ಭಾರತೀಯ ಕ್ರಿಕೆಟ್ ತಂಡದ (Indian cricket team) ಮಾಜಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ (Vinod Kambli) ತಮ್ಮ ಚಟುವಟಿಕೆಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ವರ್ತನೆಯಿಂದಲೇ ಸುದ್ದಿಯಾಗಿದ್ದ ಕಾಂಬ್ಳಿ ಮತ್ತೊಮ್ಮೆ ಸುದ್ದಿಗೆ ಬಂದಿದ್ದು, ಈ ಬಾರಿ ಕಾರಣ ಸರಿಯಿಲ್ಲ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಕಾಂಬ್ಳಿ ತಮ್ಮ ಆಕ್ರಮಣಕಾರಿ ವರ್ತನೆಯಿಂದ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈ ಪೊಲೀಸರು ಈ ಮಾಜಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ನನ್ನು ಕುಡಿದ ಅಮಲಿನಲ್ಲಿ ಆಕ್ಸಿಡೆಂಟ್ ಮಾಡಿರುವ ಆರೋಪದ ಮೇಲೆ ಬಂಧಿಸಿದ್ದಾರೆ. ಪೊಲೀಸರು ಕಾಂಬ್ಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಬಳಿಕ ಅವರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮಾಹಿತಿಯ ಪ್ರಕಾರ, ಫೆಬ್ರವರಿ 27 ರ ಭಾನುವಾರ ಮಧ್ಯಾಹ್ನ ಕಾಂಬ್ಳಿಯನ್ನು ಬಾಂದ್ರಾದ ಅವರ ಮನೆಯಿಂದ ಬಂಧಿಸಲಾಗಿದೆ. ಕಾಂಬ್ಳಿ ಅವರು ಮದ್ಯದ ಅಮಲಿನಲ್ಲಿ ಬಾಂದ್ರಾದ ತಮ್ಮ ರೆಸಿಡೆನ್ಶಿಯಲ್ ಸೊಸೈಟಿಯ ಗೇಟ್‌ನಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ಬಳಿಕ ಅಲ್ಲಿದ್ದ ಸೊಸೈಟಿಯ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದು, ಸ್ಥಳೀಯರು ಪೊಲೀಸರಿಗೆ ದೂರು ನೀಡಿ ನಂತರ ಬಂಧಿಸಲಾಗಿದೆ.
ವೈದ್ಯಕೀಯ ಪರೀಕ್ಷೆ ನಂತರ ಜಾಮೀನು
ಬಂಧನದ ನಂತರ ಕಾಂಬ್ಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಮುಂಬೈ ಪೊಲೀಸರು, ವಿನೋದ್ ಕಾಂಬ್ಳಿ ಅವರನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅವರ ವೈದ್ಯಕೀಯ ಪರೀಕ್ಷೆಯನ್ನು ಭಾಭಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ ಮತ್ತು ಅವರ ರಕ್ತದ ಮಾದರಿಯನ್ನು ಸಿಎಗೆ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
Former Indian cricketer Vinod Kambli was arrested for hitting a car under the influence of alcohol. Further investigation is underway: Bandra Police
(Pic Source: Vinod Kambli's Twitter handle) pic.twitter.com/s1SoxnTH7X
— ANI (@ANI) February 27, 2022
ಸೈಬರ್ ವಂಚನೆ
ಕೆಲ ತಿಂಗಳ ಹಿಂದೆಯಷ್ಟೇ ಕಾಂಬ್ಳಿ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದರು. ಡಿಸೆಂಬರ್ 2021 ರಲ್ಲಿ, ಸೈಬರ್ ವಂಚನೆಗೆ ಮಾಜಿ ಎಡಗೈ ಬ್ಯಾಟ್ಸ್‌ಮನ್ ಕಾಂಬ್ಳಿ ಬಲಿಯಾಗಿದ್ದರು. ತಮ್ಮ ಖಾತೆಯಿಂದ ಒಂದು ಲಕ್ಷ ರೂಪಾಯಿ ಹಣ ಡ್ರಾ ಆಗಿದೆ ಎಂದು ಹೇಳಿ ಕಾಂಬ್ಳಿ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದರು.
ಕಾಂಬ್ಳಿ ಅವರ ವೃತ್ತಿಜೀವನ
ವಿನೋದ್ ಕಾಂಬ್ಳಿ 1990 ರ ದಶಕದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು ಮತ್ತು ದೀರ್ಘಕಾಲದವರೆಗೆ ತಂಡದ ಭಾಗವಾಗಿದ್ದರು. ಅವರು 17 ಟೆಸ್ಟ್‌ಗಳಲ್ಲಿ 54 ರ ಸರಾಸರಿಯಲ್ಲಿ 1084 ರನ್ ಗಳಿಸಿದರು, ಇದರಲ್ಲಿ 4 ಶತಕಗಳು ಸೇರಿವೆ. ಅದೇ ಸಮಯದಲ್ಲಿ, 104 ODIಗಳಲ್ಲಿ, ಅವರ ಬ್ಯಾಟ್‌ನಿಂದ 2477 ರನ್ ಹರಿದುಬಂದಿವೆ. ಇದರಲ್ಲಿ ಅವರು 2 ಶತಕ ಮತ್ತು 14 ಅರ್ಧ ಶತಕಗಳನ್ನು ಗಳಿಸಿದರು.
ಇದನ್ನೂ ಓದಿ:IND vs SL: ರೋಹಿತ್ಗೆ ದಾಖಲೆಯ ಪಂದ್ಯ, ತಂಡದಲ್ಲಿ ಹಲವು ಬದಲಾವಣೆ; ಉಭಯ ತಂಡಗಳ ಪ್ಲೇಯಿಂಗ್ XI
Published On - 10:12 pm, Sun, 27 February 22