ಡಚ್ಚರ ಆಟಕ್ಕೆ ‘ಸೋತ’ ಆಫ್ರಿಕಾ; ನಿರೀಕ್ಷೆ ನೀರುಪಾಲಾಗಿದೆ ಎಂದ ಹರಿಣಗಳ ನಾಯಕ ಬವುಮಾ..!

NED vs SA, ICC World cup 2023: ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಚೋಕರ್ಸ್ ಎಂದು ಕರೆಯಲಾಗುತ್ತದೆ. ಹೀಗಾಗಿ ಈ ವರ್ಷ ದಕ್ಷಿಣ ಆಫ್ರಿಕಾ ನಮ್ಮ ಮೇಲಿರುವ ಈ ಕಳಂಕವನ್ನು ಅಳಿಸಲು ಹರಸಾಹಸ ಪಡುತ್ತಿದೆ. ಆದರೆ ಲೀಗ್ ಸುತ್ತಿನ ಪಂದ್ಯದಲ್ಲಿ ದುರ್ಬಲ ನೆದರ್ಲೆಂಡ್ಸ್ ವಿರುದ್ಧದ ಸೋಲು ಅವರ ಚೋಕರ್ಸ್ ಹಣೆಪಟ್ಟವನ್ನು ಮತ್ತೊಮ್ಮೆ ನೆನಪಿಸಿದೆ.

ಡಚ್ಚರ ಆಟಕ್ಕೆ ‘ಸೋತ’ ಆಫ್ರಿಕಾ; ನಿರೀಕ್ಷೆ ನೀರುಪಾಲಾಗಿದೆ ಎಂದ ಹರಿಣಗಳ ನಾಯಕ ಬವುಮಾ..!
ದಕ್ಷಿಣ ಆಫ್ರಿಕಾ- ನೆದರ್ಲೆಂಡ್ಸ್
Follow us
ಪೃಥ್ವಿಶಂಕರ
|

Updated on:Oct 18, 2023 | 6:43 AM

ಏಕದಿನ ವಿಶ್ವಕಪ್‌  (ICC World cup 2023) ಇತಿಹಾಸದಲ್ಲಿ ಪ್ರಮುಖ ಪಂದ್ಯಗಳನ್ನು ಸೋಲುವ ಅಥವಾ ದುರ್ಬಲ ತಂಡಗಳಿಗೆ ಮಣಿಯುವ ದಕ್ಷಿಣ ಆಫ್ರಿಕಾ ತಂಡವನ್ನು ಚೋಕರ್ಸ್ ಎಂದು ಕರೆಯಲಾಗುತ್ತದೆ. ಹೀಗಾಗಿ ಈ ವರ್ಷ ದಕ್ಷಿಣ ಆಫ್ರಿಕಾ ತಮ್ಮ ಮೇಲಿರುವ ಈ ಕಳಂಕವನ್ನು ಅಳಿಸಿ ಹಾಕುವ ಸಲುವಾಗಿ ಹರಸಾಹಸ ಪಡುತ್ತಿದೆ. ಆದರೆ ಲೀಗ್ ಸುತ್ತಿನ ಪಂದ್ಯದಲ್ಲಿ ದುರ್ಬಲ ನೆದರ್ಲೆಂಡ್ಸ್ ವಿರುದ್ಧದ ಸೋಲು ಅವರ ಚೋಕರ್ಸ್ ಹಣೆಪಟ್ಟವನ್ನು ಮತ್ತೊಮ್ಮೆ ನೆನಪಿಸಿದೆ. ಲೀಗ್ ಸುತ್ತಿನಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾದಂತಹ ದೈತ್ಯರನ್ನು ಸೋಲಿಸಿದ ದಕ್ಷಿಣ ಆಫ್ರಿಕಾ ದುರ್ಬಲ ನೆದರ್ಲೆಂಡ್ಸ್ (South Africa vs Netherlands) ವಿರುದ್ಧ ಸೋತಿದೆ. ಧರ್ಮಶಾಲಾದಲ್ಲಿ ನಡೆದ ವಿಶ್ವಕಪ್ 15 ನೇ ಪಂದ್ಯದಲ್ಲಿ ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾವನ್ನು 38 ರನ್‌ಗಳಿಂದ ಸೋಲಿಸಿದೆ. ಈ ವಿಶ್ವಕಪ್‌ನಲ್ಲಿ ಇದು ನೆದರ್ಲೆಂಡ್ಸ್ ತಂಡದ ಮೊದಲ ಗೆಲುವು. ಮಳೆ ಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 43 ಓವರ್​ಗಳಲ್ಲಿ 245 ರನ್ ಗಳಿಸಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 42.5 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್ ಆಯಿತು. ಸೋಲಿನ ಬಳಿಕ ಮಾತನಾಡಿದ ಆಫ್ರಿಕಾ ನಾಯಕ ಬವುಮಾ (Temba Bavuma) ತಂಡದ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ನಿರೀಕ್ಷೆ ನೀರುಪಾಲಾಗಿದೆ

