Gautam Gambhir Birthday: ವಿಶ್ವಕಪ್ ಹೀರೋ ಗೌತಮ್ ಗಂಭೀರ್​​ಗಿಂದು 40ನೇ ಹುಟ್ಟುಹಬ್ಬದ ಸಂಭ್ರಮ

TV9 Digital Desk

| Edited By: Vinay Bhat

Updated on: Oct 14, 2021 | 11:29 AM

Gautam Gambhir turns 40: ಮೈದಾನದ ಹೊರಗೂ ಅನೇಕ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ಗೌತಮ್ ಗಂಭೀರ್ ಅವರಿಗೆ ಟಿವಿ9 ಕನ್ನಡ ವೆಬ್​ಸೈಟ್ ಬಳಗದಿಂದ ಹುಟ್ಟುಹಬ್ಬದ ಶುಭಾಶಯಗಳು.

Gautam Gambhir Birthday: ವಿಶ್ವಕಪ್ ಹೀರೋ ಗೌತಮ್ ಗಂಭೀರ್​​ಗಿಂದು 40ನೇ ಹುಟ್ಟುಹಬ್ಬದ ಸಂಭ್ರಮ
ಗೌತಮ್ ಗಂಭೀರ್: ಈ ಪಟ್ಟಿಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್​ ಎಂದರೆ ಅದು ಗೌತಮ್ ಗಂಭೀರ್. ಪಾಕ್ ವಿರುದ್ದ ಟಿ20ಯಲ್ಲಿ ಗಂಭೀರ್ 139 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಕೂಡ ಮೂಡಿಬಂದಿದೆ. 2007ರ ಟಿ20 ಫೈನಲ್​ನಲ್ಲಿ ಗಂಭೀರ್ 54 ಎಸೆತಗಳಲ್ಲಿ 75 ರನ್ ಗಳಿಸಿದ ಪರಿಣಾಮ ಭಾರತ ಪಾಕ್​ಗೆ ಸ್ಪರ್ಧಾತ್ಮಕ ಗುರಿ ನೀಡಲು ಸಾಧ್ಯವಾಯಿತು. ಅದರಂತೆ ಅಂತಿಮ ಓವರ್​ನಲ್ಲಿ ಟೀಮ್ ಇಂಡಿಯಾ 5 ರನ್​ಗಳಿಂದ ಜಯಗಳಿಸಿ ಟ್ರೋಫಿ ಎತ್ತಿ ಹಿಡಿಯಿತು.

2007ರ ಚೊಚ್ಚಲ ಟಿ20 ವಿಶ್ವಕಪ್ (T20 World Cup) ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಹೀರೋ ಭಾರತದ ಮಾಜಿ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್​ಗೆ (Gautam Gambhir) ಇಂದು ಹುಟ್ಟುಹಬ್ಬದ ಸಂಭ್ರಮ. ಇವರಿಂದು 40ನೇ ವರ್ಷಕ್ಕೆ ಕಾಲಿರಿಸಿದ್ದಾರೆ. 2003ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಡೆಲ್ಲಿ ಆಟಗಾರ 58 ಟೆಸ್ಟ್, 147 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸಚಿನ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಸೌರವ್ (Sourav Ganguly) ಅವರಂತಹ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಸಂಖ್ಯೆಯ ತಾರೆಯರು ಇದ್ದಾಗ ರಾಷ್ಟ್ರೀಯ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.

ಭಾರತದ ತಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಅನೇಕ ಅವಿಸ್ಮರಣೀಯ ಇನಿಂಗ್ಸ್​ ಕಟ್ಟಿದ ಕೀರ್ತಿ ಗಂಭೀರ್​ಗೆ ಸಲ್ಲುತ್ತದೆ. 2011ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಬಾರಿಸಿದ 97 ರನ್ ಟೀಮ್ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಕಾಣಿಕೆ ನೀಡಿದರು.

