ಇಂಗ್ಲೆಂಡ್-ಇಂಡಿಯ ನಡುವಿನ ಕೊನೆ ಟೆಸ್ಟ್ ರದ್ದಾಗಿದ್ದು ಐಪಿಎಲ್​ಗೋಸ್ಕರವೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ: ಮೈಕೆಲ್ ವಾನ್

TV9 Digital Desk

| Edited By: Arun Kumar Belly

Updated on: Sep 12, 2021 | 12:41 AM

ಇಂಡಿಯನ್ ಪ್ರಿಮೀಯರ್ ಲೀಗ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರು, ಇಂಗ್ಲೆಂಡ್​ನ ಮ್ಯಾಂಚೆಸ್ಟರ್ನಲ್ಲಿದ್ದ ತಮ್ಮ ಆಟಗಾರರು-ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಒಂದು ಚಾರ್ಟರ್ಡ್ ವಿಮಾನದ ಮೂಲಕ ಅಬು ಧಾಬಿಗೆ ಕರೆಸಿಕೊಂಡ ಕೆಲವೇ ಕ್ಷಣಗಳ ನಂತರ ಟೀಮ್ ಇಂಡಿಯಾವನ್ನು ಟೀಕಿಸಲು ಒಂದು ಚಿಕ್ಕ ಅಂಶವನ್ನೂ ಬಿಡದ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಮೈಕೆಲ್ ವಾನ್ ಟ್ವೀಟ್ ಮೂಲಕ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಟ್ವೀಟ್ ನಲ್ಲಿ ಅವರು, ‘ಐಪಿಎಲ್ ಹೊರತಾಗಿ ಬೇರೆ ಯಾವುದೇ ಕಾರಣಕ್ಕೆ ಇಂಡಿಯ-ಇಂಗ್ಲೆಂಡ್ […]

ಇಂಗ್ಲೆಂಡ್-ಇಂಡಿಯ ನಡುವಿನ ಕೊನೆ ಟೆಸ್ಟ್ ರದ್ದಾಗಿದ್ದು ಐಪಿಎಲ್​ಗೋಸ್ಕರವೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ: ಮೈಕೆಲ್ ವಾನ್
ಮೈಕೆಲ್ ವಾನ್

ಇಂಡಿಯನ್ ಪ್ರಿಮೀಯರ್ ಲೀಗ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರು, ಇಂಗ್ಲೆಂಡ್​ನ ಮ್ಯಾಂಚೆಸ್ಟರ್ನಲ್ಲಿದ್ದ ತಮ್ಮ ಆಟಗಾರರು-ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಒಂದು ಚಾರ್ಟರ್ಡ್ ವಿಮಾನದ ಮೂಲಕ ಅಬು ಧಾಬಿಗೆ ಕರೆಸಿಕೊಂಡ ಕೆಲವೇ ಕ್ಷಣಗಳ ನಂತರ ಟೀಮ್ ಇಂಡಿಯಾವನ್ನು ಟೀಕಿಸಲು ಒಂದು ಚಿಕ್ಕ ಅಂಶವನ್ನೂ ಬಿಡದ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಮೈಕೆಲ್ ವಾನ್ ಟ್ವೀಟ್ ಮೂಲಕ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಟ್ವೀಟ್ ನಲ್ಲಿ ಅವರು, ‘ಐಪಿಎಲ್ ಹೊರತಾಗಿ ಬೇರೆ ಯಾವುದೇ ಕಾರಣಕ್ಕೆ ಇಂಡಿಯ-ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಐದನೇ ಟೆಸ್ಟ್ ರದ್ದಾಯಿತು ಎಂದು ನಾನು ನಂಬಲು ತಯಾರಿಲ್ಲ,’ ಅಂತ ಹೇಳಿದ್ದಾರೆ.

‘ಐಪಿಎಲ್ ತಂಡಗಳು ಬಾಡಿಗೆ ವಿಮಾನಗಳನ್ನು ಗೊತ್ತು ಮಾಡುತ್ತಿವೆ, ಯುಎಈಯಲ್ಲಿ 6 ದಿನಗಳ ಕಾಲ ಕ್ವಾರಂಟೀನ್ ಆಗಬೇಕಿದೆ. 7 ದಿನಗಳಲ್ಲಿ ಟೂರ್ನಮೆಂಟ್ ಶುರುವಾಗಲಿದೆ. ಐಪಿಎಲ್ ಹೊರತಾದ ಕಾರಣಕ್ಕೆ ಟೆಸ್ಟ್ ರದ್ದಾಯಿತು ಅಂತ ನಂಗೆ ಹೇಳಬೇಡಿ,’ ಎಂದು ವಾನ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದ ಭಾರತೀಯ ತಂಡದ ಶಿಬಿರದಲ್ಲಿ ಸಪೋರ್ಟ್ ಸ್ಟಾಫ್ನ ಕೆಲವರು ಕೊವಿಡ್-19 ಸೋಂಕಿಗೆ ಒಳಗಾದ ನಂತರ ಆಟಗಾರರಲ್ಲಿ ಸೋಂಕಿನ ಆತಂಕ ಆರಂಭವಾದ ಕಾರಣ ಮ್ಯಾಂಚೆಸ್ಟರ್ ಟೆಸ್ಟ್ ರದ್ದಾಯಿತು. ಪಂದ್ಯ ರದ್ದಾಗಿದ್ದು ಖಾತ್ರಿಯಾದ ಕೂಡಲೇ ಐಪಿಎಲ್ ಫ್ರಾಂಚೈಸಿಗಳು ಬಾಡಿಗೆ ವಿಮಾನಗಳ ಮೂಲಕ ತಮ್ಮ ತಮ್ಮ ಆಟಗಾರರನ್ನು ಅಬು ಧಾಬಿಗೆ ಕರೆಸಿಕೊಳ್ಳುತ್ತಿವೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಸಿ ಎಸ್ ಕೆ, ಆರ್ ಸಿ ಬಿ ಮತ್ತು ಡಿ ಸಿ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ರವಿವಾರದೊಳಗೆ ಯುಎಈಗೆ ಕರೆಸಿಕೊಳ್ಳಲು ಚಾರ್ಟರ್ಡ್ ವಿಮಾನಗಳ ಏರ್ಪಾಟು ಮಾಡುತ್ತಿವೆ.

ಇಂಗ್ಲೆಂಡ್​ನಲ್ಲಿರುವ ಅಟಗಾರರು ಸೆಪ್ಟೆಂಬರ್ 19 ರಂದು ಶುರುವಾಗಲಿರುವ ಐಪಿಎಲ್ ನಲ್ಲಿ ಭಾಗವಹಿಸಲು ಐದನೇ ಟೆಸ್ಟ್ ಮುಗಿದ ನಂತರ ನೇರವಾಗಿ ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುವುದು ನಿಗದಿಯಾಗಿತ್ತು. ಆದರೆ ಟೆಸ್ಟ್ ಆರಂಭವಾಗುವ ಕೇವಲ ಒದು ದಿನ ಮೊದಲು ಟೀಮಿನ ಸಹಾಯಕ ಫಿಸಿಯೋ ಯೋಗೇಶ್ ಪರ್ಮಾರ್ ಮತ್ತು ಅದಕ್ಕಿಂತ ಮೊದಲು ಇನ್ನೂ ಕೆಲ ಸದಸ್ಯರು ಸೋಂಕಿಗೊಳಗಾಗಿದ್ದರಿಂದ ಪೂರ್ತಿ ಸಮೀಕರಣವೇ ಬದಲಾಯಿತು.

ಕೋವಿಡ್-19 ಸೋಂಕಿನ ಆತಂಕ ಕೊನೆಯ ಟೆಸ್ಟ್ ರದ್ದು ಗೊಳಿಸಲು ಕಾರಣವಾಯಿತಲ್ಲದೆ ಟೀಮಿನ ಸದಸ್ಯರನ್ನು ವಾಪಸ್ಸು ಬಯೋ ಬಬಲ್ಗೆ ವಾಪಸ್ಸಾಗುವ ಅನಿವಾರ್ಯತೆ ಸೃಷ್ಟಿಸಿತು. ಈಗ ಪರಿಸ್ಥಿತಿ ಹೇಗೆ ಬದಲಾಗಿದೆಯೆಂದರೆ ಐಪಿಎಲ್ನಲ್ಲಿ ಆಡಲಿರುವ ಟೀಮ್ ಇಂಡಿಯಾದ ಸದಸ್ಯರು ಯುಎಈಯಲ್ಲಿ ಅಭ್ಯಾಸದಲ್ಲಿ ತೊಡಗುವ ಮೊದಲು ಕಡ್ಡಾಯವಾಗಿ 6 ದಿನಗಳ ಕಾಲ ಕ್ವಾರಂಟೀನ್ ಗೆ ಒಳಗಾಗಬೇಕು.

ಐದನೇ ಟೆಸ್ಟ್ ರದ್ದಾಗಿದ್ದು ಪ್ರೇಕ್ಷಕರಿಗೆ ಅವಮಾನ ಮಾಡಿದಂತಾಗಿದೆ ಎಂದು ಇದಕ್ಕೆ ಮೊದಲು ವಾನ್ ಹೇಳಿದ್ದರು.

‘ಇಂದಿನಿಂದ ಶುರುವಾಗಬೇಕಿದ್ದ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ನೂರಾರು ಮೈಲಿ ದೂರದಿಂದ ಆಗಮಿಸಿದ್ದ ಕ್ರಿಕೆಟ್ ಪ್ರೇಮಿಗೆ ಬಹು ದೊಡ್ಡ ಅವಮಾನವಾಗಿದೆ. ಇದನ್ನು ನಿನ್ನೆಯೇ ನಿರ್ಧರಿಸಬೇಕಿತ್ತು, ಹಾಗೆ ಮಾಡಿದ್ದರೂ ನಾನು ಅದನ್ನು ಅಂಗೀಕರಿಸುತ್ತಿರಲಿಲ್ಲ,’ ಎಂದು ವಾನ್ ಹೇಳಿದ್ದರು.

ಮುಂದಿನ ವರ್ಷ ಭಾರತ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯನ್ನು ಆಡಲು ಇಂಗ್ಲೆಂಡ್ ಪ್ರವಾಸ ಬೆಳಸಲಿದ್ದು ಆಗ ಈ ರದ್ದಾದ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸುವಂತೆ ಬಿಸಿಸಿಐ ಅಲ್ಲಿನ ಕ್ರಿಕೆಟ್ ಮಂಡಳಿಗೆ ತಿಳಿಸಿದೆ.

ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿರುವುದು ವಾಸ್ತವ ಸಂಗತಿಯಾದರೂ, ಫಲಿತಾಂಶ ಏನು ಅಂತ ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ:  IND vs ENG: ಭಾರತ- ಇಂಗ್ಲೆಂಡ್ ಅಂತಿಮ ಟೆಸ್ಟ್​ ರದ್ದು; ಇಸಿಬಿ ಖಜಾನೆಗೆ ಬಿತ್ತು ಭಾರಿ ಮೊತ್ತದ ಬರೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada