Faf du Plessis: ಈ ಸೋಲಿಗೆ ಯಾರು ಹೊಣೆ?: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಡುಪ್ಲೆಸಿಸ್ ಹೇಳಿದ್ದೇನು ನೋಡಿ

PBKS vs RCB, IPL 2022: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲೇ ಬೇಕೆಂದು ಫಾಫ್, ಕೊಹ್ಲಿ, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನಡೆಸಿದ್ದು ಎದ್ದು ಕಾಣುತ್ತಿತ್ತು. ಆದರೆ, ಬೌಲರ್​ಗಳು ಸಾಥ್ ನೀಡದೆ ಸೋಲು ಕಂಡಿತು. ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ಕೇಳಿ.

Faf du Plessis: ಈ ಸೋಲಿಗೆ ಯಾರು ಹೊಣೆ?: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಡುಪ್ಲೆಸಿಸ್ ಹೇಳಿದ್ದೇನು ನೋಡಿ
Faf du Plessis post-match presentation
Follow us
TV9 Web
| Updated By: Vinay Bhat

Updated on: Mar 28, 2022 | 10:32 AM

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಕಂಡಿದ್ದು ತೀರಾ ಕಡಿಮೆ. ಆದರೆ, ಐಪಿಎಲ್ 2022ರ (IPL 2022) ಮೊದಲ ಪಂದ್ಯದಲ್ಲಿ ಆರ್​ಸಿಬಿ ಸೋತಿದ್ದು ಹಿಂದಿನ ಮಾದರಿಯ ಹಾಗೆ ಇರಲಿಲ್ಲ. ಈ ಬಾರಿ ಗೆಲ್ಲಲೇ ಬೇಕೆಂದು ನಾಯಕ ಫಾಫ್ ಡುಪ್ಲೆಸಿಸ್ (Faf Duplessis), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನಡೆಸಿದ್ದು ಎದ್ದು ಕಾಣುತ್ತಿತ್ತು. ಮೊದಲ ಓವರ್​ನಿಂದ ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಡುಪ್ಲೆಸಿಸ್ ಅವಕಾಶ ಸಿಕ್ಕಾಗ ಫೋರ್, ಸಿಕ್ಸರ್ ಬಾರಿಸುತ್ತಿದ್ದರು. ಸೆಟಲ್ ಆದ ಮೇಲಂತು ಕೊಹ್ಲಿ ಜೊತೆಗೂಡಿ ತಂಡದ ರನ್ ಗತಿಯನ್ನ ಏರಿಸಿದ ಇವರು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ದಿನೇಶ್ ಕಾರ್ತಿಕ್ ತಮಗೆ ನೀಡಿದ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿದರು. ಆದರೆ, ಬ್ಯಾಟರ್​ಗಳ ಈ ಹೋರಾಟಕ್ಕೆ ಬೌಲರ್​ಗಳು ಸಾಥ್ ನೀಡದೆ ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಸೋಲು ಕಂಡಿತು. ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ಕೇಳಿ.

“ಈ ಪಿಚ್​ನಲ್ಲಿ ಬ್ಯಾಟಿಂಗ್ ತುಂಬಾನೆ ಚೆನ್ನಾಗಿತ್ತು. ಕೊನೇ ಹಂತದಲ್ಲಿ ನಾವು ಕೆಲ ಕ್ಯಾಚ್​ಗಳನ್ನು ಕೈಚೆಲ್ಲಿದೆವು. 8 ಬಾಲ್​ಗಳಲ್ಲಿ 25 ರನ್ ಬಾರಿಸಿದ ಓಡೆನ್ ಸ್ಮಿತ್ 10 ರನ್ ಗಳಿಸಿದ್ದಾಗ ಕ್ಯಾಚ್ ಬಿಟ್ಟೆವು. ಅದಾದ ಬಳಿಕ ನಮಗೆ ಅವಕಾಶ ಸಿಗಲಿಲ್ಲ. ಡ್ಯೂ ಇದ್ದ ಕಾರಣ ಬೌಲರ್​​ಗಳಿಗೆ ಬೌಲಿಂಗ್ ಮಾಡಲು ರಾತ್ರಿ ಸಮಯದಲ್ಲಿ ತುಂಬಾನೆ ಕಷ್ಟವಾಯಿತು. ಆದರೂ ಒದ್ದೆಯಾದ ಚೆಂಡಿನಲ್ಲಿ ಅವರು ಉತ್ತಮ ಆಟವಾಡಿದರು. ನಾವು ನೀಡಿದ್ದ ಟಾರ್ಗೆಟ್ ಅನ್ನು ಪಂಜಾಬ್ ತಂಡದವರು ಅದ್ಭುತವಾಗಿ ಚೇಸ್ ಮಾಡಿದರು. ಪ್ರಮುಖವಾಗಿ ಪವರ್ ಪ್ಲೇ ಯಲ್ಲಿ ಅವರ ಆಟ ಅತ್ಯುತ್ತಮವಾಗಿತ್ತು. ಎರಡನೇ ಇನ್ನಿಂಗ್ಸ್​ ವೇಳೆ ಚೆಂಡು ಹೆಚ್ಚು ಸ್ಕಿಡ್ ಆಗುತ್ತಿತ್ತು,” ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ಡುಪ್ಲೆಸಿಸ್, “ನಾವು ಮಧ್ಯಮ ಓವರ್​ನಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದೆವು. ಆದರೆ, ಓಡೆನ್ ಸ್ಮಿತ್ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿದರು. ಇವರ ಜೊತೆಗೆ ಮತ್ತೊಬ್ಬ ಆಟಗಾರ ಶಾರುಖ್ ಖಾನ್ ಕೂಡ ಉತ್ತಮ ಬ್ಯಾಟಿಂಗ್ ಮಾಡಿದರು. ಸಿಕ್ಕ ಅವಕಾಶವನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ಪಂದ್ಯವು ಸಂಪೂರ್ಣವಾಗಿ ಬದಲಾಗುತ್ತಿತ್ತು. ಬ್ಯಾಟಿಂಗ್ ಮಾಡುವಾಗ ರನ್​ಗಾಗಿ ಸಾಕಷ್ಟು ಓಡಿ ಸುಸ್ತಾಗಿದ್ದೇನೆ. ಪುಣ್ಯಕ್ಕೆ ಇಂಜುರಿಯಾಗಿಲ್ಲ ಎಂಬುದು ಸಂತೋಷ. ಆರಂಭದಲ್ಲಿ ಬ್ಯಾಟಿಂಗ್ ಮಾಡಲು ತುಂಬಾನೆ ಕಷ್ಟವಾಯಿತು. ಮೊದಲ ನಾಲ್ಕು ಓವರ್ ಚೆಂಡು ತುಂಬಾನೆ ಟರ್ನ್ ಆಗುತ್ತಿತ್ತು. ನಾನಾಗ 10 ಎಸೆತಗಳಲ್ಲಿ 1 ರನ್ ಗಳಿಸಿದ್ದೆ. ನಂತರ ಉತ್ತಮ ಬ್ಯಾಟಿಂಗ್ ಮಾಡಿದೆವು,” ಎಂಬುದು ಡುಪ್ಲೆಸಿಸ್ ಮಾತಾಗಿತ್ತು.

ಇನ್ನು ಮೊದಲ ಬಾರಿಗೆ ಪರಿಪೂರ್ಣ ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿ ಗೆಲುವು ಸಾಧಿಸಿದ ಬಗ್ಗೆ ಮಾತನಾಡಿದ ಮಯಾಂಕ್ ಅಗರ್ವಾಲ್, “ಪಾಯಿಂಟ್​ಗಳು ನಮ್ಮ ಪಾಲಿಗೆ ತುಂಬಾ ಮುಖ್ಯವಾಗಿದೆ. ಇದು ಅತ್ಯುತ್ತಮ ವಿಕೆಟ್‌ ಆಗಿದ್ದರಿಂದ ಎರಡೂ ತಂಡಗಳು 200ಕ್ಕೂ ಅಧಿಕ ರನ್‌ ಗಳಿಸಲು ಸಾಧ್ಯವಾಯಿತು. ಒಂದು ಅಥವಾ ಎರಡು ಎಸೆತಗಳಲ್ಲಿ ವ್ಯತ್ಯಾಸವಿರಬಹುದು. ಆದರೆ ಪಂದ್ಯದ ಹಾದಿ ಉತ್ತಮವಾಗಿತ್ತು. ಈ ಪಂದ್ಯಕ್ಕೆ ನಾವು ಸರಿಯಾದ ಸಂಯೋಜನೆ ಮಾಡಿದ್ದೆವು. ಮಾಡಿದ ಪ್ಲಾನ್​ಗಿಂತ 15-20 ರನ್‌ ಹೆಚ್ಚಾಗಿ ಬಿಟ್ಟುಕೊಟ್ಟೆವು. ಕೊಹ್ಲಿ ಹಾಗೂ ಡುಪ್ಲೆಸಿಸ್‌ ಅತ್ಯುತ್ತಮವಾಗಿ ಬ್ಯಾಟ್‌ ಮಾಡುವ ಮೂಲಕ ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿದ್ದರು. ಆದರೆ ನಮ್ಮ ಬ್ಯಾಟರ್​ಗಳು ಈ ದೊಡ್ಡ ಟಾರ್ಗೆಟ್ ಬೆನ್ನಟ್ಟಿ ಗೆಲುವು ತಂದುಕೊಟ್ಟರು,” ಎಂದು ಹೇಳಿದ್ದಾರೆ.

PV Sindhu: ದಾಖಲೆಯೊಂದಿಗೆ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು: ಪ್ರಧಾನಿ ಮೋದಿ ಅಭಿನಂದನೆ

IPL 2022, GT vs LSG: ಐಪಿಎಲ್​ನಲ್ಲಿಂದು ಕುತೂಹಲಕಾರಿ ಕದನ: ಲಖನೌ-ಗುಜರಾತ್ ಪದಾರ್ಪಣೆಗೆ ಸಜ್ಜು

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್