2007ರ ಚೊಚ್ಚಲ ಟಿ20 ವಿಶ್ವಕಪ್ ಫೈನಲ್​ನಲ್ಲೂ ಪಾಕಿಸ್ತಾನದ ವಿರುದ್ಧ ಸಿಡಿಸಿದ್ದ 75 ರನ್​ಗಳ ಇನಿಂಗ್ಸ್ ಇಂದಿಗೂ ಕ್ರಿಕೆಟ್​ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಸಾಂಪ್ರಾದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ 75 ರನ್ ಸೇರಿದಂತೆ ಆಡಿರುವ ಏಳು ಇನ್ನಿಂಗ್ಸ್‌ಗಳಲ್ಲಿ 227 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಕಲೆ ಹಾಕಿದ್ದರು.

ಎರಡು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದ ಗೌತಮ್‌, 2016ರಲ್ಲಿ ಕೊನೆ ಬಾರಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡಿದ್ದರು. 2018ರ ಡಿಸೆಂಬರ್​ 4ರಂದು ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಆ ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ದೆಹಲಿ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸತ್​ ಪ್ರವೇಶಿಸಿದರು.

ತಮ್ಮ ಕೆರಿಯರ್‌ನಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಗೌತಮ್ ಗಂಭೀರ್, ವಿವಾದದಿಂದ ಹೊರತಾಗಿರಲಿಲ್ಲ. ಮೈದಾನದಲ್ಲೇ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಜತೆಗೆ ಜಟಾಪಟಿಯಲ್ಲಿ ಭಾಗಿಯಾಗಿದ್ದರು. ಬಳಿಕ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಜತೆಗೂ ವಾಗ್ವಾದದಲ್ಲಿ ಸಿಕ್ಕಿಬಿದ್ದಿದರು. ಇನ್ನು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜತೆ ವೈಮನಸ್ಸು ಹೊಂದಿದ್ದರು ಹಾಗೂ ತಂಡದಿಂದ ಹೊರಗಟ್ಟಲು ಅವರೇ ಕಾರಣ ಎಂಬುದನ್ನು ದೂರಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ್ದರು. ಟೆಸ್ಟ್‌ನಲ್ಲಿ 4154, ಏಕದಿನದಲ್ಲಿ 5238 ಹಾಗೂ ಟಿ20ನಲ್ಲಿ 932 ಸೇರಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10000 ರನ್ ಪೇರಿಸಿರುವ ಗಂಭೀರ್, ಭಾರತದ ಸಾರ್ವಕಾಲಿಕ ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿದ್ದಾರೆ. ಹಾಗೆಯೇ ಟೆಸ್ಟ್, ಏಕದಿನಗಳಲ್ಲಿ ಅನುಕ್ರಮವಾಗಿ 9 ಹಾಗೂ 11 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಾಧನೆಯನ್ನು ಮಾಡಿದ್ದಾರೆ.

ಮೈದಾನದ ಹೊರಗೂ ಅನೇಕ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ಗೌತಮ್ ಗಂಭೀರ್ ಅವರಿಗೆ ಟಿವಿ9 ಕನ್ನಡ ವೆಬ್​ಸೈಟ್ ಬಳಗದಿಂದ ಹುಟ್ಟುಹಬ್ಬದ ಶುಭಾಶಯಗಳು.

IPL 2021 Final CSK vs KKR: ಐಪಿಎಲ್ 2021 ಫೈನಲ್​ನಲ್ಲಿ ಸಿಎಸ್​ಕೆ-ಕೆಕೆಆರ್ ಕಾದಾಟ: ಯಾವ ತಂಡ ಬಲಿಷ್ಠ, ಪಂದ್ಯ ಎಲ್ಲಿ, ಪಿಚ್ ಹೇಗಿದೆ?

Team India jersey: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಟೀಮ್ ಇಂಡಿಯಾ ನೂತನ ಜರ್ಸಿ

(Gautam Gambhir turns 40 The former cricketer is celebrating his 40th birthday)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada