ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami) ಟೆನಿಸ್ ತಾರೆ ಸಾನಿಯಾ ಮಿರ್ಝಾ (Sania Mirza) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಾ? ಇಂತಹ ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಕೆಲ ಸೋಷಿಯಲ್ ಮೀಡಿಯಾ ಪೋಸ್ಟ್ಗಳು. ಪಾಕಿಸ್ತಾನ್ ಕ್ರಿಕೆಟಿಗ ಶೊಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಝಾ ದಾಂಪತ್ಯ ಜೀವನದಿಂದ ಬೇರ್ಪಟ್ಟಿದ್ದಾರೆ. ಇದರ ಬೆನ್ನಲ್ಲೇ ಶೊಯೆಬ್ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದರು. ಈ ಸುದ್ದಿ ಬೆನ್ನಲ್ಲೇ ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಸಾನಿಯಾ ಮಿರ್ಝಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿದೆ.
ಅತ್ತ ಹಸೀನ್ ಜಹಾನ್ನಿಂದ ದೂರವಾಗಿರುವ ಮೊಹಮ್ಮದ್ ಶಮಿ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಶೊಯೆಬ್ನಿಂದ ದೂರವಾಗಿರುವ ಸಾನಿಯಾ ಹೆಸರು ಶಮಿ ಜೊತೆ ತಳುಕು ಹಾಕಿಕೊಂಡಿದೆ.
ಇದೊಂದು ಸುಳ್ಳು ಸುದ್ದಿ. ಸಾನಿಯಾ ಮಿರ್ಝಾ ಆಗಲಿ ಅಥವಾ ಮೊಹಮ್ಮದ್ ಶಮಿಯಾಗಲಿ ಅಂತಹ ಯಾವುದೇ ಆಲೋಚನೆಯಲ್ಲಿಲ್ಲ. ಇದಾಗ್ಯೂ ಸಾನಿಯಾ-ಶೊಯೆಬ್ ಮಲಿಕ್ ಡೈವೋರ್ಸ್ ಬೆನ್ನಲ್ಲೇ ಇಂತಹದೊಂದು ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು.
ಮೇಲ್ನೋಟಕ್ಕೆ ಪಾಕ್ ಆಟಗಾರ ಶೊಯೆಬ್ ಮಲಿಕ್ ಅವರನ್ನು ಗುರಿಯಾಗಿಸಿ ಮಾಡಲಾಗಿದ್ದ ಈ ಪೋಸ್ಟ್ನಲ್ಲಿ, ಪಾಕ್ ಕ್ರಿಕೆಟಿಗ ಕೈಬಿಟ್ಟರೂ ಸಾನಿಯಾರನ್ನು ವಿವಾಹವಾಗಲು ಟೀಮ್ ಇಂಡಿಯಾ ಆಟಗಾರ ಇದ್ದಾನೆಂದು ಮೊಹಮ್ಮದ್ ಶಮಿ ಅವರನ್ನು ಈ ವಿಚಾರದಲ್ಲಿ ಎಳೆದು ತರಲಾಗಿತ್ತು.
ಅತ್ತ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ನಿಂದ ದೂರವಾಗಿದ್ದಾರೆ. ಇತ್ತ ಸಾನಿಯಾ ಮಿರ್ಝಾ ಕೂಡ ಡೈವೋರ್ಸ್ ಆಗಿರುವುದರಿಂದ ಈ ವದಂತಿಯು ಬೇಗನೆ ವೈರಲ್ ಆಗಿದೆ. ಇದಾದ ಬಳಿಕ ಇಬ್ಬರ ಫೋಟೋವನ್ನು ಎಡಿಟ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ. ಇದೀಗ ಶಮಿ-ಸಾನಿಯಾ ವಿವಾಹ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಫ್ಯಾಕ್ಟ್ ಚೆಕ್ನಿಂದ ತಿಳಿದು ಬಂದಿದೆ. ಹೀಗಾಗಿ ಇದೊಂದು ಸುಳ್ಳು ಸುದ್ದಿ ಅಷ್ಟೇ.
ಇದನ್ನೂ ಓದಿ: IPL 2024: RCB ಗೆ ವಿಂಡೀಸ್ ವೇಗಿ?
ಶೊಯೆಬ್ ಮಲಿಕ್ ಇದುವರೆಗೆ ಮೂರು ಮದುವೆಯಾಗಿದ್ದಾರೆ. 2002 ರಲ್ಲಿ ಆಯೇಷಾ ಸಿದ್ದಿಕಿ ಎಂಬವರೊಂದಿಗೆ ವಿವಾಹವಾಗಿದ್ದ ಮಲಿಕ್ 2010 ರಲ್ಲಿ ಸಾನಿಯಾ ಮಿರ್ಝಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಾನಿಯಾಗೂ ವಿಚ್ಛೇದನ ನೀಡಿ ಪಾಕ್ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದಾರೆ. ಇನ್ನು ಶೊಯೆಬ್ ಮಲಿಕ್ ಹಾಗೂ ಸಾನಿಯಾ ದಂಪತಿಗೆ ಐದು ವರ್ಷದ ಇಝಾನ್ ಎಂಬ ಮಗನಿದ್ದಾನೆ. ಸದ್ಯ ಸಿಂಗಲ್ ಪೇರೆಂಟ್ ಆಗಿರುವ ಸಾನಿಯಾ ಮಿರ್ಝಾ ಮತ್ತೊಂದು ಮದುವೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
Published On - 10:49 am, Wed, 31 January 24