ರೋಹಿತ್, ಕೊಹ್ಲಿ ನಿವೃತ್ತಿ ಹಿಂದೆ ಗಂಭೀರ್ ಕೈವಾಡ? ಮೊದಲ ಬಾರಿಗೆ ಮೌನ ಮುರಿದ ಹೆಡ್ ಕೋಚ್

Virat Kohli- Rohit Sharma's Test Retirement: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಇದೀಗ ಕೋಚ್ ಗೌತಮ್ ಗಂಭೀರ್ ಅವರು ಈ ನಿರ್ಧಾರದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, ಆಟಗಾರರ ವೈಯಕ್ತಿಕ ನಿರ್ಧಾರವನ್ನು ಗೌರವಿಸಬೇಕು ಮತ್ತು ಒತ್ತಡ ಹೇರುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ. ಈ ಮೂಲಕ ಗಂಭೀರ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ಭಾರತ ತಂಡಕ್ಕೆ ಹೊಸ ಆಟಗಾರರ ಅಗತ್ಯವಿದೆ ಎಂದು ಹೇಳಿದ್ದಾರೆ.

ರೋಹಿತ್, ಕೊಹ್ಲಿ ನಿವೃತ್ತಿ ಹಿಂದೆ ಗಂಭೀರ್ ಕೈವಾಡ? ಮೊದಲ ಬಾರಿಗೆ ಮೌನ ಮುರಿದ ಹೆಡ್ ಕೋಚ್
ಟೀಂ ಇಂಡಿಯಾ

Updated on: May 23, 2025 | 6:49 PM

ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಮೇ 8 ರಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಕೇವಲ ನಾಲ್ಕು ದಿನಗಳ ನಂತರ ಅಂದರೆ ಮೇ 12 ರಂದು ತಂಡದ ಮತ್ತೊಬ್ಬ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಈ ಸ್ವರೂಪಕ್ಕೆ ವಿದಾಯ ಹೇಳಿದ್ದರು. ಈ ಇಬ್ಬರು ಲೆಜೆಂಡರಿ ಆಟಗಾರರ ಈ ನಿರ್ಧಾರವು ಇಡೀ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿತು. ಏಕೆಂದರೆ ಈ ಇಬ್ಬರು ಇಂಗ್ಲೆಂಡ್‌ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಲು ಬಯಸಿದ್ದರು ಎಂದು ಮಾಧ್ಯಮ ವರದಿ ಹೇಳಿತ್ತು. ಆದರೆ ಇವರಿಬ್ಬರ ತತ್​ಕ್ಷಣದ ನಿರ್ಧಾರ ಹಲವರಲ್ಲಿ ಅನುಮಾನ ಹುಟ್ಟಿಸಿತ್ತು. ಅಲ್ಲದೆ ರೋಹಿತ್, ಕೊಹ್ಲಿ ನಿವೃತ್ತಿ ಘೋಷಿಸಲು ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರೇ ಕಾರಣ, ಇವರಿಬ್ಬರು ರೋಹಿತ್ ಮತ್ತು ಕೊಹ್ಲಿಗೆ ನಿವೃತ್ತಿ ಘೋಷಿಸುವಂತೆ ಒತ್ತಡ ಹೇರಿದ್ದರು ಎಂದು ವರದಿಯಾಗಿತ್ತು. ಇದೀಗ ಈ ಆರೋಪಗಳ ಬಗ್ಗೆ ಗೌತಮ್ ಗಂಭೀರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಗಂಭೀರ್ ಹೇಳಿದ್ದೇನು?

ತಮ್ಮ ಮೇಲೆ ಕೇಳಿಬಂದಿರುವ ಆರೋಪಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಗಂಭೀರ್, ‘ನಿವೃತ್ತಿ ಆಟಗಾರನ ವೈಯಕ್ತಿಕ ನಿರ್ಧಾರವಾಗಿದ್ದು, ಈ ನಿರ್ಧಾರದ ಮೇಲೆ ಪ್ರಭಾವ ಬೀರಲು ಬೇರೆಯವರಿಗೆ ಯಾವುದೇ ಹಕ್ಕಿಲ್ಲ. ನೀವು ಯಾವಾಗ ಆಟವಾಡಲು ಪ್ರಾರಂಭಿಸುತ್ತೀರಿ ಮತ್ತು ಯಾವಾಗ ಮುಗಿಸಲು ಬಯಸುತ್ತೀರಿ ಎಂಬುದು ತುಂಬಾ ವೈಯಕ್ತಿಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಈ ಹಕ್ಕನ್ನು ಕಿತ್ತುಕ್ಕೊಳ್ಳುವ ಹಕ್ಕು ಇನ್ನೊಬ್ಬ ವ್ಯಕ್ತಿಗೆ ಇಲ್ಲ. ಅದು ಕೋಚ್ ಆಗಿರಲಿ, ಆಯ್ಕೆದಾರರಾಗಿರಲಿ, ಈ ದೇಶದಲ್ಲಿ ಯಾರೇ ಆಗಿರಲಿ, ಯಾವಾಗ ನಿವೃತ್ತಿ ಹೊಂದಬೇಕು ಮತ್ತು ಯಾವಾಗ ನಿವೃತ್ತಿ ಹೊಂದಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಆದ್ದರಿಂದ ನಿವೃತ್ತಿ ನಿರ್ಧಾರ ಸಂಪೂರ್ಣವಾಗಿ ಆಟಗಾರರಿಗೆ ಬಿಟ್ಟಿದ್ದು ಎಂದು ಗೌತಮ್ ಗಂಭೀರ್ ಹೇಳಿಕೊಂಡಿದ್ದಾರೆ.

ಇದರರ್ಥ ಗಂಭೀರ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಅವರ ಪ್ರಕಾರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ತಾವಾಗಿಯೇ ತೆಗೆದುಕೊಂಡಿದ್ದು, ಬಿಸಿಸಿಐ ಅಥವಾ ಆಡಳಿತ ಮಂಡಳಿಯಿಂದ ಯಾರೂ ಅವರ ಮೇಲೆ ಯಾವುದೇ ಒತ್ತಡ ಹೇರಲಿಲ್ಲ ಎಂಬುದನ್ನು ಖಚಿತಪಡಿಸಲು ಪ್ರಯತ್ನಿಸಿದ್ದಾರೆ.

Rohit Sharma: ಐಪಿಎಲ್ ​ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್ ಶರ್ಮಾ

ಗಂಭೀರ್ ಮುಂದಿನ ಯೋಜನೆ ಏನು?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಅತ್ಯಂತ ಅನುಭವಿ ಮತ್ತು ಹಿರಿಯ ಆಟಗಾರರಲ್ಲಿ ಒಬ್ಬರು. ಇಂಗ್ಲೆಂಡ್‌ನಂತಹ ಕಠಿಣ ಪ್ರವಾಸಗಳಲ್ಲಿ ಆಡಿದ ಉತ್ತಮ ಅನುಭವ ಅವರಿಗೆ ಇತ್ತು. ಅವರ ನಿರ್ಗಮನ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ. ಈಗ ಗಂಭೀರ್ ಇಬ್ಬರೂ ಆಟಗಾರರಿಗೆ ಬದಲಿ ಆಟಗಾರರನ್ನು ಹುಡುಕಬೇಕಾಗಿದೆ. ಅಲ್ಲದೆ, ನಾಯಕನನ್ನು ನೇಮಿಸಬೇಕಾಗಿದ್ದು, ಇದು ದೊಡ್ಡ ಸವಾಲಿನ ಕೆಲಸವಾಗಿದೆ.

ಈ ಬಗ್ಗೆಯೂ ಮಾತನಾಡಿರುವ ಗಂಭೀರ್, ‘ಕೆಲವೊಮ್ಮೆ ಇದು ಕೆಲವು ಜನರು ತಮ್ಮ ಕೈಗಳನ್ನು ಮುಂದಕ್ಕೆ ಚಾಚಿ ನಾನು ಸಿದ್ಧ ಎಂದು ಹೇಳಲು ಒಂದು ಅವಕಾಶ ಎಂದು ನಾನು ಭಾವಿಸುತ್ತೇನೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಜಸ್ಪ್ರೀತ್ ಬುಮ್ರಾ ಇಲ್ಲದಿದ್ದಾಗಲೂ ಈ ಪ್ರಶ್ನೆಯನ್ನು ನನಗೆ ಕೇಳಲಾಯಿತು. ನಾನು ನಿಖರವಾಗಿ ಅದೇ ಮಾತನ್ನು ಹೇಳಿದೆ, ಯಾರೊಬ್ಬರ ಅನುಪಸ್ಥಿತಿಯು ಇನ್ನೊಬ್ಬ ವ್ಯಕ್ತಿಗೆ ದೇಶಕ್ಕಾಗಿ ವಿಶೇಷವಾದದ್ದನ್ನು ಮಾಡಲು ಅವಕಾಶವನ್ನು ನೀಡುತ್ತದೆ, ಆಶಾದಾಯಕವಾಗಿ ಅವರು ಕೂಡ ಆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Fri, 23 May 25