Cricket Records: ಒಂದೇ ದಿನ 2 ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಭಾರತೀಯ..!

Ranjit singh: ಮೊದಲ ಇನಿಂಗ್ಸ್​​ನಲ್ಲಿ 216 ರನ್‌ಗಳ ಹಿನ್ನಡೆ ಅನುಭವಿಸಿದ ಸಸೆಕ್ಸ್ ತಂಡಕ್ಕೆ ಯಾರ್ಕ್‌ಷೈರ್ ನಾಯಕ ಫಾಲೋ-ಆನ್ ನೀಡಿದರು.

Cricket Records: ಒಂದೇ ದಿನ 2 ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಭಾರತೀಯ..!
Maharaja Ranjit singh
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 10, 2022 | 12:05 PM

ಕ್ರಿಕೆಟ್​ ಇತಿಹಾಸದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಅದರಲ್ಲಿ ಆರಂಭಿಕ ದಿನಗಳ ಹೆಚ್ಚಿನ ದಾಖಲೆಗಳಿರುವುದು ಬ್ರಿಟಿಷರ ಹೆಸರಿನಲ್ಲಿ. ಇದಾದ ಬಳಿಕ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಆಟಗಾರರು ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದರು. ಆದರೆ ಬ್ರಿಷರರೊಂದಿಗೆ ಕಣಕ್ಕಿಳಿದು ಭಾರತೀಯ ಆಟಗಾರರೊಬ್ಬರು ಶತಮಾನಗಳ ಹಿಂದೆ ಶತಕದ ದಾಖಲೆ ಬರೆದಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ವಿಶೇಷ ಎಂದರೆ ಆ ಶತಮಾನದ ದಾಖಲೆಯನ್ನು ಕೂಡ ಯಾರಿಗೂ ಮುರಿಯಲು ಕೂಡ ಸಾಧ್ಯವಾಗಿಲ್ಲ.

ಅದು, 1896…ಭಾರತವು ಬ್ರಿಟಿಷರ ಕಪಿಮುಷ್ಠಿಯಲ್ಲಿತ್ತು. ಆಂಗ್ಲರ ನೆಚ್ಚಿನ ಕ್ರೀಡೆಯಾಗಿ ಭಾರತಕ್ಕೂ ಕ್ರಿಕೆಟ್ ಅದಾಗಲೇ ಕಾಲಿಟ್ಟಿತ್ತು. ಇತ್ತ ಭಾರತದ ರಾಜ ಮಹಾರಾಜರು ಕೂಡ ಹೊಸ ಕ್ರೀಡೆಯತ್ತ ಒಲವು ಹೊಂದಿದ್ದರು. ಅದರಲ್ಲೂ ಗುಜರಾತ್​ನ ನವನಗರದ ಯುವ ರಾಜಕುಮಾರ ರಂಜಿತ್‌ ಸಿಂಗ್​ ಇಂಗ್ಲೆಂಡ್​ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಈ ವೇಳೆ ಕ್ರಿಕೆಟ್​ ಅನ್ನು ಕೂಡ  ಸಹ ಕರಗತ ಮಾಡಿಕೊಂಡಿದ್ದರು.

ಇತ್ತ ಮಹಾರಾಜರಾಗಿ ನವನಗರ ಚುಕ್ಕಾಣಿ ಹಿಡಿದ್ದ ರಂಜಿತ್‌ ಸಿಂಗ್ ಅವರಿಗೂ ಕೂಡ ಬ್ರಿಟಿಷರ ತಂಡದಲ್ಲಿ ಅವಕಾಶ ಪಡೆದರು. ಅಷ್ಟೇ ಅಲ್ಲದೆ ಇಂಗ್ಲೆಂಡ್‌ನ ಕೌಂಟಿ ಸಸೆಕ್ಸ್ ಪರ ಆಡುತ್ತಿದ್ದರು. ಈ ತಂಡ ಯಾರ್ಕ್ ಶೈರ್ ವಿರುದ್ಧ ಪಂದ್ಯವೊಂದರಲ್ಲಿ ಕಣಕ್ಕಿಳಿದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಯಾರ್ಕ್‌ಷೈರ್ ತಂಡವು 407 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಕಠಿಣ ಗುರಿ ಪಡೆದ ಸಸೆಕ್ಸ್ ತಂಡದ ಪರ ಮೂರನೇ ದಿನ ರಂಜಿತ್ ಸಿಂಗ್ ಮೈದಾನಕ್ಕೆ ಇಳಿದಿದ್ದರು.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಒಂದೆಡೆಯಿಂದ ಸಸೆಕ್ಸ್ ತಂಡದ ವಿಕೆಟ್​ ಬೀಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಮಹಾರಾಜರು ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರಂಜಿತ್ ಸಿಂಗ್ ಯಾರ್ಕ್‌ಷೈರ್ ಬೌಲರ್‌ಗಳನ್ನು ಬೆಂಡೆತ್ತಿದರು. ಪರಿಣಾಮ ಮೊದಲ ಮೊದಲ ಇನಿಂಗ್ಸ್​​ನಲ್ಲಿ ಮಹಾರಾಜರು 100 ರನ್​ಗಳ ಭರ್ಜರಿ ಶತಕ ಬಾರಿಸಿ ಔಟಾದರು. ಅಲ್ಲದೆ ಸಸೆಕ್ಸ್ ತಂಡವು ಕೇವಲ 191 ರನ್‌ಗಳಿಗೆ ಆಲೌಟ್ ಆಯಿತು.

