಿಕೆಯ ಆರಂಭ ಪಡೆಯಿತು. ನಾಯಕ ಟೆಂಬಾ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್​ಗೆ ಈ ಬಾರಿ ಬೃಹತ್ ಜೊತೆಯಾಟ ನಡೆಸಲು ಸಾಧ್ಯವಾಗಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಕ್ವಿಂಟನ್ ಡಿ ಕಾಕ್ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಶತಕ ಬಾರಿಸುವ ಇರಾದೆಯೊಂದಿಗೆ ಮೈದಾನಕ್ಕಿಳಿದಿದ್ದರು. ಆದರೆ ತಂಡದ ಮೊತ್ತ 36 ರನ್‌ಗಳಿರುವಾಗ ಡಿ ಕಾಕ್ ವಿಕೆಟ್ ಪತನವಾಯಿತು.

ಡಚ್ಚರ ಆಟಕ್ಕೆ ‘ಸೋತ’ ಆಫ್ರಿಕಾ; ನಿರೀಕ್ಷೆ ನೀರುಪಾಲಾಗಿದೆ ಎಂದ ಹರಿಣಗಳ ನಾಯಕ ಬವುಮಾ..!

2 ವಿಕೆಟ್ ಉರುಳಿಸಿದ ಆಫ್ರಿಕಾದ ಮಾಜಿ ಆಟಗಾರ

ದಕ್ಷಿಣ ಆಫ್ರಿಕಾಕ್ಕೆ ಮೊದಲ ಹೊಡೆತ ನೀಡಿದ ಕಾಲಿನ್ ಅಕರ್‌ಮನ್ 20 ರನ್‌ಗಳಿಸಿದ್ದ ಕ್ವಿಂಟನ್ ಡಿ ಕಾಕ್‌ ವಿಕೆಟ್ ಪಡೆದರು. ಆ ಬಳಿಕ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕ ಕುಸಿಯಿತು. ಬಳಿಕ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮತ್ತು ಈಗ ನೆದರ್ಲೆಂಡ್ಸ್‌ಗಾಗಿ ಆಡುತ್ತಿರುವ ರೋಲೋಫ್ ವ್ಯಾನ್ ಡೆರ್ ಮೆರ್ವೆ ದಕ್ಷಿಣ ಆಫ್ರಿಕಾಕ್ಕೆ ಎರಡನೇ ಹೊಡೆತವನ್ನು ನೀಡಿದರು. ಮೆರ್ವೆ ಕ್ಯಾಪ್ಟನ್ ಬವುಮಾ ಅವರನ್ನು ಬೇಟೆಯಾಡಿದರು. 16 ರನ್ ಗಳಿಸಿ ಆಡುತ್ತಿದ್ದ ಟೆಂಬಾ ಅವರನ್ನು ಮೆರ್ವೆ ಬೌಲ್ಡ್ ಮಾಡಿದರು. ಬಳಿಕ ಪಾಲ್ ವ್ಯಾನ್ ಮೀಕೆರೆನ್, 1 ರನ್‌ ಗಳಿಸಿದ್ದ ಏಡನ್ ಮರ್ಕ್ರಾಮ್ ಅವರನ್ನು ಬೌಲ್ಡ್ ಮಾಡಿದರು. ನಂತರ ತನ್ನ ಎರಡನೇ ವಿಕೆಟ್ ಉರುಳಿಸಿದ ರೋಲೋಫ್ ವ್ಯಾನ್ ಡೆರ್ ಮೆರ್ವೆ 4 ರನ್‌ಗಳಿಸಿದ್ದ ರಾಸ್ಸಿ ವ್ಯಾನ್ ಡೆರ್ ಡ್ಯೂಸೆನ್ ವಿಕೆಟ್ ಪಡೆದರು. ಇದರಿಂದ ಆಫ್ರಿಕಾ ತಂಡ 44 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:48 am, Wed, 18 October 23