ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ (Faf Duplessis) ಐಪಿಎಲ್ 2022ರ ಪಂಜಾಬ್ ಕಿಂಗ್ಸ್ (PBKS vs RCB) ವಿರುದ್ಧದ ಮೊದಲ ಪಂದ್ಯದಲ್ಲೇ ಅಬ್ಬರಿಸಿದರು. ನಾಯಕನ ಆಟವಾಡಿದ ಫಾಫ್ ಕೇವಲ 57 ಎಸೆತಗಳಲ್ಲಿ 3 ಫೋರ್ ಮತ್ತು ಬರೋಬ್ಬರಿ 7 ಅಮೋಘ ಸಿಕ್ಸರ್ಗಳ ಮೂಲಕ 88 ರನ್ ಚಚ್ಚಿದರು. ಆರಂಭದಲ್ಲಿ ನಿಧಾನಗತಿಯ ಆಟವಾಡಿದ ಫಾಪ್ 30 ಎಸೆತಗಳಲ್ಲಿ ಗಳಿಸಿದ್ದು ಕೇವಲ 17 ರನ್ಗಳನ್ನು ಮಾತ್ರ. ಆದರೆ, ನಂತರ ಶುರುವಾಗಿದ್ದು ಬೌಂಡರಿ, ಸಿಕ್ಸರ್ಗಳ ಸುರಿ ಮಳೆ. ನಂತರದ 21 ಎಸೆತಗಳಲ್ಲಿ 71 ರನ್ ಸಿಡಿಸಿ ಮನಬಂದಂತೆ ಬ್ಯಾಟ್ ಬೀಸಿ ಪಂಜಾಬ್ ಬೌಲರ್ಗಳ ಬೆಂಡೆತ್ತಿದರು. ಜೊತೆಗೆ 65 ರನ್ ಗಳಿಸಿದ ವೇಳೆ ಫಾಫ್ ಐಪಿಎಲ್ನಲ್ಲಿ 3 ಸಾವಿರ ರನ್ ಪೂರೈಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಇದರ ನಡುವೆ ಡುಪ್ಲೆಸಿಸ್ ಅವರು. ಮಿ. 360 ಎಬಿ ಡಿವಿಲಿಯರ್ಸ್ (AB de Villiers) ಅವತಾರವನ್ನೂ ತಾಳಿದರು.
ಹೌದು, ಆರ್ಸಿಬಿ ತಂಡದ ಆಪತ್ಬಾಂಧವ ಎಂದೇ ಬಿಂಬಿತವಾಗಿರುವ ಮಿ. 360 ಎಬಿ ಡಿವಿಲಿಯರ್ಸ್ ಅಲಭ್ಯತೆಯಲ್ಲಿ ಬೆಂಗಳೂರು ತಂಡದ ಮೊದಲ ಬಾರಿಗೆ ಐಪಿಎಲ್ನಲ್ಲಿ ಕಣಕ್ಕಿಳಿದಿದೆ. ಇವರು ಇನ್ನುಮುಂದೆ ಬೆಂಗಳೂರು ತಂಡದ ಪರ ಆಡುವುದಿಲ್ಲ. ಅದೆಷ್ಟೊ ಬಾರಿ ಆರ್ಸಿಬಿ ಪರ ಏಕಾಂಗಿಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಎಬಿಡಿ ಅನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡಿವಿಲಿಯರ್ಸ್ ಇಲ್ಲದೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಗಳು ಒಂದುಕ್ಷಣ ಇವರನ್ನು ನೆನಪಿಸಿಕೊಂಡರು. ಅದು ಫಾಫ್ ಡುಪ್ಲೆಸಿಸ್ ಮೂಲಕ.
