‘ಅವರೇ ಕಾರಣ’; ಸತತ ನಾಲ್ಕನೇ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಪ್ ದೂರಿದ್ದು ಯಾರನ್ನು?

| Updated By: ರಾಜೇಶ್ ದುಗ್ಗುಮನೆ

Updated on: Apr 12, 2024 | 8:23 AM

ಇಬ್ಬನಿಯಿಂದ ಪಿಚ್ ಒದ್ದೆ ಆಗಿರುವುದು ಪ್ರಮುಖ ಪಾತ್ರವಹಿಸುತ್ತದೆ ಅನ್ನೋದು ನಮಗೆ ಗೊತ್ತಿತ್ತು. ನಾವು 250+ ಸ್ಕೋರ್ ಮಾಡಬೇಕಿತ್ತು ಎಂದು ಫಾಪ್ ಡುಪ್ಲೆಸಿಸ್ ಹೇಳಿದ್ದಾರೆ.

‘ಅವರೇ ಕಾರಣ’; ಸತತ ನಾಲ್ಕನೇ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಪ್ ದೂರಿದ್ದು ಯಾರನ್ನು?
ಫಾಪ್
Follow us on

ಮುಂಬೈ ಇಂಡಿಯನ್ಸ್ (MI) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್​ಸಿಬಿ ಸುಲಭದಲ್ಲಿ ಸೋಲು ಒಪ್ಪಿಕೊಂಡಿದೆ. 197 ರನ್​ಗಳ ಬೃಹತ್ ಮೊತ್ತವನ್ನು ಮುಂಬೈ ಇಂಡಿಯನ್ಸ್ ತಂಡ 15 ಓವರ್​ಗಳಲ್ಲಿ ಕೇವಲ ಮೂರು ವಿಕೆಟ್​ ನಷ್ಟಕ್ಕೆ ಚೇಸ್ ಮಾಡಿದೆ. ಇದರಿಂದ ಆರ್​ಸಿಬಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆರ್​ಸಿಬಿ ಹೀನಾಯ ಬೌಲಿಂಗ್ ಇದಕ್ಕೆ ಕಾರಣ. ಆರ್​ಸಿಬಿ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಒದ್ದೆ ಪಿಚ್​ನ ದೂರಿದ್ದಾರೆ. ಇದರಿಂದ ನಮ್ಮ ಬೌಲರ್​ಗಳು ಎಡವಿದರು ಎಂದಿದ್ದಾರೆ.

ಗುರುವಾರದ (ಏಪ್ರಿಲ್ 12) ಪಂದ್ಯದಲ್ಲಿ ಆರ್​ಸಿಬಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಫಾಪ್ ಡುಪ್ಲೆಸಿಸ್, ರಜತ್ ಪಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆ ಆದರು. ಅಂತಿಮವಾಗಿ 20 ಓವರ್​ಗಳ ಮುಕ್ತಾಯಕ್ಕೆ ಆರ್​ಸಿಬಿ 196 ರನ್​ಗಳನ್ನು ಗಳಿಸಿದೆ. ಇದು ಸಣ್ಣ ಮೊತ್ತವೇನು ಅಲ್ಲ. ಆದರೆ, ಮುಂಬೈ ಇಂಡಿಯನ್ಸ್ ಆಟಗಾರರು ನೀರು ಕುಡಿದಷ್ಟೇ ಸುಲಭದಲ್ಲಿ ರನ್ ಚೇಸ್ ಮಾಡಿದರು. ಆರ್​ಸಿಬಿ ಬೌಲರ್​ಗಳು ಬೆವರಿ ಬೆಂಡಾದರು.

‘ಇಬ್ಬನಿಯಿಂದ ಪಿಚ್ ಒದ್ದೆ ಆಗಿರುವುದು ಪ್ರಮುಖ ಪಾತ್ರವಹಿಸುತ್ತದೆ ಅನ್ನೋದು ನಮಗೆ ಗೊತ್ತಿತ್ತು. ನಾವು 250+ ಸ್ಕೋರ್ ಮಾಡಬೇಕಿತ್ತು. 190 ಅನ್ನೋದು ಕೆಲವು ಸ್ಟೇಡಿಯಂಗಳಲ್ಲಿ ದೊಡ್ಡ ಮೊತ್ತ. ಆದರೆ, ವಾಂಖೆಡೆಯಲ್ಲಿ ಇದು ದೊಡ್ಡ ಮೊತ್ತವಲ್ಲ. ಇದು ತೀರಾ ಸಣ್ಣ ಮೊತ್ತ ಎಂದು ಅವರಿಗೆ ಅನಿಸಿರಬಹುದು. ಮುಂಬೈ ಬ್ಯಾಟ್ಸಮನ್​ಗಳು ಒತ್ತಡ ಹೇರಿ ನಮ್ಮ ಬೌಲರ್​ಗಳು ಸಾಕಷ್ಟು ಮಿಸ್ಟೇಕ್ ಮಾಡುವಂತೆ ಮಾಡಿದರು. ಬಂದ ಎಲ್ಲಾ ಆಟಗಾರರು ಹೊಡೆಯುತ್ತಿದ್ದರು’ ಎಂದಿದ್ದಾರೆ ಅವರು.

ಇದನ್ನೂ ಓದಿ: ವಾಂಖೇಡೆಯಲ್ಲಿ ಪಾಂಡ್ಯನ ತೆಗಳಿದವರ ಬಾಯಲ್ಲೇ ಚಿಯರ್​ಅಪ್ ಮಾಡಿಸಿದ ಕೊಹ್ಲಿ

‘ಬೌಲಿಂಗ್ ವಿಚಾರದಲ್ಲಿ ನಾವು ವೀಕ್ ಆಗಿದ್ದೇವೆ. ಪವರ್‌ಪ್ಲೇನಲ್ಲಿ ಎರಡು ಅಥವಾ ಮೂರು ವಿಕೆಟ್ ತೆಗೆಯಬೇಕು. ಆದರೆ, ಹಾಗಾಗಿಲ್ಲ’ ಎಂದಿದ್ದಾರೆ ಫಾಪ್. ಇದರ ಜೊತೆಗೆ ಅವರು ಮುಂಬೈ ಇಂಡಿಯನ್ ಬೌಲರ್ ಜಸ್ಪ್ರೀತ್ ಬೂಮ್ರಾ ಅವರನ್ನು ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:11 am, Fri, 12 April 24