ಈ ಸೋಲಿನ ಬಳಿಕ ಮಾತನಾಡಿದ ಆಫ್ರಿಕಾ ನಾಯಕ ಬವುಮಾ, ನೆದರ್ಲೆಂಡ್ಸ್ ತಂಡವನ್ನು ಸೋಲಿಸುವ ಮೂಲಕ ನಾವು ಎರಡು ಅಂಕಗಳನ್ನು ಸುಲಭವಾಗಿ ಪಡೆಯುತ್ತೇವೆ ಎಂದು ಭಾವಿಸಿದ್ದೇ. ಆದರೆ ನನ್ನ ನಿರೀಕ್ಷೆ ನೀರುಪಾಲಾಗಿದೆ. ದಕ್ಷಿಣ ಆಫ್ರಿಕಾವನ್ನು ನೆದರ್ಲೆಂಡ್ 38 ರನ್‌ಗಳಿಂದ ಸೋಲಿಸಿದೆ. ಈ ಸೋಲು ದಕ್ಷಿಣ ಆಫ್ರಿಕಾದ ಕ್ರೀಡಾಭಿಮಾನಿಗಳಿಗೆ ಆಘಾತ ತಂದಿದೆ ಎಂದಿದ್ದಾರೆ.

ವಿಶ್ವಕಪ್‌ ಆತಿಥ್ಯಕ್ಕೆ ಬೆಂಗಳೂರು ಸಜ್ಜು; ಇಲ್ಲಿ ನಡೆಯುವ 5 ಪಂದ್ಯಗಳ ವಿವರ ಇಲ್ಲಿದೆ

ಫೀಲ್ಡಿಂಗ್ ಸ್ಲೋಪಿಯಾಯಿತು

ನಾವು ನೆದರ್ಲೆಂಡ್ಸ್​ ತಂಡದ 6 ವಿಕೆಟ್‌ಗಳನ್ನು 112 ರನ್​ಗಳಿಗೆ ಉರುಳಿಸಿದ್ದೇವು. ಆದ್ದರಿಂದ ನಾವು ಅವರನ್ನು 200 ದಾಟಲು ಬಿಡಬಾರದಿತ್ತು. ಆದರೆ ನಾವು ಕ್ಯಾಚ್​ಗಳನ್ನು ಕೈಚೆಲ್ಲಿದೆವು. ಫೀಲ್ಡಿಂಗ್ ಸ್ಲೋಪಿಯಾಯಿತು. ನಮ್ಮ ಬ್ಯಾಟಿಂಗ್​ನಲ್ಲೂ ಕೊರತೆ ಇತ್ತು. ಆಸ್ಟ್ರೇಲಿಯಾ ವಿರುದ್ಧ ಎಲ್ಲವೂ ಚೆನ್ನಾಗಿತ್ತು. ಈಗ ಮತ್ತೊಮ್ಮೆ ತಂಡವು ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲಿದೆ. ಎಷ್ಟೇ ದುಃಖವಾದರೂ ಈ ಸೋಲನ್ನು ಅರಗಿಸಿಕೊಳ್ಳಬೇಕು. ಆದರೆ ಸ್ಪರ್ಧೆ ಇನ್ನೂ ಮುಗಿದಿಲ್ಲ. ನೆದರ್ಲೆಂಡ್ಸ್​ ತಂಡ ಕೂಡ ಚೆನ್ನಾಗಿ ಆಡಿತು. ನಮ್ಮ ಮೇಲೆ ಸಂಪೂರ್ಣ ಒತ್ತಡ ಹೇರಲಾಯಿತು. ಅವರಿಗೆ ಶುಭವಾಗಲಿ ಎಂದು ತೆಂಬ ಬಾವುಮ ಹೇಳಿದರು.

ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ

ದಕ್ಷಿಣ ಆಫ್ರಿಕಾ ನೆದರ್ಲೆಂಡ್ಸ್ ಅನ್ನು ಸೋಲಿಸಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಹೊಂದಿತ್ತು. ಆದರೆ ಈ ಅವಕಾಶ ಕೈತಪ್ಪಿ ಈಗ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಈ ಗೆಲುವಿನೊಂದಿಗೆ ನೆದರ್ಲೆಂಡ್ಸ್​ ತಂಡ ಶ್ರೀಲಂಕಾವನ್ನು ಹಿಂದಿಕ್ಕಿ ಒಂಬತ್ತನೇ ಸ್ಥಾನಕ್ಕೇರಿದೆ. ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ತಂಡ ಎರಡನೇ ಸ್ಥಾನದಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:31 am, Wed, 18 October 23

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