ಈ ಹಿಂದೆ ಪಂಜಾಬ್ ಫ್ರಾಂಚೈಸಿ ಶಿಖರ್ ಧವನ್ಗೆ ನಾಯಕತ್ವ ನೀಡುವ ಬಗ್ಗೆ ಆಸಕ್ತಿ ತೋರಿಸಿತ್ತು. ಆದರೀಗ ಮಯಾಂಕ್ ಅಗರ್ವಾಲ್ ಅವರಿಗೆ ನಾಯಕತ್ವಕ್ಕೆ ನೀಡಲು ಪಂಜಾಬ್ ಕಿಂಗ್ಸ್ ಮುಂದಾಗಿದೆ ಎಂದು ವರದಿಯಾಗಿದೆ. ಅದರಂತೆ ಪಂಜಾಬ್ ಫ್ರಾಂಚೈಸಿ ಮಯಾಂಕ್ ಅಗರ್ವಾಲ್ ಅವರನ್ನು ನೂತನ ನಾಯಕನಾಗಿ ಫಿಕ್ಸ್ ಮಾಡಿದ್ದು, ಮಾರ್ಚ್ 5 ರಂದು ಅಧಿಕೃತವಾಗಿ ಘೋಷಿಸಲಿದೆ ಎಂದು ಪಂಜಾಬ್ ಕಿಂಗ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.