ಆರ್ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್ನ 13ನೇ ಓವರ್ ಬೌಲಿಂಗ್ ಮಾಡಲು ಓಡೆನ್ ಸ್ಮಿತ್ ಬಂದರು. ಈ ಓವರ್ನಲ್ಲಿ ಮನಬಂದಂತೆ ಬ್ಯಾಟ್ ಬೀಸಿದ ಫಾಫ್ ಬರೋಬ್ಬರಿ 16 ರನ್ಗಳು ಹರಿದುಬಂದವು. ಅದರಲ್ಲೂ ಕೊನೇ ಎಸೆತದಲ್ಲಿ ವಿಕೆಟ್ ಹಿಂಬದಿಗೆ ಥೇಟ್ ಎಬಿಡಿ ಸಿಕ್ಸ್ ಸಿಡಿಸುವ ರೀತಿಯಲ್ಲೇ ಫಾಫ್ ಕೂಡ ಸಿಕ್ಸ್ ಬಾರಿಸಿ ಅಭಿಮಾನಿಗಳ ಮನಗೆದ್ದರು. ಸ್ಮಿತ್ ಅವರ ಯಾರ್ಕರ್ ಎಸೆತವನ್ನು ಚೆನ್ನಾಗಿ ಅರಿತ ಡುಪ್ಲೆಸಿಸ್ ಕ್ರೀಸ್ನಲ್ಲಿ ಹಿಂಬದಿಗೆ ತಿರುಗಿ ಫೈನ್ಲೆಗ್ ಮೂಲಕ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Du Plessis doing a De Villiers #IPL2022 pic.twitter.com/Gzlgps2zSW
— Sports Hustle (@SportsHustle3) March 27, 2022
ಇದರ ನಡುವೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಡುವಣ ಫೋಟೋ ಕೂಡ ವೈರಲ್ ಆಗಿದೆ. ಅಂದು ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್, ಇಂದು ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಎಂದು ಹೇಳುವ ಮೂಲಕ ಫ್ಯಾನ್ಸ್ ಭಾವುಕರಾಗಿದ್ದಾರೆ. ಹಲವು ವರ್ಷಗಳ ಕಾಲ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೋಡಿಯನ್ನು ಕಣ್ತುಂಬಿಸಿಕೊಂಡಿದ್ದ ಫ್ಯಾನ್ಸ್, ಇದೀಗ ಕೊಹ್ಲಿ ಜೊತೆ ಫಾಫ್ ಡುಪ್ಲೆಸಿಸ್ ಅವರನ್ನು ನೋಡುವ ಮೂಲಕ ಖುಷಿ ಪಡುತ್ತಿದ್ದಾರೆ.
Same vibes❤️#ViratKohli? #RCB #FafDuPlessis #ABDevilliers #ViratKohli pic.twitter.com/zwFhEiGyGg
— Amanbhati18_ (@Amanbhati1815) March 27, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡವು ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿದೆ. ಆರ್ಸಿಬಿ ಪರ ಫಾಫ್ 88, ಅನೂಜ್ ರಾವತ್ 21, ಕೊಹ್ಲಿ 41 ಮತ್ತು ದಿನೇಶ್ ಕಾರ್ತಿಕ್ 31 ರನ್ ಗಳಿಸಿ ಮಿಂಚಿದರು. ಇದಕ್ಕೆ ಪ್ರತಿಯಾಗಿ ಪಂಜಾಬ್ ಕಿಂಗ್ಸ್ ತಂಡ ಶಿಖರ್ ಧವನ್ (43ರನ್, 29 ಎಸೆತ, 5 ಬೌಂಡರಿ, 1 ಸಿಕ್ಸರ್), ಭಾನುಕ ರಾಜಪಕ್ಷೆ (43ರನ್, 22 ಎಸೆತ, 2 ಬೌಂಡರಿ, 4 ಸಿಕ್ಸರ್), ಒಡೆನ್ ಸ್ಮಿತ್ (25*ರನ್, 8 ಎಸೆತ, 1 ಬೌಂಡರಿ, 3 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 208 ರನ್ ಬಾರಿಸಿ ಒಂದು ಓವರ್ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.
Faf du Plessis: ಈ ಸೋಲಿಗೆ ಯಾರು ಹೊಣೆ?: ಪಂದ್ಯ ಮುಗಿದ ಬಳಿಕ ಆರ್ಸಿಬಿ ನಾಯಕ ಡುಪ್ಲೆಸಿಸ್ ಹೇಳಿದ್ದೇನು ನೋಡಿ
PV Sindhu: ದಾಖಲೆಯೊಂದಿಗೆ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು: ಪ್ರಧಾನಿ ಮೋದಿ ಅಭಿನಂದನೆ