‘ಇವರಿನ್ನು ಪಾಠ ಕಲಿತಿಲ್ಲ’; ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗವನ್ನು ಟೀಕಿಸಿದ ಗಂಭೀರ್

Asia Cup 2023: ಭಾರತ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡದ ಎಲ್ಲಾ 10 ವಿಕೆಟ್​ಗಳು ಸ್ಪಿನ್ನರ್​ಗಳ ಪಾಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾದ ದಾಂಡಿಗರು, ಸ್ಪಿನ್ನರ್​ ಅದರಲ್ಲೂ ಎಡಗೈ ಸ್ಪಿನ್ನರ್ ವಿರುದ್ಧ ತೊಂದರೆಗೀಡಾಗುತ್ತಿರುವುದನ್ನು ಮತ್ತೊಮ್ಮೆ ಸಾಭೀತುಪಡಿಸಿತು.

‘ಇವರಿನ್ನು ಪಾಠ ಕಲಿತಿಲ್ಲ’; ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗವನ್ನು ಟೀಕಿಸಿದ ಗಂಭೀರ್
ರೋಹಿತ್, ಕೊಹ್ಲಿ, ಗಂಭೀರ್
Follow us
ಪೃಥ್ವಿಶಂಕರ
|

Updated on:Sep 13, 2023 | 11:09 AM

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮಂಗಳವಾರ ಸೆ.12ರಂದು ನಡೆದ ಏಷ್ಯಾಕಪ್​ನ (Asia Cup 2023) ಸೂಪರ್-4 ಸುತ್ತಿನಲ್ಲಿ ಅನುಭವಿ ಬ್ಯಾಟ್ಸ್​ಮನ್​ಗಳಿಂದ ತುಂಬಿದ್ದ ಭಾರತ ತಂಡ,  ಶ್ರೀಲಂಕಾ India vs Sri lanka) ಸ್ಪಿನ್ನರ್​ಗಳ ಮುಂದೆ ಸಂಪೂರ್ಣವಾಗಿ ಶರಣಾಯಿತು. ಅದರಲ್ಲೂ 20 ವರ್ಷದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ (Dunith Wellalage) ದಾಳಿಗೆ ನಲುಗಿದ ಟೀಂ ಇಂಡಿಯಾದ ಅಗ್ರ ಮತ್ತು ಮಧ್ಯಮ ಕ್ರಮಾಂಕ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿತು. ಇದು ಸಾಲದೆಂಬಂತೆ ಲಂಕಾ ತಂಡದ ಪಾರ್ಟ್​ ಟೈಮ್ ಬೌಲರ್ ಚರಿತ ಅಸಲಂಕಾಗೆ (Charith Asalanka) ಟೀಂ ಇಂಡಿಯಾದ 4 ಆಟಗಾರರು ಬಲಿಯಾಗಿದ್ದು, ಸ್ಪಿನ್ ಬೌಲರ್​ಗಳನ್ನು ಎದುರಿಸುವಲ್ಲಿ ಭಾರತದ ವಿಕ್ನೇಸ್​ ಮತ್ತೊಮ್ಮೆ ಜಗಜ್ಜಾಹೀರಾಯಿತು. ಇದೀಗ ಅದೇ ವಿಚಾರವನ್ನು ಪುನರ್​ಚ್ಚರಿಸಿರುವ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir), ಭಾರತೀಯ ಅಗ್ರ ಕ್ರಮಾಂಕದ ನ್ಯೂನತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಎಲ್ಲಾ 10 ವಿಕೆಟ್​ಗಳು ಸ್ಪಿನ್ನರ್​ಗಳಿಗೆ

