Team India jersey: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಟೀಮ್ ಇಂಡಿಯಾ ನೂತನ ಜರ್ಸಿ

Team India’s T20 World Cup jersey: ಟೀಮ್ ಇಂಡಿಯಾ ಹೊಸ ಜರ್ಸಿ ಅಧಿಕೃತ ಬಿಡುಗಡೆಯಾದ ಅದೇ ದಿನ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ (Burj Khalifa) ಪ್ರದರ್ಶಿಸಲಾಯಿತು.

Team India jersey: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಟೀಮ್ ಇಂಡಿಯಾ ನೂತನ ಜರ್ಸಿ
Team India New Jersey Indian cricket team new jersey displayed at the iconic Burj Khalifa
Follow us
TV9 Web
| Updated By: Vinay Bhat

Updated on: Oct 14, 2021 | 9:54 AM

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗೆ (ICC T20 World Cup) ದಿನಗಣನೆ ಶುರುವಾಗಿದೆ. ಇದೇ ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ಯುಎಇನಲ್ಲಿ (UAE) ಪುರುಷರ ಟಿ20 ವಿಶ್ವಕಪ್ ಟೂರ್ನಿ​ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಟೀಮ್​ ಇಂಡಿಯಾದ ಹೊಸ ಬ್ರ್ಯಾಂಡ್​ ಜರ್ಸಿಯನ್ನು (Team India New Jersey) ಬುಧವಾರ ಅನಾವರಣಗೊಳಿಸಿದೆ. ಅಭಿಮಾನಿಗಳ ಬಿಲಿಯನ್ ಚಿಯರ್ಸ್​ನಿಂದ ಸ್ಫೂರ್ತಿಗೊಂಡು​ ಬಿಲಿಯನ್​ ಚಿಯರ್ಸ್​ ಜರ್ಸಿ ಅನ್ನು ನಾವು ಪ್ರಸ್ತುತ ಪಡಿಸಿದ್ದೇವೆ ಎಂದು ಟ್ವೀಟ್​ ಮಾಡಿರುವ ಬಿಸಿಸಿಐ, ಚಿತ್ರದಲ್ಲಿ ನಾಯಕ ವಿರಾಟ್‌ ಕೊಹ್ಲಿ (Virat Kohli), ರೋಹಿತ್‌ ಶರ್ಮ (Rohit Sharma), ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ ಮತ್ತು ಕೆ.ಎಲ್‌. ರಾಹುಲ್‌ (KL Rahul) ಈ ಹೊಸ ಜೆರ್ಸಿಯನ್ನು ಧರಿಸಿ ನಿಂತಿದ್ದಾರೆ. ಪಂದ್ಯಾವಳಿಗೆ ಮೊದಲು ಟೀಮ್ ಇಂಡಿಯಾ ಕ್ರಮವಾಗಿ ಅಕ್ಟೋಬರ್ 18 ಮತ್ತು 20 ರಂದು ನಿಗದಿಯಾಗಿರುವ ವಾರ್ಮ್-ಅಪ್ (warm up) ಪಂದ್ಯಗಳ ಸಮಯದಲ್ಲಿ ಜರ್ಸಿಯನ್ನು ಧರಿಸಲಿದೆ.

ಇದು ಹಳೆಯ ಜೆರ್ಸಿಗಿಂತ ಸ್ವಲ್ಪ ಭಿನ್ನವಾಗಿದೆ. ಇದುವರೆಗೂ ಟೀಮ್‌ ಇಂಡಿಯಾ ಕ್ರಿಕೆಟಿಗರು ಕಡು ನೀಲಿ ಬಣ್ಣದ ಜೆರ್ಸಿ ಧರಿಸುತ್ತಿದ್ದರು. ಇಲ್ಲಿಯೂ ಕಡುನೀಲಿ ಬಣ್ಣವಿದ್ದು, ಜೆರ್ಸಿಯ ಮಧ್ಯದಲ್ಲಿ ತಿಳಿ ನೀಲಿ ಪಟ್ಟಿಯನ್ನೂ ನೀಡಲಾಗಿದೆ. ಹಿಂದಿನ ಜೆರ್ಸಿಯ ಭುಜದ ಮೇಲೆ ತ್ರಿವರ್ಣ ಇತ್ತು. ಆದರೆ ಈ ಜೆರ್ಸಿಗೆ ಭುಜದ ಮೇಲೆ ಯಾವುದೇ ವಿನ್ಯಾಸವಿಲ್ಲ. ವಿಶೇಷವೆಂದರೆ, 1992ರ ವಿಶ್ವಕಪ್​ ಸಮಯದಲ್ಲಿ ಟೀಮ್​ ಇಂಡಿಯಾ ಧರಿಸಿದ್ದ ಜರ್ಸಿಗೆ ಪ್ರಸ್ತುತ ಜರ್ಸಿ ಹೋಲಿಕೆಯಾಗಿದೆ.

ಹೊಸ ಜರ್ಸಿಯನ್ನು ಟೀಮ್​ ಇಂಡಿಯಾದ ಅಧಿಕೃತ ಪ್ರಾಯೋಜಕರಾಗಿರುವ ಎಂಪಿಎಲ್​ ಸ್ಫೋರ್ಟ್ಸ್​ ಉದ್ಘಾಟಿಸಿದೆ. ‘ಇದು ಕೇವಲ ಒಂದು ತಂಡ ಮಾತ್ರವಲ್ಲ, ಭಾರತದ ಹೆಮ್ಮೆ. ಇದು ಕೇವಲ ಜರ್ಸಿ ಮಾತ್ರವಲ್ಲ, ಬಿಲಿಯನ್​​ ಅಭಿಮಾನಿಗಳ ಆಶೀರ್ವಾದ. ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾವನ್ನು ಹುರಿದುಂಬಿಸಲು ಸಿದ್ಧರಾಗಿ’ ಎಂದು ಎಂಪಿಎಲ್​ ಟ್ವೀಟ್​ ಮಾಡಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ‘ಭಾರತೀಯ ಕ್ರಿಕೆಟ್ ತಂಡವು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಬೆಂಬಲವನ್ನು ಹೊಂದಿದೆ, ಮತ್ತು ಅವರ ಉತ್ಸಾಹ ಮತ್ತು ಶಕ್ತಿಯನ್ನು ಆಚರಿಸಲು ಜರ್ಸಿಗಿಂತ ಉತ್ತಮ ಮಾರ್ಗವಿಲ್ಲ’ ಎಂದು ಹೇಳಿದ್ದಾರೆ.

ಇನ್ನೂ ಟೀಮ್‌ ಇಂಡಿಯಾದ ನೂತನ ಜೆರ್ಸಿಯನ್ನು ಅಭಿಮಾನಿಗಳೂ ಖರೀದಿಸಬಹುದಾಗಿದೆ. ಇದರಲ್ಲಿ ಆಟಗಾರರ ಮತ್ತು ನಾಯಕ ವಿರಾಟ್‌ ಕೊಹ್ಲಿಯ 18 ನಂಬರ್‌ ಜೆರ್ಸಿಯೂ ಒಳಗೊಂಡಿದೆ. ಜೆರ್ಸಿಯ ಬೆಲೆ 1,799 ರೂ. ಎಂಪಿಎಲ್‌ ನ್ಪೋರ್ಟ್ಸ್.ಇನ್‌ನಲ್ಲಿ ಜೆರ್ಸಿ ಲಭ್ಯವಿದೆ.

Rishabh Pant: ಫೈನಲ್​ಗೇರಲು ಡೆಲ್ಲಿ ವಿಫಲ: ಕೆಕೆಆರ್ ವಿರುದ್ಧ ಸೋತ ಬಳಿಕ ರಿಷಭ್ ಪಂತ್ ಏನಂದ್ರು ಕೇಳಿ

KKR vs DC, IPL 2021 Qualifier 2: 7 ರನ್ ಅಂತರದಲ್ಲಿ ಕೆಕೆಆರ್​ನ 6 ವಿಕೆಟ್ ಪತನ: ಆದರೂ ಗೆಲ್ಲಲಿಲ್ಲ ಡೆಲ್ಲಿ: ಚೊಚ್ಚಲ ಪ್ರಶಸ್ತಿಯ ಕನಸು ಮತ್ತೆ ಭಗ್ನ

(Team India New Jersey Indian cricket team new jersey displayed at the iconic Burj Khalifa)

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!