ಮೊದಲ ಇನಿಂಗ್ಸ್​​ನಲ್ಲಿ 216 ರನ್‌ಗಳ ಹಿನ್ನಡೆ ಅನುಭವಿಸಿದ ಸಸೆಕ್ಸ್ ತಂಡಕ್ಕೆ ಯಾರ್ಕ್‌ಷೈರ್ ನಾಯಕ ಫಾಲೋ-ಆನ್ ನೀಡಿದರು. ಅದರಂತೆ ಮತ್ತೆ 2ನೇ ಇನಿಂಗ್ಸ್​ ಆರಂಭಿಸಿದ ಸಸೆಕ್ಸ್ ಪರ ಬ್ಯಾಟ್ ಬೀಸಿದ ರಂಜಿತ್ ಸಿಂಗ್, ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. ವಿಶೇಷ ಎಂದರೆ ಮಹಾರಾಜರ ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 3ನೇ ದಿನದಾಟದ ಅಂತ್ಯದ ವೇಳೆ 2ನೇ ಇನಿಂಗ್ಸ್​ನಲ್ಲಿ ಸಸೆಕ್ಸ್ ತಂಡವು 2 ವಿಕೆಟ್ ನಷ್ಟಕ್ಕೆ 260 ರನ್​ ಕಲೆಹಾಕಿತು. ಅಲ್ಲದೆ 2ನೇ ಇನಿಂಗ್ಸ್​ನಲ್ಲಿ 125 ರನ್ ಗಳಿಸಿ ರಂಜಿತ್ ಸಿಂಗ್ ಅಜೇಯರಾಗಿ ಉಳಿದಿದ್ದರು. ಇದರೊಂದಿಗೆ ಒಂದೇ ದಿನದಲ್ಲಿ ಎರಡು ಶತಕ ಬಾರಿಸಿದ ವಿಶೇಷ ದಾಖಲೆಯೊಂದು ಮಹಾರಾಜರ ಪಾಲಾಯಿತು. ಅಲ್ಲದೆ ಆ ಪಂದ್ಯವನ್ನು ಸಸೆಕ್ಸ್ ತಂಡವು ಡ್ರಾನಲ್ಲಿ ಅಂತ್ಯಗೊಳಿಸಿತು.

ಅಂದಹಾಗೆ ಇಂದು ಒಂದೇ ದಿನ 2 ಶತಕ ಬಾರಿಸಿ ಶತಮಾನಗಳ ಈ ವಿಶ್ವ ದಾಖಲೆ ಬರೆದ ಮಹಾರಾಜ ರಂಜಿತ್ ಸಿಂಗ್ ಅವರ ಜನ್ಮದಿನ ಎಂಬುದು ವಿಶೇಷ. ಬ್ರಿಟಿಷರ ಕಾಲದಲ್ಲಿ ಒಟ್ಟು 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ಮಹಾರಾಜರು, 24.75 ರ ಸರಾಸರಿಯಲ್ಲಿ 594 ರನ್​ಗಳಿಸಿದ್ದರು. ಈ ವೇಳೆ ಅವರು 2 ಶತಕ ಬಾರಿಸಿದ್ದರು. ಒಂದೇ ದಿನ ಮೂಡಿಬಂದ ಈ ಶತಕವೇ ಇಂದಿಗೂ ವಿಶ್ವ ದಾಖಲೆಯಾಗಿ ಉಳಿದಿರುವುದು ವಿಶೇಷ.

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್