Virat Kohli: ವಿರಾಟ್ ಕೊಹ್ಲಿಗೆ 3 ವರ್ಷ ನೀಡಿದಕ್ಕೆ ಶತಕ ಬಂತು: ಮತ್ತೆ ಕೊಂಕು ನುಡಿದ ಗಂಭೀರ್..!

Gautam Gambhir: ಈ ಹಿಂದೆ ವಿರಾಟ್ ಕೊಹ್ಲಿ ಫಾರ್ಮ್​ ಬಗ್ಗೆ ಟೀಕಿಸುತ್ತಿದ್ದ ಗೌತಮ್ ಗಂಭೀರ್ ಇದೀಗ ಅವರು ತಂಡದಲ್ಲಿದ್ದ ವರ್ಷಗಳನ್ನು ಪ್ರಸ್ತಾಪಿಸುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

Virat Kohli: ವಿರಾಟ್ ಕೊಹ್ಲಿಗೆ 3 ವರ್ಷ ನೀಡಿದಕ್ಕೆ ಶತಕ ಬಂತು: ಮತ್ತೆ ಕೊಂಕು ನುಡಿದ ಗಂಭೀರ್..!
Virat Kohli-Gambhir
Edited By:

Updated on: Sep 10, 2022 | 2:15 PM

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ವಿರುದ್ಧ ಕೇಳಿ ಬರುತ್ತಿದ್ದ ಎಲ್ಲಾ ಟೀಕೆಗಳಿಗೆ ಭರ್ಜರಿ ಶತಕದ ಮೂಲಕ ಉತ್ತರ ನೀಡಿದ್ದಾರೆ. ಅದು ಕೂಡ ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಎಂಬುದು ವಿಶೆಷ. ಇತ್ತ ಫಾರ್ಮ್​ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದವರನ್ನು ಕೂಡ ಈ ಬಾರಿಯ ಏಷ್ಯಾಕಪ್​ ಮೂಲಕ ಕಿಂಗ್ ಕೊಹ್ಲಿ ಬಾಯಿ ಮುಚ್ಚಿಸಿದ್ದಾರೆ. ಇದಾಗ್ಯೂ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಅವಲೋಕನ ಮಾತ್ರ ನಿಂತಿಲ್ಲ ಎಂಬುದು ವಿಶೇಷ. ಅಂದರೆ ಇದೀಗ ವಿರಾಟ್ ಕೊಹ್ಲಿಗೆ ತಂಡದಲ್ಲಿ ಮೂರು ವರ್ಷ ಸ್ಥಾನ ನೀಡಿದ್ದರ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಪ್ರಸ್ತಾಪಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೊಹ್ಲಿಗೆ ಸಿಕ್ಕಷ್ಟು ಅವಕಾಶಗಳು ಬೇರೆ ಯಾರಿಗೂ ಸಿಕ್ಕಿಲ್ಲ ಎಂದೇಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಗೆ ಮೂರು ವರ್ಷ ನೀಡಿದ್ದಾರೆ. ಆದರೆ ಬೇರೆ ಯಾರಿಗೂ ಇಷ್ಟೊಂದು ಅವಕಾಶ ಸಿಕ್ಕಿಲ್ಲ ಎಂದು ಗಂಭೀರ್ ಹೇಳಿದ್ದಾರೆ. ಮೂರು ವರ್ಷಗಳು ಬಹಳ ದೀರ್ಘ ಸಮಯ. ಇದು ಮೂರು ತಿಂಗಳಲ್ಲ. ನಾನು ಟೀಕಿಸುತ್ತಿಲ್ಲ, ಆದರೆ ಒಬ್ಬ ಯುವ ಬ್ಯಾಟ್ಸ್‌ಮನ್ ಮೂರು ವರ್ಷಗಳ ಕಾಲ ಶತಕ ಗಳಿಸದಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಕೊಹ್ಲಿ ಫಾರ್ಮ್​ಗೆ ಬರಬೇಕಿತ್ತು. ಇದೀಗ ಸರಿಯಾದ ಸಮಯಕ್ಕೆ ಫಾರ್ಮ್​ಗೆ ಮರಳಿದ್ದಾರೆ. ಏಕೆಂದರೆ ಟಿ20 ವಿಶ್ವಕಪ್ ಸಮೀಪದಲ್ಲಿದೆ. ಇದೇ ವೇಳೆ ಅವರು ಶತಕ ಬಾರಿಸಿದ್ದಾರೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಶತಕ ಬಾರಿಸದೇ ಬೇರೆ ಯಾರಿಗೂ ಮೂರು ವರ್ಷಗಳ ಕಾಲ ತಂಡದಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ. ಕೊಹ್ಲಿಗೆ ಅಷ್ಟೊಂದು ಚಾನ್ಸ್ ನೀಡಲಾಗಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಏಕೆಂದರೆ ಅಶ್ವಿನ್, ರಹಾನೆ, ರೋಹಿತ್, ಕೆಎಲ್ ರಾಹುಲ್ ಕಳಪೆ ಫಾರ್ಮ್ ಕಾರಣ ತಂಡವನ್ನು ತೊರೆಯಬೇಕಾಯಿತು. ಹಾಗೆಯೇ ಶತಕ ಬಾರಿಸದೆ ಮೂರು ವರ್ಷ ತಂಡದಲ್ಲಿದ್ದ ಬೇರೊಬ್ಬ ವ್ಯಕ್ತಿಯೂ ನನಗೆ ನೆನಪಿಲ್ಲ. ವಿರಾಟ್ ಕೊಹ್ಲಿಗೆ ಮಾತ್ರ ಆ ರೀತಿ ಅವಕಾಶ ನೀಡಲಾಗಿದೆ ಎಂದು ಗಂಭೀರ್ ಹೇಳಿದರು.

ಈ ಹಿಂದೆ ವಿರಾಟ್ ಕೊಹ್ಲಿ ಫಾರ್ಮ್​ ಬಗ್ಗೆ ಟೀಕಿಸುತ್ತಿದ್ದ ಗೌತಮ್ ಗಂಭೀರ್ ಇದೀಗ ಅವರು ತಂಡದಲ್ಲಿದ್ದ ವರ್ಷಗಳನ್ನು ಪ್ರಸ್ತಾಪಿಸುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಆದರೆ ವಿರಾಟ್ ಕೊಹ್ಲಿ ಶತಕ ಬಾರಿಸಿದಿದ್ದರೂ, 2021 ರಲ್ಲಿ ಟೀಮ್ ಇಂಡಿಯಾ ಪರ ಟಿ20 ಯಲ್ಲಿ ಅತ್ಯಧಿಕ ರನ್ ಬಾರಿಸಿದ 2ನೇ ಬ್ಯಾಟ್ಸ್​ಮನ್ ಆಗಿದ್ದರು. ಹಾಗೆಯೇ 2021 ರಲ್ಲಿ ಅತ್ಯಧಿಕ ರನ್ ಬಾರಿಸಿದ ಟೀಮ್ ಇಂಡಿಯಾದ 3ನೇ ಆಟಗಾರರಾಗಿ ಕಾಣಿಸಿಕೊಂಡಿದ್ದರು.

ಅಂದರೆ ವಿರಾಟ್ ಕೊಹ್ಲಿಯ ಬ್ಯಾಟ್​ನಿಂದ ಶತಕ ಮೂಡಿಬರದಿದ್ದರೂ 2019 ರಿಂದ 2021 ರವರೆಗೆ 30 ಪಂದ್ಯಗಳಲ್ಲಿ 9 ಟಿ20 ಅರ್ಧಶತಕ ಸಿಡಿಸಿ ಮಿಂಚಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ ಕಳೆದ ಮೂರು ವರ್ಷಗಳಲ್ಲಿ 51ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಆದರೆ ಇದ್ಯಾವುದನ್ನೂ ಪ್ರಸ್ತಾಪಿಸದೇ 3 ವರ್ಷಗಳಲ್ಲಿ ಶತಕ ಬಾರಿಸದೇ ತಂಡದಲ್ಲಿ ಸ್ಥಾನ ಪಡೆದಿದ್ದರು ಎನ್ನುವ ಮೂಲಕ ಗೌತಮ್ ಗಂಭೀರ್ ಮೊಸರಲ್ಲೂ ಕಲ್ಲು ಹುಡುಕುವ ಪ್ರಯತ್ನ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.