ಭಾರತ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡದ ಎಲ್ಲಾ 10 ವಿಕೆಟ್​ಗಳು ಸ್ಪಿನ್ನರ್​ಗಳ ಪಾಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾದ ದಾಂಡಿಗರು, ಸ್ಪಿನ್ನರ್​ ಅದರಲ್ಲೂ ಎಡಗೈ ಸ್ಪಿನ್ನರ್ ವಿರುದ್ಧ ತೊಂದರೆಗೀಡಾಗುತ್ತಿರುವುದನ್ನು ಮತ್ತೊಮ್ಮೆ ಸಾಭೀತುಪಡಿಸಿತು. ಇನ್ನು ಭಾರತದ ಇನಿಂಗ್ಸ್‌ನ 47 ನೇ ಓವರ್‌ನ ನಂತರ ಮಳೆಯಿಂದಾಗಿ ಪಂದ್ಯ ನಿಂತ ಬಳಿಕ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಗಂಭೀರ್, ಈ ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡಮ್ ಝಂಪಾ ಮತ್ತು ಆಶ್ಟನ್ ಅಗರ್ ಅವರಂತಹ ಆಟಗಾರರ ವಿರುದ್ಧ ಭಾರತೀಯ ಬ್ಯಾಟರ್‌ಗಳು ಹೇಗೆ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದರು ಎಂಬುದನ್ನು ನೆನಪಿಸಿಕೊಂಡರು.

ಕಿಂಗ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದನ್ನು ಒಪ್ಪದ ಗೌತಮ್ ಗಂಭೀರ್..!

ಹಳೆಯ ತಪ್ಪು ಮತ್ತೆ ರಿಪೀಟ್

ಆ ಪಂದ್ಯದಲ್ಲಿ ಭಾರತ 270 ರನ್‌ಗಳನ್ನು ಬೆನ್ನಟ್ಟುತ್ತಿತ್ತು. ಆದರೆ ಆಡಮ್ ಝಂಪಾ ಮತ್ತು ಆಶ್ಟನ್ ಅಗರ್ ದಾಳಿಗೆ ನಲುಗಿದ ಭಾರತ ಬ್ಯಾಟಿಂಗ್ ವಿಭಾಗ ಕೇವಲ 21 ರನ್‌ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು. ಅದರಲ್ಲಿ ಮೂವರು ಬ್ಯಾಟರ್​ಗಳು ಫ್ರಂಟ್ ಫೂಟ್​ನಲ್ಲಿ ಚೆಂಡನ್ನು ಆಡಲು ಹೋಗಿ ವಿಕಟ್ ಒಪ್ಪಿಸಿದ್ದರು. ಅಂತಿಮವಾಗಿ ನಾವು ಆ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಇನ್ನು ಈ ಪಂದ್ಯದ ವಿಚಾರಕ್ಕೆ ಬಂದರೆ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ದು ಸಾಫ್ಟ್ ಡಿಸ್​ಮಿಸಲ್ ಆಗಿತ್ತು. ಆದರೆ ರೋಹಿತ್ ಹಾಗೂ ಗಿಲ್ ಫ್ರಂಟ್ ಫೂಟ್‌ನಲ್ಲಿ ಆಡಲು ಹೋಗಿ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಅದೇ ಹಳೆಯ ತಪ್ಪನ್ನು ಮಾಡುತ್ತಿದೆ.

ಫ್ರಂಟ್ ಫೂಟ್ ಸಮಸ್ಯೆ

ಬ್ಯಾಟ್ಸ್‌ಮನ್ ಆಗಿ ನಾವು ಆಗಾಗ್ಗೆ ಆ್ಯಂಗಲ್ ಬದಲಿಸಿ ಆಡಲು ಪ್ರಯತ್ನಿಸುತ್ತೇವೆ. ಆದರೆ ಚೆಂಡು ಒಮ್ಮೊಮ್ಮೆ ಹೆಚ್ಚು ಟರ್ನ್​ ತೆಗೆದುಕೊಂಡರೆ ನಮಗೆ ಆ ಎಸೆತವನ್ನು ಆಡಲು ಕಷ್ಟವಾಗುತ್ತದೆ. ಆ ಸಮಯದಲ್ಲಿ ನಾವು ಡೀಪ್ ಇನ್​ ದ ಕ್ರೀಸ್​ನಲ್ಲಿ ನಿಂತು ಆಡಿದರೆ ಅಂತಹ ಎಸೆತಗಳನ್ನು ಎದುರಿಸುವುದು ಸುಲಭವಾಗುತ್ತದೆ. ಆದರೆ ನೀವು ಆ ಎಸೆತವನ್ನು ವೈಡ್ ಇನ್​ ದ ಕ್ರೀಸ್‌ನಲ್ಲಿ ನಿಂತು ಆಡಲು ಮುಂದಾದರೆ ಆಗ ಕಷ್ಟಕರವಾಗುತ್ತದೆ. ಹೀಗಾಗಿ ಬ್ಯಾಟರ್​ಗಳು ಅಂತಹ ಎಸೆತವನ್ನು ಫ್ರಂಟ್ ಫೂಟ್​ನಲ್ಲಿ ಎದುರಿಸುವ ಬದಲು ಬ್ಯಾಕ್‌ಫೂಟ್‌ನಿಂದ ಆಡುವ ಅವಶ್ಯಕತೆಯಿದೆ ಎಂದಿದ್ದಾರೆ.

ಗಿಲ್​ಗೆ ಬ್ಯಾಟಿಂಗ್ ಪಾಠ ಮಾಡಿದ ಗಂಭೀರ್

ಇನ್ನು ಗಿಲ್ ಸುಲಭವಾಗಿ ವಿಕೆಟ್ ಒಪ್ಪಿಸಿದ ಬಗ್ಗೆ ಟೀಕಿಸಿದ ಗಂಭೀರ್, ಚೆಂಡು ಕನಸಿನ ಎಸೆತದಂತೆ ತೋರುತ್ತಿದ್ದರೂ, ಗಿಲ್ ಅದನ್ನು ಮಿಡ್-ಆಫ್ ಕಡೆಗೆ ಅಥವಾ ಬೌಲರ್ ಕಡೆಗೆ ಆಡಬೇಕಾಗಿತ್ತು. ಆದರೆ ಗಿಲ್ ಹಾಗೆ ಮಾಡಲಿಲ್ಲ. ಗಿಲ್ ಆ ಚೆಂಡನ್ನು ಡಿಫೆಂಡ್ ಮಾಡಬಹುದಿತ್ತು. ಇದು ಆಡಲಾಗದ ಎಸೆತ ಎಂದು ನೀವು ಹೇಳಲು ಸಾಧ್ಯವಿಲ್ಲ. ಗಿಲ್ ಆ ಎಸೆತವನ್ನು ಹೇಗೆ ಎದುರಿಸಿದರು ಎಂಬುದನ್ನು ಒಮ್ಮೆ ನೋಡಿ. ಆ ಚೆಂಡನ್ನು ಎದುರಿಸುವಾಗ ಗಿಲ್ ಅವರ ಬ್ಯಾಟ್ ಮುಖ ಲೆಗ್ ಸೈಡ್ ಕಡೆಗೆ ಇತ್ತು. ಆದರೆ ಅಂತಹ ಎಸೆತಗಳ ವಿರುದ್ಧ, ನೀವು ಯಾವಾಗಲೂ ಮಿಡ್-ಆನ್ ಕಡೆಗೆ ಆಡಬೇಕು ಅಥವಾ ಬೌಲರ್ ಕಡೆಗೆ ಆಡಬೇಕು. ನೀವು ಮಿಡ್-ಆನ್‌ ಕಡೆಗೆ ಆ ಚೆಂಡನ್ನು ಆಡಲು ಯತ್ನಸಿದರೆ, ಆ ಚೆಂಡು ಬ್ಯಾಟ್​ನ ಅಂಚಿಗೆ ತಾಗಿ ಕ್ಯಾಚ್ ಆಗುವ ಸಂಭವ ಹೆಚ್ಚಿರುತ್ತದೆ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:07 am, Wed, 13 September 23

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